Month 9
ಸಾನ್ವಿಯ ಸಾಗರೋಲ್ಲಂಘನ !
ಭರತಖಂಡದಲ್ಲಿ ಈಗ ಸಾನ್ವಿಯ ಆಗಮನ..
ಮೊದಲ ವಿಮಾನಯಾನದಲ್ಲಿ ಏನೂ ಗಲಾಟೆ ಮಾಡದೇ, ಆರಾಮವಾಗಿ ಆಟವಾಡಿಕೊಂಡಿದ್ದಳು. ವಿಮಾನದಲ್ಲಿದ್ದವರಿಗೆ ಮುಗುಳ್ನಗೆ ಬೀರುತ್ತಾ, ಬಹಳಷ್ಟು ಜನ ನಮ್ಮ ಆಸನದ ಹತ್ತಿರ ನಿಂತು ಹೋಗುವಂತೆ ಮಾಡಿದಳು.
ಭಾರತದಲ್ಲಿ ಇಳಿದಾಗ ವಿಮಾನ ನಿಲ್ದಾಣದಲ್ಲಿ ಸಾನ್ವಿ ಬರಮಾಡಿಕೊಳ್ಳಲು ೨ ಡಜನ್ ಜನ ಬಂದಿದ್ದರು. ಅವರೆಲ್ಲರು ಸಾನ್ವಿಯನ್ನು ಇದೇ ಮೊದಲ ಸಲ ನೋಡುತ್ತಿದ್ದರು. ಮೊದಲ ಸಲ ಅವರೆಲ್ಲರನ್ನು ನೋಡುತ್ತಿದ್ದ ಸಾನ್ವಿ ಸ್ಪಲ್ಪ ಗಾಭರಿಗೊಂಡಿದ್ದಳು, ನಂತರ ಸ್ಪಲ್ಪ ಸಮಯದಲ್ಲಿ ಎಲ್ಲರ ಜೊತೆ ಆಟವಾಡತೊಡಗಿದಳು.
ಮೊದಲ ಬಾರಿಗೆ ಆಟೋರಿಕ್ಷಾದಲ್ಲಿ ಹೋಗುವಾಗ, ಸಾನ್ವಿಗೆ ಎನೋ ಖುಷಿ. ಥೀಮ್ ಪಾರ್ಕ್ ರೈಡ್‍ನಲ್ಲಿ ಕೂಗುವಂತೆ, ಸಾನ್ವಿ ಆಟೋದಲ್ಲಿ ಕೇಕೆ ಹಾಕುತ್ತಿದ್ದಳು ! ಪಕ್ಕದಲ್ಲಿ ಹಾರ್ನ್ ಮಾಡುತ್ತಾ ಓಡುವ ಆಸಂಖ್ಯಾತ ವಾಹನಗಳನ್ನು ಕುತೂಹಲದಿಂದ ನೋಡುತ್ತಿದ್ದಳು.
ಪ್ರತಿದಿನವೂ ಸಾನ್ವಿ ನೋಡಲು ನೆಂಟರು-ಗೆಳೆಯರು ಬರುತ್ತಿರುತ್ತಾರೆ.
ಹೊಸ ವಾತಾವರಣ, ಹೊಸ ಮುಖಗಳ ನಡುವೆ ಹೊಂದಿಕೊಳ್ಳುವ ಯತ್ನದಲ್ಲಿ ಇದ್ದಾಳೆ.
Saanvi crossed the oceans and she is in India !
She was pretty relaxed in her first flight and was in playful mood. She was smiling at co-passengers on the flight and made many of them to stand at our seats.
Atleast 2 dozen people had come to airport to receive her. All of them were seeing Saanvi for the first time. Saanvi was initially terrified but soon started playing with everybody.
After some days, her first ride in Autorickshaw was fun. She was shouting with joy as if she is in a theme park ride during the auto ride ! She was curiously watching all the hundreds of vehicles around that were honking and running.
There are friends and family that come almost everyday to visit Saanvi.
Saanvi is trying to adopt to the new faces and new conditions.
*******************************************
Month 10
ನಮಸ್ಕಾರ ಎಂದೊಡನೆ ಎರಡು ಕೈಮುಗಿದು ನಮಸ್ಕರಿಸುತ್ತಾಳೆ.
ದೇವರ ಕೋಣೆ ನೋಡಿದಾಗ ನಮಸ್ಕಾರ ನಡೆಯುತ್ತೆ.
ಕುಕ್ಕರ್ ವಿಷಲ್ ಮಾಡುವುದನ್ನು ನೋಡಿ, ಆ ವಿಷಲ್ ಧ್ವನಿ ಅನುಕರಣೆ ಮಾಡಿ ಬಾಯಿಯಿಂದ ಗಾಳಿಯೂದುತ್ತಾಳೆ.
ಚಪ್ಪಾಳೆ ಎಂದೊಡನೆ ಎರಡು ಕೈ ತಟ್ಟಿ ಚಪ್ಪಾಳೆ ಬಾರಿಸುತ್ತಾಳೆ.ಗುಡ್ ಜಾಬ್ ಅಂದಾಗ ಚಪ್ಪಾಳೆ ಹೊಡೆಯುತ್ತಾಳೆ.
ಬಾಗಿಲಿನಿಂದ ಹೊರಗೆ ಹೋಗುವವರಿಗೆಲ್ಲಾ ಕೈ ಬೀಸಿ ಟಾ ಟಾ ಮಾಡುತ್ತಾಳೆ.
ಬೈಕಿನಲ್ಲಿ ಕುಳಿತು ತಿರುಗಾಡುವುದು ಸಿಕ್ಕಾಪಟ್ಟೆ ಇಷ್ಟದ ಕೆಲಸ.
ಮಕ್ಕಳೆಂದರೆ ವಿಪರೀತ ಖುಷಿ. ನೋಡಿದ ಮಕ್ಕಳಿಗೆಲ್ಲಾ ಬಾ ಬಾ ಎಂದು ಕರೆಯುತ್ತಾಳೆ.
Saanvi has learnt to do 'Namaskara' by folding both hands. When she sees the worship room, she automatically does Namasakara.
Initially she was terrified of cooker whistle sound. Now she got used to it and even learnt to imitate it. She blows air when we ask how cooker blows whistle !
She probably understands what clapping is. When we ask to clap, she will start clapping. Curious thing was she starts to clap hands when we say 'good job' !
She waves hands at everybody going out of door.
Loves roaming around on the bike.
Likes the kids a lot and calls every kid she sees.
**************************************
Month 11
ಆಮ್ಮ, ಪಾ, ಬಾ, ಭಾ ಎಂದು ಕರೆಯುವುದಕ್ಕೆ ಶುರುಮಾಡಿದ್ದಾಳೆ.
ಅಂಗಾತ ಮಲಗಿದಾಗಿನಿಂದ ಕೈಯೂರಿ ಎದ್ದು ಒಬ್ಬಳೇ ಕುಳಿತುಕೊಳ್ಳುತ್ತಾಳೆ.
ಮೂಗು ಯಾವುದು ಎಂದು ಕೇಳಿದರೆ ತೋರಿಸುತ್ತಾಳೆ, ಹಾಗೆಯೇ ಗೋಡೆಯ ಮೇಲಿನ ಮಂಗನ ಚಿತ್ರ ಕೇಳಿದಾಗಲೂ ತೋರಿಸುತ್ತಾಳೆ.
ಯಾರಾದರೂ ಥ್ಯಾಂಕ್ಸ್ ಕೊಡುವುದಕ್ಕೆ ಕೈ ಚಾಚಿದರೆ, ತನ್ನ ಕೈ ಚಾಚಿ ಥ್ಯಾಂಕ್ಸ್ ನೀಡುತ್ತಾಳೆ.
ಹೊರಗೆ ಓಡಾಡುವ ನಾಯಿಗಳನ್ನು ಆಸಕ್ತಿಯಿಂದ ನೋಡಿ, ಅವುಗಳನ್ನು ಬಾ ಬಾ ಎಂದು ಕರೆಯುವುದನ್ನು ಕಲಿತಿದ್ದಾಳೆ.
ಹ್ಯಾಂಡ್ಸ್ ಅಪ್-ಡೌನ್ ಮಾಡುವುದು ಇನ್ನೊಂದು ಹೊಸ ಕಲಿಕೆ.
Saanvi has started to say 'amma',pa,ba,bha !
She pulls her up from sleeping position and sits.
Shows the nose when asked. Also recognizes the picture of monkey on the wall.
She extends her hands for thanks giiving.
She watches the dogs with curiosity and often waves at them to call.
Doing hands up-down is another new trick she has learnt.