Sunday, January 30, 2011

ಅಡುಗೆ ಮನೆ


ಒಗ್ಗರಣೆ ಹಾಕುವಾಗ ಚಟಪಟ ಸದ್ದು
ಸೌಟು ಮಾಡುವ ಸೊರಸೊರ ಶಬ್ದ
ಸಾರು ಕುದಿಯುವಾಗ ಕೊತಕೊತ
ಸಾನ್ವಿಗೆ ನೋಡಲು ಬಲು ಇಷ್ಟ

ಮಿಕ್ಸರ್ ತಿರುವಾಗ ಗೊರಗೊರ ಶಬ್ದ
ಒವೆನ್ ಬಿಸಿಯಾಗುವಾಗ ಸರ್‌ಸರ್ ಶಬ್ದ
ಪಾತ್ರೆ ಬಿದ್ದಾಗ ಟಳ್‍ಟಳ್
ಸಾನ್ವಿ ತಟ್ಟನೆ ಬೆದರುವಳು ಇಲ್ಲೇ

ನೀರು ಬೀಳುವ ಸೀಳ್‍ಸೀಳ್ ಸದ್ದು
ತರಕಾರಿ ಹೆಚ್ಚುವಾಗ ಕಟ್‍ಕಟ್ ಶಬ್ದ
ಬೇಳೆ ಹಾಕುವಾಗ ಟಕ್‍ಟಕ್
ಸಾನ್ವಿಗೆ ಕೇಳಲು ಬಲು ಇಷ್ಟ

ಚಪಾತಿ ಉದ್ದುವಾಗ ಲೊಟಲೊಟ ಸದ್ದು
ದೋಸೆ ಹೊಯ್ಯುವಾಗ ಚುಯ್‍ಚುಯ್ ಶಬ್ದ
ಏಳುವ ಬಿಸಿಬಿಸಿ ಹೊಗೆ
ಸಾನ್ವಿ ಕಣ್ಣು ಅರಳುವ ಬಗೆ

ಅಡುಗೆ ಮನೆಯ ನೋಟ ಶಬ್ದ
ಯಾವಾಗ ಹೊಕ್ಕರು ನಿಲ್ಲದ ಅಚ್ಚರಿ
ಮಾಡುವುದು ವಿಸ್ಮಯ ಸೊಬಗು
ಸಾನ್ವಿಗೆ ಅದೊಂದು ಬಣ್ಣದ ಬೆರಗು

12 comments:

  1. where do you get these thoughts from? :)

    ReplyDelete
  2. ಮಕ್ಕಳ ಕುತೂಹಲ ಭರಿತ ಮುಖವನ್ನು ನೋಡಲು ತು೦ಬಾ ಚೆ೦ದ..
    ಸಾನ್ವಿಯ ಕುತೂಹಲಭರಿತ ಭಾವನೆಗಳನ್ನು ಚೆನ್ನಾಗಿ ಮೂಡಿಸಿದ್ದೀರಿ.

    ReplyDelete
  3. ಮಹಾಂತೇಶ್
    ಧನ್ಯವಾದಗಳು :)

    ReplyDelete
  4. Rich,
    Its what I see everyday with Saanvi..
    Trying to see things through her eyes :)

    ReplyDelete
  5. ಮನಮುಕ್ತಾ,
    ನಿಮ್ಮ ಮೆಚ್ಚುಗೆಗೆ ವಂದನೆಗಳು.

    ReplyDelete
  6. ಸಾನ್ವಿಯ ಕಣ್ಣುಗಳಿಂದ ಜಗತ್ತಿನ ಬೆರಗನ್ನು ನಮಗೆ ಪರಿಚಯ ಮಾಡಿಸುತ್ತಿರುವ ನಿಮಗೆ ಧನ್ಯವಾದಗಳು.ಸೂಪರ್!

    ReplyDelete
  7. ಸಾನ್ವಿ ಗೆ ಐದು ತಿಂಗಳು ಸುತ್ತಲಿನ ಶಬ್ದಗಳು, ನಡೆಯುವ ಚಟುವಟಿಕೆಗಳು ಮಗುವಿಗೆ ಅಚ್ಚರಿ ಹುಟ್ಟಿಸುತ್ತವೆ , ಮಗುವಿಗೆ ಶುಭವಾಗಲಿ.
    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  8. ಕೃಷ್ಣಮೂರ್ತಿ ಸರ್,
    ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ :)

    ReplyDelete
  9. ಬಾಲು ಅವರೇ,
    ನಿಮ್ಮ ಆಶಯಕ್ಕೆ ಧನ್ಯವಾದಗಳು.

    ReplyDelete
  10. makkalatavu chenda.... janapadigarinda hididu namma nimmellarannuu seleda sujigallugallendare...."magu" "nagu" ... maguvannu pritisada janagale illaa. chendada kavana

    ReplyDelete
  11. ಚಂದ್ರಿಕಾ ಅವರೇ,
    ಸಾನ್ವಿ ಬ್ಲಾಗಿಗೆ ಸ್ವಾಗತ !
    ನಿಮ್ಮ ಆಪ್ತಮಾತುಗಳಿಗೆ ನಮನ.

    ReplyDelete