Saturday, January 8, 2011

Month Five

The rabbit hops around the house and Saanvi sitting in rabbit's arms starts giggling.

Rabbit hop is one of the many things which makes Saanvi laugh. Rabbits are us and she love hopping carrying her.

Things like pretending to fall or even sneezing is making her giggle.

Surest thing to put a smile on her face is the mirror.

Anytime she is taken near the mirror, she smiles at her own image. Sometimes she even says something to her image.

Saanvi enjoyed the new toys & dress for Christmas. She roamed in christmas in the park celebration. Met Santa.

On New year day, she visited the temple in new dress.

And Saanvi turned over on her own !  Now she gets on her tummy without any pushing and looks around laying on tummy.

ಮೊಲ ಮನೆ ತುಂಬಾ ಕುಪ್ಪಳಿಸುತ್ತಿದ್ದರೆ, ಮೊಲದ ಕೈಯಲ್ಲಿ ಕುಳಿತ ಸಾನ್ವಿಗೆ ಖುಷಿಯೋ ಖುಷಿ.

ಸಾನ್ವಿ ನಗಿಸಲು ಮೊಲದ ಆಟವೊಂದು ವಿಧಾನ. ನಾವೇ ಮೊಲವಾಗಿ ನೆಗೆಯುತ್ತಿದ್ದರೆ ಕಿಲಿಕಿಲಿ ನಗು ಸಾನ್ವಿಗೆ.

ಸುಮ್ಮನೆ ಬೀಳುವಂತೆ ಮಾಡುವುದು ಸಹ ನಗು ತರಿಸುತ್ತೆ.

ಖಂಡಿತವಾಗಿ ಸಾನ್ವಿಯ ಅಚ್ಚುಮೆಚ್ಚಿನ ವಸ್ತು - ಕನ್ನಡಿ.

ಯಾವಾಗ ಕನ್ನಡಿಯ ಮುಂದೆ ಇದ್ದರೂ, ತನ್ನ ಬಿಂಬವನ್ನು ತಾನೇ ನೋಡಿಕೊಂಡು ನಗುವುದು ಖಂಡಿತ. ಕೆಲವೊಮ್ಮೆ ತನ್ನ ಬಿಂಬಕ್ಕೆ ಏನೋ ಹೇಳುವ ಪ್ರಯತ್ನವೂ ನಡೆಯುವುದು.

ಕ್ರಿಸ್ಮಸ್‍ಗೆ ಹೊಸ ಬಟ್ಟೆ ಮತ್ತು ಬೊಂಬೆಗಳು ಸಾನ್ವಿಗೆ ಹಾಜರಾದವು. ಸಂತಾ ಕ್ಲಾಸ್ ಭೇಟಿ ಸಹ ಆಯ್ತು. ಹಾಗೆಯೇ ’ಕ್ರಿಸ್ಮಸ್ ಇನ್ ದ ಪಾರ್ಕ್’ ನಲ್ಲಿ ಸುತ್ತಾಟವೂ ನಡೆಯಿತು.

ಹೊಸ ವರ್ಷದ ದಿನ ಹೊಸ ವಸ್ತ್ರದಲ್ಲಿ ಸಾನ್ವಿ ದೇವಾಲಯಕ್ಕೆ ಹೋಗಿದ್ದಳು.

ಅಂದಾಗೆ, ಸಾನ್ವಿ ಹೊಸ ವರ್ಷದ ದಿನ ಯಾವ ಸಹಾಯವಿಲ್ಲದೆ ಮಗುಚಿಕೊಂಡಳು. ಈಗ ಮಗುಚಿಕೊಂಡು ಹೊಟ್ಟೆಯ ಮೇಲೆ ಮಲಗಿ ಸುತ್ತಲೂ ನೋಡುವ ಕೆಲಸ.

18 comments:

  1. hmm.. saanvi puttiya rabit jotegena atotavannu nammondigu hanchikondiddakke danyavadagalu sir..

    shubhavagali.....

    hi saanvi putti.. cute agidale photodalli...

    ReplyDelete
  2. ಸಾನ್ವಿಗೆ ಹಾಗು ನಿಮಗೆ ಹೊಸವರ್ಷದ ಶುಭಾಶಗಳು ,ಹೊಸವರ್ಷದಲ್ಲಿ ಹೊಸ ಹುರುಪಿನಿಂದ ಹೊಸ ಆಟಗಳ ಕಲಿತು ,ಮುದ್ದು ಮುದ್ದಾಗಿ ಕೈಗೆ ಸಿಕ್ಕ ವಸ್ತುಗಳನ್ನು ಕೆಳಕ್ಕೆ ಬೀಳಿಸಿ ,ನಕ್ಕು ,ಪಾಪ ಮಗು ಬೀಳಿಸಿತು ಅಂತಾ ತೆಗೆದುಕೊಟ್ಟರೆ ಮತ್ತೊಮ್ಮೆ ಪಡೆ ಪಡೆ ಬೀಳಿಸಿ ನಕ್ಕಿ ಬಿಡುವ ಆ ಮುಗ್ಧ ನಗೆ ಯಾರನ್ನು ಸೆಳೆಯೋಲ್ಲಾ ಹೇಳಿ? ಹೊಸವರ್ಷದಂದು ಮಗುಚಿಕೊಂಡು ಹೊಟ್ಟೆಯ ಮೇಲೆ ಭಾರಹಾಕಿಸುತ್ತಲೂ ಗಿರ್ಕಿ ಹೊಡೆಯುವ ಪರಿ ಮಜಾ ತರುತ್ತೆ. ಮತ್ತೊಮ್ಮೆ ಸಾನ್ವಿ ಹಾಗು ಎಲ್ಲರಿಗೂ ಶುಭಾಶಯಗಳು.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  3. puTTige namma kaDeyinda ondu drusTi boTTu iDi meDam. puTTi muddaagiddaaLe.

    ReplyDelete
  4. ತರುಣ್,

    ನಿಮ್ಮ ಪ್ರೀತಿಯ ಮೆಚ್ಚುಗೆಗೆ ವಂದನೆಗಳು.

    ReplyDelete
  5. ಬಾಲು,
    ನಿಮ್ಮ ಮಾತುಗಳು ನಿಜ.
    ನಿಮ್ಮ ಮುದ್ದಾದ ಪ್ರತಿಕ್ರಿಯೆ ಇಷ್ಟವಾಯ್ತು.

    ReplyDelete
  6. ಬದರಿನಾಥ್,
    ಧನ್ಯವಾದಗಳು ಸಾರ್ :)

    ReplyDelete
  7. ಮೊದಲು ಮಗುಚಿಕೊಳ್ಳುವುದು, ಆಮೇಲೆ ಕೈ ತೆಗೆದುಕೊಳ್ಳಲಾಗದೆ ಅಳುವುದು. ಒಂದೆರಡು ದಿನಗಳಲ್ಲಿ ಕೈ ತೆಗೆದುಕೊಂಡು ಮುಂದೆ ಹೋಗಲು ಪ್ರಯತ್ನಿಸಿ ಅಳುವುದು. ಇನ್ನು ಮೂರ್ನಾಲ್ಕು ದಿನಗಳಲ್ಲಿ ನಿಧಾನವಾಗಿ ಮುಂದೆ ಹೋಗಲು ಪ್ರಯತ್ನಿಸಿ, ಹಿಂದೆ ಹೋಗುವುದು (ಸಾಮಾನ್ಯವಾಗಿ ಎಲ್ಲಾ ಮಕ್ಕಳು ಹಿಂದೆ ಹೋಗಿ, ಮುಂದೆ ಹೋಗಲು ಕಲಿಯುವುದು ವಿಶೇಷ)..ಹೀಗೇ ಒಂದೊಂದು ದಿನವೂ ಕುತೂಹಲಕರ. ಅನುಭವಿಸಿ, ಆನಂದಿಸಿ. ಸಾನ್ವಿಯ ಬಾಲ್ಯ, ನನ್ನ ಮಗನ ಬಾಲ್ಯವನ್ನು ನೆನಪಿಸುತ್ತಿದೆ.

    ReplyDelete
  8. ಬಾಲು ಮತ್ತು ವಿದ್ಯಾ ಅವರು ಹೇಳಿದಂತೆ ಒಂದೊಂದು ದಿನವೂ ಹೊಸತನದಿಂದ ಕೂಡಿರುತ್ತೆ. ಸಾನ್ವಿಯ ಆಟಗಳನ್ನು ಓದುತ್ತಾ ಪುಟ್ಟಿಯ ’ಆ’ ದಿನಗಳ ನೆನಪಾದವು. ಬೋರಲು ಬಿದ್ದು ಕತ್ತೆತ್ತಿ ನೋಡುತ್ತಿರುವ ಚಿತ್ರ ಭಲೇ ಮುದ್ದಾಗಿರುತ್ತೆ!
    ಸಾನ್ವಿಯ ತುಂಬು ಕೆನ್ನೆಗಳಿಗೆ ನನ್ನದೊಂದು ಮುತ್ತು ಕೊಟ್ಟುಬಿಡಿ:)

    ReplyDelete
  9. ಸರ್,
    ಮೊದಲಿಗೆ ಹೊಸ ವರ್ಷದ ಶುಭಾಶಯಗಳು. ನಿಮ್ಮ ಮುದ್ದಾದ ಮಗುವಿನ ಆಟಪಾಟಗಳ ಬಗ್ಗೆ ಚೆನ್ನಾಗಿ ಬರೆದಿದ್ದೀರಿ.ಮಗುವಿನ ಆಟಗಳನ್ನು ನೋಡುವುದರಲ್ಲಿ ಎಂಥ ಆನಂದ ಅಲ್ವಾ...
    ಸೊಗಸಾದ ಬರಹಕ್ಕಾಗಿ ಧನ್ಯವಾದಗಳು.

    ReplyDelete
  10. ವಿದ್ಯಾ,
    ಮುನ್ನೋಟಕ್ಕಾಗಿ ವಂದನೆಗಳು :)

    ReplyDelete
  11. ದಿನಕರ್,
    ಬಹುದಿನಗಳ ನಂತರ ತಮ್ಮ ಭೇಟಿ..
    ನಿಮಗೂ ಹೊಸ ವರ್ಷದ ಶುಭಾಶಯಗಳು.

    ReplyDelete
  12. ರೂಪಾ,
    ನಿಮ್ಮ ಮುದ್ದಾದ ಪ್ರತಿಕ್ರಿಯೆಗೆ ಧನ್ಯವಾದಗಳು !
    ಸಾನ್ವಿಗೆ ಇಷ್ಟವಾಯ್ತು ನಿಮ್ಮ ಕೆನ್ನೆ ಉಡುಗೊರೆ :)

    ReplyDelete
  13. ಶಿವು,

    ಬಹಳ ದಿನಗಳ ನಂತರ ತಮ್ಮ ಆಗಮನ..
    ಹೊಸ ವರ್ಷದ ಶುಭಾಶಯಗಳು !
    ನಿಮ್ಮ ಪ್ರತಿಕ್ರಿಯೆಗೆ ವಂದನೆ.

    ReplyDelete
  14. ದಿನೇ ದಿನೇ ಸಾನ್ವಿಯ ಚಟುವಟಿಕೆ ಜಾಸ್ತಿಯಾಗುತ್ತಿದೆ ಅಲ್ಲವೆ? ಸಾನ್ವಿಯ ಅನೇಕ ಗೋಷ್ಟಿಗಳನ್ನು ತಿಳಿಯಾಗಲಿಲ್ಲ. ಓದುತ್ತೇನೆ..
    ನಿಮಗೆಲ್ಲರಿಗೂ ಹೊಸ ವರ್ಷದ ಹಾಗೂ ಮಕರ ಸ೦ಕ್ರಾ೦ತಿಯ ಶುಭಾಶಯಗಳು.

    ReplyDelete
  15. ನಿಮಗೆ ಹಾಗು ದಿನ ದಿನವೂ ಹೊಸಹೊಸ ಕಲಿಕೆಯಲ್ಲಿ ತೊಡಗಿರುವ ಸಾನ್ವಿಗೆ, ಎಲ್ಲರಿಗೂ
    `ಮಕರ ಸಂಕ್ರಮಣದ ಶುಭಾಶಯಗಳು.' ನನ್ನ ಬ್ಲಾಗ್ ಗೊಮ್ಮೆ ಬನ್ನಿ

    ReplyDelete
  16. ಮನಮುಕ್ತಾ,
    ಬಹಳ ದಿನಗಳ ನಿಂತರ ನಿಮ್ಮ ಭೇಟಿ..
    ನಿಮ್ಮ ಮಾತುಗಳಿಗೆ ವಂದನೆಗಳು.

    ನಿಮಗೂ ಮತ್ತು ನಿಮ್ಮ ಕುಟುಂಬದವರಿಗೆಲ್ಲಾ ಹೊಸ ವರ್ಷ ಮತ್ತು ಸಂಕಾಂತ್ರಿಯ ಶುಭಾಶಯಗಳು!

    ReplyDelete
  17. ಪ್ರಭಾ ಅವರೇ,

    ಧನ್ಯವಾದಗಳು !
    ನಿಮಗೂ ಸಹ ಹೊಸವರ್ಷ ಮತ್ತು ಸಂಕ್ರಾಂತಿಯ ಶುಭಾಶಯಗಳು!

    ReplyDelete