Wednesday, August 17, 2011

ಪ್ರೇಮ ಪಾರಿಜಾತಕ್ಕೆ ಒಂದು ವರ್ಷ !

ಪಾರಿಜಾತ ಪುಷ್ಪವೊಂದು 
ಗಾಳಿಯಲಿ ತೇಲಿ ಬಂದು
ಅದರ ಸೊಬಗಿನಿಂದ ಮೋಹಗೊಂಡು
ಬೊಗಸೆಯೊಡ್ಡಿ ನಾವು ನಿಂತೆವಂದು

ಪರಾಗ ರೇಣು ಮಡಿಲಲಿ
ಪುಟ್ಟ ಪಾರಿಜಾತ ಮೊಳೆಯಿತಲ್ಲಿ
ಪಾರಿಜಾತ ಹೊತ್ತ ಸಂತಸದಲಿ
ಕಂಗೊಳಿಸಿದಳು ಅವಳು ಅಂದದಲಿ 

ನವಮಾಸ ಒಡಲ ಬೆಳಗಿ
ಇಳಿಯಿತು ಪಾರಿಜಾತ ಇಳೆಗೆ 
ಎನಿತು ಸೊಬಗು ಎಂತ ಸೃಷ್ಟಿ
ದೇವಲೋಕದ ಪುಷ್ಪವೇ ಸೈ

ಪಾರಿಜಾತ ನಲಿದು ನಲಿಸಿ
ಕಮ್ಮನೆ ಪ್ರೀತಿ ಸೂಸಿ
ಬೆಳೆಯುವುದ ಕಂಡು ಹರ್ಷಿಸಿ 
ನೋಡುತ್ತಲೇ ವರ್ಷವೊಂದ ಗಳಿಸಿ

ಪ್ರೇಮ ಪಾರಿಜಾತಕ್ಕೀಗ ಒಂದು ವರ್ಷ !

ಬೆಳಯಲಿ ಪಾರಿಜಾತ ಅಂದವಾಗಿ
ಹರಡಲಿ ಕಂಪು ಕೀರ್ತಿಯಾಗಿ
ಮಾಡಲಿ ಹೆಸರು ಸಾಧನೆಗಾಗಿ 
ಇದುವೇ ಆಶಯ ಪಾರಿಜಾತಕ್ಕಾಗಿ 

16 comments:

  1. ಪಾರಿಜಾತದ ಪರಿಮಳ ಪಸರಿಸಲಿ ಎಂದು ಹಾರೈಸುತ್ತಾ ,ಸಾನ್ವಿಗೆ ಜನುಮ ದಿನದ ಶುಭಾಶಯಗಳು.

    ReplyDelete
  2. vav...namma saanvige aagle ondu varushaa....

    happy birthday saanvi...

    ReplyDelete
  3. ಮಹಾಂತೇಶ್,
    ಧನ್ಯವಾದಗಳು ನಿಮ್ಮ ಸುಂದರ ಹಾರೈಕೆಗೆ

    ReplyDelete
  4. ದಿನಕರ್,
    ವಂದನೆಗಳು !
    ಹೌದು ಆಗಲೇ ವರ್ಷವಾಯ್ತು ...

    ReplyDelete
  5. ನಮ್ಮ ಮುದ್ದು ಸಾನ್ವಿಗೆ ಹುಟ್ಟು ಹಬ್ಬದ ಶುಭಾಶಯಗಳು.ಸಾನ್ವಿ ಹೀಗೆಯೇ ನೂರಾರು ವರುಷ,ಸಂತಸವನ್ನು ಹರಡಲಿ.ನಿಜಕ್ಕೂ ಇದೊಂದು ದೇವಲೋಕದ ಪಾರಿಜಾತವೇ ಸೈ.ಇಂತಹ ಮುದ್ದಾದ ಹೂವನ್ನು ಪಡೆದ ನಿಮಗೂ ಅಭಿನಂದನೆಗಳು.

    ReplyDelete
  6. ಮುದ್ದು ಸಾನ್ವಿಗೆ ಶುಭಾಶಯಗಳು..

    ReplyDelete
  7. ಕೃಷ್ಣಮೂರ್ತಿ ಸರ್,
    ನಿಮ್ಮ ಮುದ್ದಾದ ಹಾರೈಕೆಗೆ ವಂದನೆಗಳು !
    ನಿಮ್ಮ ಆಶೀರ್ವಾದ ಇರಲಿ ಸದಾ

    ReplyDelete
  8. ಸುಮಾ ಅವರೇ,
    ನಿಮ್ಮ ಶುಭಾಶಯಕ್ಕೆ ಧನ್ಯವಾದಗಳು !

    ReplyDelete
  9. ಮನಮುಕ್ತ,
    ನಿಮ್ಮ ಮುದ್ದು ಹಾರೈಕೆಗೆ ವಂದನೆಗಳು.

    ReplyDelete
  10. ಓಹ್, ಆಗಲೇ ಒ೦ದುವರ್ಷ! ಮುದ್ದು ಸಾನ್ವಿಗೆ ಹುಟ್ಟು ಹಬ್ಬದ ಶುಭಾಶಯಗಳು. ನಿಮ್ಮ ಬ್ಲಾಗ್ ಗೂ ಒ೦ದುವರ್ಷ ಆಯಿತೇನೋ! ಸಾನ್ವಿ ದೊಡ್ಡವಳಾದಾಗ ತನ್ನ ಕಿಶೋರಾವಸ್ತೆಯ ಹ೦ತಗಳನ್ನು ಓದಿ ಆನ೦ದಿಸುವುದರಲ್ಲಿ ಸ೦ಶಯವಿಲ್ಲ.

    ReplyDelete
  11. happy b'day sanvi puTTi! looking very very cute in jari langa!!:)

    ReplyDelete
  12. ಪ್ರಭಾ ಅವರೇ,
    ಹೌದು, ಸಾನ್ವಿಗೂ ಒಂದು ವರ್ಷ ಬ್ಲಾಗಿಗೂ ಒಂದು ವರ್ಷ :)
    ಧನ್ಯವಾದಗಳು !

    ReplyDelete