Monday, February 14, 2011

ವೀಣೆ, ರಾಗ ಮತ್ತು ಪ್ರೀತಿ

ಒಲವಿನ ವೀಣೆ ಮೀಟಿ                                           
ನಲಿವಿನ ನಾದ ಹೊಮ್ಮಿ           
ಜನಿಸಿದ ಸುಶ್ರಾವ್ಯ ರಾಗ 

ರಾಗ ಹುಟ್ಟಿದ ಸಮಯ
ವೀಣೆ ಪಟ್ಟ ಪರಿಶ್ರಮ
ನೆನಪಿನ ಸಂಗ್ರಹದಿ ಗುನುಗು

ರಾಗಕ್ಕೆ ನಗು ಹಿಮ್ಮೇಳ
ಆಗಾಗ ಕೇಕೆಯ ತಾಳ
ಈಗ ರಾಗವಾಗುತ್ತಿದೆ ಹಾಡು

ಹಾಡಿನ ಪಲ್ಲವಿ ಸುಂದರ
ಬೆಳಯಲಿ ಉಲ್ಲಾಸದ ಸ್ವರ
ಅಗಲಿ ವೀಣೆಗೆ ಸಡಗರ 

******************************************
ನಮ್ಮ ಪ್ರೀತಿಯ ವ್ಯಾಕರಣದಲಿ ಹೊಸ ಭಾಷ್ಯ ನೀಡಿದ ಜೀವನ ರಾಗ ಸಾನ್ವಿಗೆ  ಮತ್ತು ಸಾನ್ವಿ ಅಮ್ಮನಿಗೆ , ವ್ಯಾಲೆಂಟೇನ್ ದಿನದ ನೆಪದಲ್ಲಿ ಈ ಕವನ ಅರ್ಪಣೆ !

ಪ್ರೀತಿ ಎಲ್ಲರ ಮನದಲಿ ನಲಿಯಲಿ !

12 comments:

  1. ರಾಗಕ್ಕೆ ನಗು ಹಿಮ್ಮೇಳ
    ಆಗಾಗ ಕೇಕೆಯ ತಾಳ
    ಈಗ ರಾಗವಾಗುತ್ತಿದೆ ಹಾಡು...........
    ಸೂಪರ್ ಸಾಲುಗಳು!
    ಚಂದದ ಕವನ

    ReplyDelete
  2. ಸುಂದರ ಕವನ.ತುಂಬಾ ತುಂಬಾ ಇಷ್ಟವಾಯಿತು.ನಿಮ್ಮ ಕವಿ ಹೃದಯಕ್ಕೆ ನೂರು ಸಲಾಂ.

    ReplyDelete
  3. ಪ್ರವೀಣ್,
    ನಿಮ್ಮ ಚೆಂದದ ಪ್ರತಿಕ್ರಿಯೆಗೆ ಧನ್ಯವಾದಗಳು !

    ReplyDelete
  4. ಕೃಷ್ಣಮೂರ್ತಿ ಸರ್,
    ವಂದನೆಗಳು ನಿಮ್ಮ ಮೆಚ್ಚುಗೆಗೆ :)

    ReplyDelete
  5. ಚಂದ್ರಿಕಾ ಅವರೇ,
    ನಿಮ್ಮ ಮೆಚ್ಚುಗೆಗೆ ವಂದನೆಗಳು.

    ReplyDelete
  6. ನಿಮ್ಮನ್ನು ಕವಿಯಾಗಿಸಿದ ಸಾನ್ವಿಗೆ ಅಭಿನ೦ದನೆಗಳು. ಸಾನ್ವಿಯ
    ಬೆಳವಣಿಗೆಯ ಹ೦ತಗಳನ್ನು ನೋಡುವುದೇ ಸೊಗಸು!

    ReplyDelete
  7. ಪ್ರಭಾ,
    ಧನ್ಯವಾದಗಳು ನಿಮ್ಮ ಮೆಚ್ಚುಗೆಯ ಮಾತುಗಳಿಗೆ.

    ReplyDelete