Tuesday, March 15, 2011

Month Seven

Saanvi is calling..

She has learnt to wave hands as if to call us.  She grabs any object which she can hold and tries to shake it.

Saanvi is able to sit for a while. Trying to touch her own feet when sitting is her favorite activity. After sitting for a while, she just slowly slide sidewise and becomes flat. It looks like a sack of sugar sliding...

Curiosity towards food is been increasing and she has been looking at our plates. These days she is getting to taste new food like customized versions of rice & green vegetables. This is complimenting her staple food. She enjoys grating small pieces of apple with her two teeth. But she most enjoys the little chapati/talipattu pieces and chews on them as if they are world's most tastiest bytes.

Drinking water has become a play. She blows air while drinking water to make the hissing sound.

Finally, she is making voices as if she is singing. The singing session goes on for most of the day and sometimes the songs are non-stop !


ಕೈ ಬೀಸುವುದು ಸಾನ್ವಿಯ ಹೊಸ ಕಲಿಕೆ. ನಮ್ಮನ್ನು ಕೈ ಬೀಸಿ ಕರೆಯುವಂತೆ ಭಾಸವಾಗುತ್ತದೆ. ಹಾಗೇ ಕೈಗೆ ಸಿಕ್ಕದನ್ನು ಅಲುಗಾಡಿಸುವುದು ನಡಿದಿದೆ.

ಕುಳಿತುಕೊಳ್ಳುವುದಕ್ಕೆ ಶುರುಮಾಡಿದ್ದಾಳೆ ಸಾನ್ವಿ. ಕುಳಿತ ಸ್ವಲ್ಪ ಸಮಯದ ನಂತರ ಸಕ್ಕರೆ ಮೂಟೆಯ ತರ ಪಕ್ಕಕ್ಕೆ ವಾಲಿ ಅಡ್ಡವಾಗಿ ಬಿಡುತ್ತಾಳೆ. ಕುಳ್ಳಿರಿಸಿದಾಗ ತನ್ನ ಪಾದಗಳನ್ನು ತಾನೇ ಮುಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಿರುತ್ತಾಳೆ.

ಆಹಾರದ ಬಗ್ಗೆ ಆಸಕ್ತಿ-ವಿಸ್ಮಯ ಹೆಚ್ಚು ಬೆಳೆದಿದೆ. ನಾವು ಊಟ ಮಾಡುವಾಗ ನಮ್ಮ ತಟ್ಟೆಗಳ ಕಡೆ ಗಮನ ಜಾಸ್ತಿಯಾಗಿದೆ. ತನ್ನ ಎಂದಿನ ಆಹಾರದ ಜೊತೆಗೆ ಈಗೀಗ ಹೊಸ ಬಗೆಯ ರುಚಿಗಳನ್ನು ನೋಡುತ್ತಿದ್ದಾಳೆ. ಮೆತ್ತಗೆ ಬೇಯಿಸಿದ ಅನ್ನ-ಸೊಪ್ಪು-ಕೆಲವೊಮ್ಮೆ ತರಕಾರಿ ಸೇವನೆ. ಸೇಬಿನ ಚಿಕ್ಕ ಹೋಳುಗಳನ್ನು ತನ್ನ ಎರಡು ಹಲ್ಲುಗಳಲ್ಲಿ ಕರಕರ ಎಂದು ಎರೆಯುತ್ತಿರುತ್ತಾಳೆ.
ಅತ್ಯಂತ ಖುಷಿಕೊಡುವುದು ಚಪಾತಿ ಅಥವಾ ತಾಳಿಪಟ್ಟಿನ ಚಿಕ್ಕ ತುಂಡು. ಅದನ್ನು ಕೈಯಲ್ಲಿ ಕೊಟ್ಟರೆ ಕೈ-ಬಾಯಿ ಹಚ್ಚಿಕೊಂಡು ಚಪ್ಪರಿಸಿಕೊಂಡು ತಿನ್ನುವುದು ಅತ್ಯಂತ ಮೆಚ್ಚಿನ ಸಮಯ !

ನೀರು ಕುಡಿಯುವುದು ಸಹ ಹೊಸ ಆಟವಾಗಿದೆ. ನೀರು ಕುಡಿಯುವಾಗ ಅದರೊಳಗೆ ಗಾಳಿ ಊದುವುದು ಮತ್ತು ಅದರಿಂದ ಉಂಟಾಗುವ ಗುಳುಗುಳು ಶಬ್ದದಿಂದ ಖುಷಿ!

ಕಡೆಯದಾಗಿ ಹಾಡಿನ ರಾಗದಂತೆ ಧ್ವನಿ ಮಾಡುವುದು ಇನ್ನೊಂದು ಹೊಸ ಕಲಿಕೆ. ಈ ರಾಗಾಲಾಪ ದಿನವಿಡಿ ನಡೆಯುತ್ತಿರುತ್ತದೆ.

10 comments:

  1. ಮುದ್ದು ಸಾನ್ವಿಯ ಹೊಸ ಆಟಗಳು ಮುದ ನೀಡುತ್ತವೆ.

    ReplyDelete
  2. igaste nanna maga idannella maadi mundina hejjage kaalittiiddaaane ... matte a bangarada xanagalanna nenapisiddiri dhanyavaadagalu

    ReplyDelete
  3. ಸಾನ್ವಿಯ ಬೆಳವಣಿಗೆಯ ಹ೦ತಗಳನ್ನು ನೋಡುವುದೇ ಸೊಗಸು!

    ReplyDelete
  4. a singer there!! aww thats sooo cute!:)

    ReplyDelete
  5. ಡಾಕ್ಟರ್ ಸರ್,
    ನಿಮ್ಮ ಪ್ರೀತಿಯ ಮಾತುಗಳಿಗೆ ಶರಣು.

    ReplyDelete
  6. ಕಲಾವತಿಯವರೇ,
    ನಿಮ್ಮ ಅನುಭವದ ಮಾತುಗಳಿಗೆ ನಮನ.

    ReplyDelete
  7. ಚಂದ್ರಿಕಾ,
    ಧನ್ಯವಾದಗಳು :)

    ReplyDelete
  8. ರೂಪಾ,
    ತುಂಬಾ ದಿವಸ ಆಗಿತ್ತು ನಿಮ್ಮ ಭೇಟಿಯಾಗಿ.
    ವಂದನೆಗಳು !

    ReplyDelete
  9. ಶ್ರೀ,
    ಹೂಂ :)
    ನಿಮ್ಮ ಹತ್ತಿರ ಕಳಿಸ್ತೀವಿ..

    ReplyDelete