Sunday, October 28, 2012

First day of school !

Her mom was getting Saanvi ready.

Saanvi:  Where am I going ?
Mom:  You are going to the playhome school that we saw other day.
Saanvi (as expected) : Why?
Mom: To play in the slide & swing. Also there are lots of friends & teacher.

In no time, Saanvi was ready in her bright pink dress. The little green school bag that mainly had snacks box and water bottle was on her.

We took her to the school.

We didn't know how she would react when its time to go inside the school. Is she going to cry and insist she won't go? In any case, we thought we will hang around the school.

So we took her to the playhome and left her at the class room where there were already 2 other kids. She sat with them and the teacher brought some colorful cups to stack upon. We stayed there some more time and Saanvi started looking comfortable.

We took courage and left her with the teacher. We came out of school and then waited for some more time outside. There was no noise. Finally,we came back to home.

We knew she needs to be in school for 2 & half hours. But it felt like time was running very slow. We were wondering if she started crying after we came. We again came to school after one hour and the maid in school informed that Saanvi is doing fine.

Finally after 2 & half hours, it was time for Saanvi to come out of school.

There she was..

Our little girl with bag on her back. She was walking towards the school gate, holding hand of her teacher. She looked little excited, little puzzled, little happy & little tensed. As soon as she saw us, her eyes lit up. She rushed to the gate and hugged us.

We were very eager to hear how did it go. Teacher & maid was full of praise for Saanvi that she didn't cry at all and it was good to see the kid to be like that on first day. Looks like she had a good time in school with singing rhymes, playing & seeing new friends.

Teacher also told she has given a 'star' to Saanvi as she was absolutely good on first day.

While returning back, Saanvi was very happy & proud about the star. She said teacher gave the star & kept showing it.

What a way to end the first day in school by taking a star back home !

Sunday, October 14, 2012

ಕವಿಶೈಲದಲ್ಲಿ ..





















ಕಾಡಿನೊಳಗೊಂದು  ಹಂಚಿನ ಮನೆ 
ಎಷ್ಟು ದೊಡ್ಡದು ಅ ಮನೆ 
ನಾ ಎಷ್ಟು ಓಡಾಡಿದರೂ ಮುಗಿಯದ ಮನೆ

ಒಪ್ಪವಾಗಿ ಜೋಡಿಸಿಟ್ಟ ಸಾಮಾನುಗಳು
ಅಲ್ಲೊಂದು ತೊಟ್ಟಿಲು ಇಲ್ಲೊಂದು ದೊಡ್ದಪಾತ್ರೆ 
ಯಾವುದನ್ನು ನಾ ಮುಟ್ಟುವ ಆಗಿಲ್ಲ  

ಬಿಳಿ ತಲೆಗೂದಲಿನ ಅಜ್ಜನ ಚಿತ್ರಗಳು
ಅಲ್ಲಿ ಅಜ್ಜನ ಜೊತೆ ಚಿಕ್ಕ ಪಾಪುಗಳು
ನನದೊಂದು ಅಲ್ಲಿ ಚಿತ್ರವಿದೆಯಾ ?
 
ಅಜ್ಜನ ವಸ್ತುಗಳು ಮೇಲೆ ಅಟ್ಟದಲ್ಲಿ 
ಕೋಣೆ ತುಂಬಾ ಸನ್ಮಾನ ಪ್ರಶಸ್ತಿಗಳು
ಅಟ್ಟದ ಮೆಟ್ಟಿಲುಗಳ ಹತ್ತಿ ಇಳಿಯುವುದೇ ಇಷ್ಟ
 
ಕೆಳಗೆ ಅಜ್ಜ ಬರೆದ ಪುಸ್ತಕ ರಾಶಿ
ಹೇಗೆ ಬರೆದರು ಅಷ್ಟು ಪುಸ್ತಕ !
ಪುಸ್ತಕ ಬೇಕು ನನಗೊಂದು 

ಬಂದು ನಿಂತೆನು ಮನೆಯ ಹೊರಗೆ
ಮಾತಾಡಿಕೊಳ್ಳುತ್ತಿದ್ದರು ಅಪ್ಪ-ಅಮ್ಮ 
ಕುವೆಂಪು ಅಜ್ಜನದಂತೆ ಆ ಮನೆ
ಹೆಸರು ಕವಿಶೈಲವಂತೆ.
 

Sunday, September 9, 2012

ಜೀವನೋತ್ಸವಕ್ಕೆ ಈಗ ಎರಡು !

ಪಪ್ಪಾ ...
ದೂರದಲ್ಲಿ ಕರೆದ ಹಾಗಿತ್ತು.

ಮತ್ತೆ ಪಪ್ಪಾ ..

ಕಣ್ಣು ಬಿಟ್ಟು ನೋಡಿದೆ, ಸಾನ್ವಿ ನಿಂತಿದ್ದಳು. ಸನ್ ಬಂದಿದೆ ಅಪ್ ಪಪ್ಪಾ ಅಂತ ಎಬ್ಬಿಸಿ ಹೋದಳು.
ಮೆಟ್ಟಿಲುಗಳನ್ನು ಪುಟ್ಟ ಹೆಜ್ಜೆ ಇಟ್ಟು ಇಳಿಯುತ್ತಿದ್ದಳು.

ಸುಮ್ಮನೆ ಕಣ್ಮುಚ್ಚಿ ಒರಗಿದೆ.  ಕಣ್ಮುಂದೆ ನೆನಪಿನ ಮೆರವಣಿಗೆ..

ಹುಟ್ಟಿ ಕೆಲವು ನಿಮಿಷಗಳಾಗಿತ್ತು. ನನ್ನ ತೋಳಿನಲ್ಲಿದ್ದ ಕಿನ್ನರಿ ಮಗು ನನ್ನನ್ನೇ ಮೊದಲ ಸಲ ನೋಡುತ್ತಿತ್ತು. 

ಅಮ್ಮನ ಹೊಟ್ಟೆಯಲ್ಲಿದ್ದಾಗ ಮಾತಾಡಿಸುತ್ತಿದ್ದವರು ಇವರೇನಾ ಅನ್ನುವ ಹಾಗಿದ್ದ  ನೋಟ.

ಅಲ್ಲಿಂದ ಮುಂದೆ ದೊಡ್ಡ ಪಾದರಕ್ಷೆಗಳನ್ನು ತನ್ನ ಪುಟ್ಟ ಪಾದದಡಿಯಲ್ಲಿ ಹಿಡಿದಿಡುವ ಪ್ರಯತ್ನ. 

ಪಪ್ಪಾ ಅಂತಾ ಮೊದಲ ಸಲ ಕರೆದಾಗಿನ ಕ್ಷಣ. 

ಮನೆಗೆ ಹಾಕಿದ್ದ ತನ್ನ ಹೆಸರು ತೋರಿಸಿ ಖುಷಿ ಪಡುತ್ತಿದ್ದ ಸ್ನಿಗ್ಧ ನಗೆ.

ಕಾರನ್ನು ನಾನೇ ಚಾಲನೆ ಮಾಡುತ್ತೇನೆ ಎಂದು ಸೀಟಿನಲ್ಲಿ ಕುಳಿತು ಸ್ಟೇರಿಂಗ್ ಹಿಡಿದ ಪುಟ್ಟ ಕೈಗಳು. 

ಮೆಟ್ಟಿಲುಗಳ ಮೇಲೆ ಮತ್ತೆ ಗೆಜ್ಜೆಗಳ ನಾದ. ಸಾನ್ವಿ ಮತ್ತೆ ಬಂದು ನಿಂತಿದ್ದಳು.ಪಪ್ಪಾ ಸನ್ ಅಪ್ ಆಗಿದೆ ಎದ್ದೇಳಿ ಪಪ್ಪಾ ಅಂತಾ ಎದೆ ಮೇಲೆ ಹತ್ತಿ ಕುಳಿತಳು. 

ಹೇಗೆ ಓಡಿತು ಸಮಯ !

ನಿನ್ನೆ ಇನ್ನು ನಮ್ಮ ತೋಳುಗಳಲ್ಲಿ ಆಡುತಿದ್ದವಳು, ಈಗ ಮನೆ ತುಂಬಾ ಓಡಾಟ. ಹಿಂದೆ ಹಿಂದೆ ಓಡಿ ಹಿಡಿಯುವ ನಮ್ಮ ಪ್ರಯತ್ನ .

ಮಾ ಮಾ, ಪಾ ಪಾ ಎನ್ನುತ್ತಿದ್ದವಳು, ಈಗ ಬಾಯಿ ತುಂಬಾ ಮಾತುಗಳು..

ಎಲ್ಲ ವಿಷಯಗಳೆಡೆಗೆ ಉತ್ಕಟ ಕುತೂಹಲ. ಪ್ರತಿಯೊಂದಕ್ಕೂ ದೇನು ಎನ್ನುವ ಪ್ರಶ್ನೆಗಳು..

ನೋಡಿ ನಲಿಯುತ್ತಲೇ ಎರಡು ವರ್ಷ ಸಾನ್ವಿಗೆ !

ಕೇಕು ಆರಿಸುವಾಗ ಪೈನಾಪಲ್ ಕೇಕು ಬೇಕು ಅಂತಾ ತಾನೇ ಆರಿಸಿಕೊಂಡಳು.ಹುಟ್ಟು ಹಬ್ಬದ ಆಚರಣೆಯಲ್ಲಿ ಸಂಭ್ರಮಿಸಿದ ಪರಿ. ಹೊಸ ಬಟ್ಟೆಯುಟ್ಟು ನಲಿದ ಬಗೆ. 

ಆಫೀಸಿಗೆ ಹೊರಟು ನಿಂತಿದ್ದೆ. ಎಂದಿನಂತೆ ಟಾ ಟಾ ಮಾಡಲು ಗೇಟಿಗೆ ಬಂದವಳು, ಮತ್ತೆ ಮನೆಯೊಳಕ್ಕೆ ಓಡಿದಳು.

ಪಪ್ಪಾ ತಗೊಳ್ಳಿ ಆಫೀಸ್ ಆಪಲ್ ತಿನ್ನಿ ಎನ್ನುತ್ತಾ ಸೇಬು ಹಣ್ಣು ಕೈಗಿತ್ತಳು..

ಆಫೀಸಿನಿಂದ ಮರಳುವಾಗ ಮಲಗುವ ಹಂತದಲ್ಲಿದ್ದಳು. ನೋಡಿದ ಕೂಡಲೇ ಪಪ್ಪಾ ಆಫೀಸ್ ಅಲ್ಲಿ ಆಪಲ್  ತಿಂದಿರ ಅಂದಳು.


ಕಣ್ಣಂಚಿನಲ್ಲಿ ಗೊತ್ತಿಲ್ಲದೇ ಹನಿಗೂಡಿತ್ತು...

ಅಪ್ಪ-ಅಮ್ಮನ ಹೃದಯದ ಅಂತರಾಳದಿಂದ, ನಮ್ಮ ಸಾನ್ವಿಗೆ  ಹುಟ್ಟುಹಬ್ಬದ ಶುಭ ಹಾರೈಕೆಗಳು..

Sunday, July 1, 2012

ಟಾತುಮುಶ್, ರುಕ್ಮಿಣಿ ಮತ್ತು ಹಲವು ಸಿಹಿಗಳಿಗೆಗಳು

ಟಾತುಮುಶ್ 
 
ಅದು ಯಾಕೇ ಅ ಹಳದಿ-ಕೆಂಪು ವಸ್ತ್ರದ ಆ ಜೋಕರ ತರದ ಗೊಂಬೆಗೆ  'ಟಾತುಮುಶ್ ' ಅನ್ನುತ್ತಾಳೆ ಎನ್ನುವುದು ಗೊತ್ತಿಲ್ಲ. ಆದರೆ ದಾರಿಯಲ್ಲಿ ಅದನ್ನು ನೋಡಿದಾಗಲೆಲ್ಲ ಸಾನ್ವಿ ಅದಕ್ಕೆ ಹಾಯ್ ಮತ್ತು ಟಾಟಾ ಮಾಡದೆ ಬರುವುದಿಲ್ಲ.ಟಾತುಮುಶ್ ಮುಟ್ಟಿ, ಅದರ ಕೈಗೆ ಥ್ಯಾಂಕ್ಸ್ ಕೊಟ್ಟು ಬರಲೇಬೇಕು. 

ತಥೆಗಳು 
ಮಲಗುವ ಮುನ್ನ ಕೇಳುವುದು 'ತಥೆ ಹೇಳು'. ಕನಿಷ್ಠ ಒಂದು ಅರ್ಧ ಡಜನ್ ಕತೆಗಳನ್ನು ಅವರ ಅಮ್ಮ ಹೇಳಿ ಮಲಗಿಸುವುದು ಪರಿಪಾಠವಾಗಿಬಿಟ್ಟಿದೆ. ಅಂಬಾ-ಹುಲಿ, ಆಮೆ-ಮೊಲ, ಮೊಸಳೆ-ಮಂಗ  ಸಾನ್ವಿಗೆ ಕೆಲವೊಂದು ಇಷ್ಟದ ಕತೆಗಳು.

ಪಪ್ಪಾಗೆ 
ತಿನ್ನುವುದಕ್ಕೆ ಸಾನ್ವಿಗೆ ಏನಾದರು ಕೊಟ್ಟರೆ 'ಪಪ್ಪಾಗೆ ಕೊಡು' ಎನ್ನುತ್ತಾಳೆ. ದಾಳಿಂಬೆ - ದ್ರಾಕ್ಷಿ  ಕೈಯಲ್ಲಿ ಹಿಡಿದು 'ಪಪ್ಪಾ ತಿನ್ನಿ' ಎಂದು ಮುಂದೆ ಹಿಡಿಯುತ್ತಾಳೆ. 

ಕೇಕ್ 
ಕಳೆದ ಕೆಲವು ವಾರಗಳಲ್ಲಿ ಸಾನ್ವಿ ಕನಿಷ್ಠ ೪ ಕೇಕ್ ಕತ್ತರಿಸಿದ್ದಾಳೆ. ಮನೆಯಲ್ಲಿ ನಡೆದ ಹುಟ್ಟುಹಬ್ಬ-ವಾರ್ಷಿಕೋತ್ಸವದ ಕೇಕ್ ಕತ್ತರಿಸುವಾಗ ಸಾನ್ವಿ ಇಲ್ಲದಿದ್ದರೆ ಹೇಗೆ ! ಎಲ್ಲಾ ಕೇಕ್ಗಳನ್ನು ಕತ್ತರಿಸುವಾಗಲು ಸಾನ್ವಿ 'ಹಾಪಿ ಬಟದೆ' ಅಂತಲೇ ಹಾಡಿಕೊಂಡಳು !

ಬುಕ್ 
ಪುಸ್ತಕಗಳು ಸಾನ್ವಿಗೆ ಇಷ್ಟವಾಗುತ್ತವೆ. ಅಮರಚಿತ್ರಕಥ ಮಾಲಿಕೆಯ ಕೆಲವು ಪುಸ್ತಕಗಳಿವೆ. ಅದರಲ್ಲಿ ಕೃಷ್ಣನ  ಕಥಾಸಂಗ್ರಹ ಜಾಸ್ತಿ ಇಷ್ಟ. ಅದರಲ್ಲಿ ರುಕ್ಮಿಣಿ ಉದ್ಯಾನವನದಲ್ಲಿ ಕುಳಿತಿರುವ ಚಿತ್ರವೊಂದಿದೆ. ಅದು ನೋಡಿದಾಗಲೆಲ್ಲಾ ರುಕ್ಮುಣಿ ಚಿಟ್ಟೆ ಪಾರ್ಕ್ ಅಲ್ಲಿ ಅನ್ನುತ್ತಾಳೆ ಸಾನ್ವಿ ! ಬನ್ನೇರುಘಟ್ಟದ  ಚಿಟ್ಟೆ ಪಾರ್ಕ್ ಹೋಗಿಬಂದಾಗಿನಿಂದ ಎಲ್ಲಾ ಗಿಡ-ಮರ-ಬಳ್ಳಿಯ ಚಿತ್ರಗಳು  ಚಿಟ್ಟೆ ಪಾರ್ಕ್ ತರಾನೆ ಅನಿಸುತಿದೆ ಸಾನ್ವಿಗೆ. ಸಿಂಡ್ರೆಲಾ ಕತೆ ಪುಸ್ತಕ ಇಷ್ಟ. 

ಛೋಟಾ  ಭೀಮ್ 
ಪೋಗೋದ  ಛೋಟಾ ಭೀಮ್ ಸದ್ಯಕ್ಕೆ ನೆಚ್ಚಿನ ಕಾರ್ಟೂನ್ ಕಾರ್ಯಕ್ರಮ.

ಶಾಮು 
ಮೊನ್ನೆ ಚಳಿಯಿತೆಂದು ಸಾನ್ವಿಗೆ ಕಾಲಿಗೆ ಸಾಕ್ಸ್ ಹಾಕಿಕೊಳ್ಳಲು ಹೇಳಿದೆ. ಹಾಕಿಕೊಳ್ಳಲ್ಲಿಕ್ಕೆ ಇಷ್ಟವಿರಲಿಲ್ಲ, ಅಲ್ಲಿಂದ ಓಡಿದಳು.  ಅಲ್ಲಿಯೇ ಇದ್ದ ಶಾಮು ಎಂಬ ಶಾರ್ಕ್ ಗೊಂಬೆ ತೋರಿಸಿ, ಸಾಕ್ಸ್ ಹಾಕಿಕೊಳ್ಳದಿದ್ದರೆ ಇದು ನಿನ್ನ ಹಿಂದೆ ಬರುತ್ತೆಂದು ಹೇಳಿದೆ. ಒಂದು ಕಾಲಿಗೆ ಸಾಕ್ಸ್ ಹಾಕುವವರೆಗೆ ಶಾಮು ನೋಡುತ್ತಿದ್ದವಳು, ಚಕ್ಕನೆ ಎದ್ದು, ಕಪಾಟಿನ ಬಾಗಿಲು ತೆಗೆದು ,ಶಾಮು ತೆಗೆದುಕೊಂಡು ಹೋಗಿ ಅದರಲ್ಲಿ ಹಾಕಿ, ಬಾಗಿಲು ಹಾಕಿಬಂದಳು. 'ಶಾಮು ಲಾಕ್ ಪಪ್ಪಾ' ಎಂದು ಹೇಳಿ ಹಾಕಿದ ಸಾಕ್ಸ್ ತೆಗೆದಳು !
 

Sunday, May 13, 2012

ಪ್ರಜಾವಾಣಿಯಲ್ಲಿ ನಮ್ಮ ಸಾನ್ವಿ !

ದಿನದಿನವೂ ಹೊಸ ಆಟ-ಮಾತುಗಳಿಂದ ಮನ-ಮನೆ ಬೆಳಗುತ್ತಿದ್ದಾಳೆ ಸಾನ್ವಿ...

ಅಪ್ಪ-ಅಮ್ಮನ ಹೆಸರುಗಳನ್ನು  ಮುದ್ದಾಗಿ ಹೇಳುವದರಿಂದ ಹಿಡಿದು ಅವಳ ಅಮ್ಮನ ಅನುಕರಣೆ ಮಾಡುವವರೆಗೆ ಅನೇಕ ಲೀಲೆಗಳಿಂದ ನಮ್ಮನ್ನು ಆವರಿಸಿಕೊಂಡು ಬಿಟ್ಟಿರುತ್ತಾಳೆ.ಸಾನ್ವಿಯ ಆಟ-ಪಾಟಗಳಲ್ಲಿ ಸಮಯ ಹೋದದ್ದೇ ತಿಳಿಯುವುದಿಲ್ಲ.

ಮೊನ್ನೆ ಹೀಗೇ ಆಯಿತು..

ಪ್ರಜಾವಾಣಿ ಪತ್ರಿಕೆಯ ಶುಕ್ರವಾರದ ಸಾಪ್ತಾಹಿಕದಲ್ಲಿ ನಮ್ಮ ಸಾನ್ವಿ ಬ್ಲಾಗ್ ಕುರಿತು ಲೇಖನವೊಂದು ಪ್ರಕಟವಾಗಿದೆ. ನಿಜ ಹೇಳಬೇಕೆಂದರೆ, ಅದು ಎಪ್ರಿಲ್ ೨೭ ರಂದು ಪ್ರಕಟವಾದ ವಿಷಯವೇ ತಿಳಿದಿರಲಿಲ್ಲ...ನಮ್ಮ ಅಕ್ಕ ಪೋನ್ ಮಾಡಿ ಹೇಳುವ ತನಕ.
'ಬ್ಲಾಗಿಲನು ತೆರೆದು' ಎನ್ನುವ ವಿಶಿಷ್ಟ ಹೆಸರಿನ ಅಂಕಣದಲ್ಲಿ ಸಾನ್ವಿ ಬ್ಲಾಗ್ ಬಗ್ಗೆ ಸುಂದರವಾಗಿ ಬರೆದಿದ್ದಾರೆ.  

ನಮ್ಮ ಈ ಬ್ಲಾಗ್ ಬಗ್ಗೆ ಪ್ರೀತಿಯಿಂದ ಬರೆದಿದ್ದಕ್ಕೆ 'ಸಾಕ್ಷಿ' ಯವರಿಗೆ ಧನ್ಯವಾದಗಳು. ಹಾಗೆ ಪ್ರಜಾವಾಣಿಗೂ ವಂದನೆಗಳು.

ಪ್ರಜಾವಾಣಿಯ ಬರಹ ಇಲ್ಲಿದೆ ...



ಪೋನ್ ಮಾಡಿ ಇದರ ಬಗ್ಗೆ ತಿಳಿಸಿದ ಸವಿತ ಮಲ್ಲಿಕಾರ್ಜುನ್ ಅವರಿಗೆ ಥ್ಯಾಂಕ್ಸ್ !!



Wednesday, April 4, 2012

ಪಾತರಗಿತ್ತಿ ಪಾರ್ಕಿನಲ್ಲಿ


ಹೊರಗೆ ತಿರುಗಾಡುವುದು ಸಾನ್ವಿಗೆ ಬಲು ಇಷ್ಟವಾಗ್ತಿದೆ. ಕಾರಿನಲ್ಲಿ ತಿರುಗೋಕೆ ಯಾವಾಗಲೂ ಸಿದ್ಧ..

ಇತ್ತೀಚಿಗೆ ಬನ್ನೇರುಘಟ್ಟದಲ್ಲಿರುವ ಚಿಟ್ಟೆ ಪಾರ್ಕಿಗೆ ಹೋಗಿದ್ದಿವಿ.

ರಾಷ್ಟ್ರೀಯ ಉದ್ಯಾನವನದ ಪಕ್ಕದಲ್ಲೇ ಇರುವ ಇದರಲ್ಲಿ ಸುಮಾರು ೨೦ ಪ್ರಬೇಧದ ಚಿಟ್ಟೆಗಳು ಇವೆಯಂತೆ. ನಾವು ಹೋದಾಗ ೪-೫ ತರವಷ್ಟೇ ಕಣ್ಣಿಗೆ ಬಿದ್ದವು.

ಸಾನ್ವಿಗೆ ಅಲ್ಲಿ ಹಾರಾಡುತ್ತಿದ್ದ ಬಣ್ಣದ ಚಿಟ್ಟೆ ತೋರಿಸಿದಾಗ , ಕಣ್ಣರಳಿಸಿ ನೋಡಿದಳು. ನಂತರ ಅವುಗಳನ್ನು ಹಿಡಿಯುವ ಪ್ರಯತ್ನವು ಸ್ವಲ್ಪ ಹೊತ್ತು ನಡೆಯಿತು !ಕೊನೆ ಪ್ರಯತ್ನವಾಗಿ ಅವುಗಳನ್ನು ಕೈಮೇಲೆ ಬಂದು ಕುಳಿತುಕೊಳ್ಳುವಂತೆ ಬಾ ಬಾ ಎಂದು ಕರೆದಳು !

ಅಷ್ಟರಲ್ಲಿ ಅಲ್ಲೇ ಹರಿಯುತ್ತಿದ್ದ ತೊರೆಯೊಂದರಲ್ಲಿರುವ ಮೀನುಗಳು ಕಂಡವು. ಚಿಟ್ಟೆ ಹಿಂದಿನ ಓಟ ಬಿಟ್ಟು, ಮೀನುಗಳ ಕಡೆ ಚಿತ್ತ ಹರಿಯಿತು. ಅವುಗಳನ್ನು ಸಾಕಷ್ಟು ಹೊತ್ತು ನೋಡಿ ಹೊರಬಂದಾಗ ಎದುರಿಗೆ ಜಾರಬಂಡಿ-ಜೋಕಾಲಿ. ಅವುಗಳ ಜೊತೆಯೂ ಆಟದ ನಂತರ ಸಾನ್ವಿ ಫುಲ್ ಖುಷ್ !

ಮನೆಗೆ ಮರಳುವಾಗ ಸಾನ್ವಿಗೆ ಇವತ್ತು ಏನು ನೋಡಿದೆ ಇಂದು ಕೇಳಿದಾಗ, ಹೇಳಿದ್ದು ಎರಡೇ..ಒಂದು ಪಿಶ್ ಮತ್ತು ಇನ್ನೊಂದು ಮಂಕಿ !

ಚಿಟ್ಟೆ ಪಾರ್ಕಿನ ಹೊರಗೆ ಮಂಗಗಳ ಚಿಕ್ಕ ಗುಂಪಿದೆ.  ಸಾನ್ವಿಯ ಅಮ್ಮನ ಕೈಯಲ್ಲಿ ಹಣ್ಣಿನ ಡಬ್ಬವೊಂದಿತ್ತು. ಒಂದು ಮಂಗ ಹತ್ತಿರ ಬಂದೊಡನೆ , ಕೈಯಲ್ಲಿದ್ದ ಡಬ್ಬವನ್ನು ಗಾಭರಿಯಿಂದ ಎಸೆದಿದ್ದಳು. ಮಂಗಗಳು ಡಬ್ಬದ ಹಣ್ಣುಗಳನ್ನು ಆರಿಸಿ ತಿಂದವು.

ಇದನ್ನು ನೋಡಿದ ಸಾನ್ವಿ....ಅಮ್ಮ ಹೇಗೆ ಡಬ್ಬ ದಪ್ ಅಂತ ಎಸೆದಳು, ಮಂಕಿ ಹೇಗೆ ಅಪ್ ಎಂದು ಜಂಪ್ ಮಾಡಿ ಡಬ್ಬ ಹಿಡಿಯಿತು, ನಂತರ ಮಂಕಿ ಹೇಗೆ ದ್ರಾಕ್ಷಿ ತಿಂದಿತು ಎಂಬ ಕತೆಯನ್ನು ಮನೆ ಮುಟ್ಟುವರೆಗೆ ಅಭಿನಯದೊಂದಿಗೆ
ಹೇಳುತ್ತಿದ್ದಳು !