Saturday, March 26, 2011

ಬಣ್ಣದ ಲೋಕ















ಜಿಗಿಜಿಗಿದು ಕುಣಿವ ಅಲೆಯ ನೀಲಿ
ಸುಯ್‍ಸುಯ್ ತೂಗೋ ಮರದ ಕಂದು
ಬಣ್ಣದ ಬೆರಗಿನ ಲೋಕವಿದು

ಚಿಲಿಪಿಲಿ ಉಲಿಯುವ ಗಿಳಿಯ ಹಸಿರು
ಜುಮುಜುಮು ತೂಗುವ ಹೂವಿನ ಕೇಸರಿ
ಬಣ್ಣದ ಬೆರಗಿನ ಲೋಕವಿದು

ಕರಕರ ಕಡಿಯುವ ಸೇಬಿನ ಕೆಂಪು
ಹನಿಹನಿ ಜಿನುಗುವ ಹಾಲಿನ ಬಿಳುಪು
ಬಣ್ಣದ ಬೆರಗಿನ ಲೋಕವಿದು

ಪಳಪಳ ಹೊಳೆವ ಕಿವಿಯೊಲೆ ಹಳದಿ
ಹಿಡಿಹಿಡಿ ಸಿಗುವ ಜಡೆ ಕಪ್ಪು
ಬಣ್ಣದ ಬೆರಗಿನ ಲೋಕವಿದು

ಬಗೆಬಗೆ ಬಣ್ಣ ಬಗೆಬಗೆ ವಿಧ
ಎಂತಹ ಸುಂದರ ಲೋಕವಿದು
ಬಣ್ಣದ ಬೆರಗಿನ ಲೋಕವಿದು

******************************
ಹೋಳಿ ಹಬ್ಬವನ್ನು ಬಣ್ಣದ ಸಡಗರದಿಂದ ಸಾನ್ವಿ ಆಚರಿಸಿದ ಕ್ಷಣಗಳಲ್ಲಿ..

18 comments:

  1. Sanvi is really colourful!so very cute!!

    ReplyDelete
  2. ಸಾನ್ವಿಯ ರಂಗು ರಂಗಾದ ಮುಖ ಸೂಪರ್!! ನಮ್ಮ ಸುತ್ತಲಿನ ಬಣ್ಣಗಳನ್ನು ವರ್ಣಿಸುತ್ತಾ ಬರೆದ ಸಾಲುಗಳೂ ಚೆನ್ನಾಗಿವೆ:))

    ReplyDelete
  3. saanvi rangu rangaagi kaaNtaa idaaLe.
    .....

    bareda saalugaLu chennaagive...

    ReplyDelete
  4. ಕೃಷ್ಣಮೂರ್ತಿ ಸರ್,
    ವಂದನೆಗಳು :)

    ReplyDelete
  5. ರೂಪಾ,
    ಧನ್ಯವಾದಗಳು..
    ಹಾಗೇ ನಿಮ್ಮ ಫ್ಯಾಮಿಲಿ ಥೀಮ್ ಚೆನ್ನಾಗಿ ಬರ್ತಿದೆ..

    ReplyDelete
  6. ದಿನಕರ್,
    ನಿಮ್ಮ ಮೆಚ್ಚುಗೆಗೆ ವಂದನೆಗಳು.

    ReplyDelete
  7. ಹೋಳಿ ಹಬ್ಬದ ಸಡಗರ ನಮ್ಮಲ್ಲೂ ಮೂಡಿಸಿದ ಸಾನ್ವಿಗೆ ಶುಭಾಶಯಗಳು.


    ಅನ೦ತ್

    ReplyDelete
  8. saanviya holi habbada varnane sundaravaagide.dhanyavaadagalu.

    ReplyDelete
  9. ಕಲರವದವರೇ,
    ನಿಮ್ಮ ಮೆಚ್ಚುಗೆಗೆ ನಮಸ್ಕಾರಗಳು

    ReplyDelete
  10. sanviya bannada loka nodi mechchuge ayitu :)

    ReplyDelete
  11. ಬಣ್ಣ ಬಣ್ಣದ ಲೋಕವನ್ನು ಬಹಳ ಸೂಗಸಾಗಿ ವರ್ನೀಸಿದಿರ

    ReplyDelete
  12. ರವಿ,
    ಸಾನ್ವಿ ಬ್ಲಾಗಿಗೆ ಸ್ವಾಗತ.
    ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು !

    ReplyDelete