Monday, February 7, 2011

Month Six

Play time is here !

Peek a Boo is her current favorite game.
She likes it when we hide behind a curtain or door and then appear before her with a boo !Even covering our face to hide and then booing also has same effect.

In front of mirror, she likes playing peek a boo with her image..

Then there is Jhoot-Moot. It will be Saanvi & mom trying to catch dad. After running around the house holding her, Saanvi simply can't stop laughing.

The love for fingers continue to grow along with the urge to grab and put things in mouth.

Saanvi started to eat the mashed carrot, peas & sweet potato. She tried the mashed banana but didn't like it much.

She celebrated Sankranti & attended a party at dad's office as well !


















ಇದು ಆಟದ ಸಮಯ !

ಕಣ್ಣಾಮುಚ್ಚೆ ತುಂಬಾ ಇಷ್ಟವಾಗೋ ಆಟ.

ಬಾಗಿಲು ಅಥವಾ ಪರದೆಯ ಹಿಂದೆ ಅವಿತು ನಂತರ ಬೂ ಮಾಡಿದರೆ ಸಿಕ್ಕಾಪಟ್ಟೆ ಇಷ್ಟ.
ಕೈಯಿಂದ ಮುಖ ಮುಚ್ಚಿಕೊಂಡು, ಹುಡುಕುವ ಹಾಗೆ ಮಾಡಿ ಬೂ ಮಾಡಿದರೂ ಖುಷಿ.
ಕನ್ನಡಿಯ ಮುಂದೆ ನಿಂತು, ತನ್ನ ಬಿಂಬದ ಜೊತೆ ಕಣ್ಣಾಮುಚ್ಚೆ ಆಡುವುದು ಸಹ ಇಷ್ಟ.

ಇನ್ನು ಜೂಟ್-ಮುಟ್ ಆಟದಲ್ಲಿ ಸಾನ್ವಿ ಮತ್ತು ಅಮ್ಮ , ಅಪ್ಪನನ್ನು ಹಿಡಿಯಲು ಮನೆ ತುಂಬಾ ಓಡುವುದು ಸಾನ್ವಿಗೆ ಬಹಳ ನಗು ತರಿಸುವ ಆಟ.

ಎಂದಿನಂತೆ ಬೆರಳುಗಳ ಬಗೆಗಿನ ಪ್ರೀತಿ ಇದ್ದೆ ಇದೆ.

ಕೈಯೆಗೆ ಸಿಕ್ಕಿದ್ದನ್ನು ಬಾಯಿಗೆ ಹಾಕಿಕೊಳ್ಳುವ ಹುನ್ನಾರವು ಇರುತ್ತೆ.

ಗಂಧಕ್ಕಿಂತ ನುಣುಪಾಗಿ ಮಾಡಿದ ಗೆಜ್ಜರಿ, ಬಟಾಣಿ ಮತ್ತು ಸಿಹಿಗೆಣಸು ಸವಿಯಲು ಆರಂಭಿಸಿದ್ದಾಳೆ. ಬಾಳೆಹಣ್ಣಿನ ರುಚಿ ಅಷ್ಟು ಇಷ್ಟವಾಗಲಿಲ್ಲ..

ಈ ಮಾಸದಲ್ಲಿ ಸಾನ್ವಿಯ ಸಂಕ್ರಾಂತಿ ಆಚರಣೆ ನಡೆಯಿತು. ಹಾಗೆಯೇ ಅಪ್ಪನ ಅಫೀಸ್ ಪಾರ್ಟಿಗೂ ಸಾನ್ವಿ ಭೇಟಿ ನೀಡಿದ್ದಳು !

14 comments:

  1. ಅರ್ಧವರ್ಷದ ಸಾನ್ವಿಗೆ ಶುಭಾಶಯಗಳು. `ಬೂ' ಆಟ ಬಹಳ ಚೆನ್ನಾಗಿದೆ! ನಿಮ್ಮ ಆಟಕ್ಕೆ ನಾವು ಪ್ರತ್ಯಕ್ಷ ದರ್ಶಿಗಳು. ನನ್ನ ಬ್ಲಾಗ್ ಗೆ ಒಮ್ಮೆ ಬನ್ನಿ.

    ReplyDelete
  2. ಸಾನ್ವಿ ಗೆ ಆರು ತಿಂಗಳು ತುಂಬಿ ಹೊಸ ಆಟ ,ಕೇಕೆ, ನಗು, ತುಂಟಾಟಗಳ ಕಲರವ ಮನೆ ತುಂಬಿದೆ. ಮಗುವು ನೀಡುವ ಈ ಆನಂದಕ್ಕೆ ಯಾವ ಸ್ವರ್ಗ ಸಮ ಹೇಳಿ. ನಿಮಗೆ ಶುಭಾಶಯಗಳು.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  3. Oh,Sanvi is already six month..time flew with kid :)-

    ReplyDelete
  4. ಶಿವ್
    ಸಾನ್ವಿಯ ಹೊಸ ಆಟ ಇಷ್ಟವಾಯ್ತು.
    ಮುದ್ದಾಗಿದ್ದಾಳೆ ಸಾನ್ವಿ.

    ಪ್ರೀತಿಯಿಂದ,
    -ಶಾಂತಲಾ ಭಂಡಿ

    ReplyDelete
  5. ಪ್ರಭಾ ಅವರೇ,
    ನಿಮ್ಮ ಮೆಚ್ಚುಗೆಗೆ ವಂದನೆಗಳು.

    ReplyDelete
  6. ಬಾಲು,
    ನಿಮ್ಮ ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  7. ಶಾಂತಲ,
    ನಿಮ್ಮ ಪ್ರೀತಿಪೂರ್ವಕ ಹಿತನುಡಿಗಳಿಗೆ ವಂದನೆಗಳು.

    ReplyDelete
  8. muddu makkala aatadalli maimaretare svargakke kicchu hacchida haage.nimmahaage naanu nanna mommaganondige kaleduhogibidtene.olle lekhana.

    ReplyDelete
  9. ಕಲಾವತಿಯವರೇ
    ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು !

    ReplyDelete