Wednesday, November 10, 2010

Month Three

Smiling wins !

Looks like that is what she is learning !!

Saanvi has learnt to smile whenever somebody speaks with her. Smiling starts since the time she wakes up and gets into peak mode when we get into talks with her. She gets into story telling mode and tries hard to explain something. Most of the times, she tries so hard that she ends up getting hicups.

Focus from milk seems to be deviated and she is more interested to view surroundings & outside. Even while drinking milk, she gets into the mood to tell tales. Sometimes starts throwing tantrums while drinking milk. In summary, feeding milk is becoming a new adventure for Saanvi's mom.

Sleeping looks to be totally shifted to night and she is enjoying a decent sleep in night. However it is difficult to make her sleep during day time.

She wants us to pick her up when she starts making sounds. After picking her up, she waits for sometime to see if we move. If we don't move, then again the unrest will start.

Best time is when she wakes up in the morning. She will be in a jovial mode talking to all the toys and pictures, making loud noises.

She celebrated her first Sarswati pooja, Dasara, Halloween and Deepavali. She had been to temple, toys r us and for trick/treat.

Feature of the month: Saanvi's mom trying to feed her and Saanvi doing little stunts as if she is not hungry or ready. So she is put down and immediately she keeps her hands in the mouth and start licking them as if she is hungry !

Overall it has been a fun month !



ನಗು ನಗುತಾ ನಲಿ..

ಮುಖದ ನೋಡಿದ ಕೂಡಲೇ ನಗುವುದನ್ನು ಸಾನ್ವಿ ಕಲಿತದ್ದು ಹೊಸದು. ಬೆಳಿಗ್ಗೆ ಎದ್ದಾಗಿನಿಂದ ಸಾನ್ವಿ ಮಂದಹಾಸ ಕಾರ್ಯಕ್ರಮ ಶುರುವಾಗುತ್ತೆ. ನಾವು ಹೋಗಿ ಸಾನ್ವಿ ಮುಂದೆ ನಿಂತರೆ, ನಗು ಹೆಚ್ಚಾಗುತ್ತೆ ಹಾಗೇ ಕಥಾ ಕಾಲಕ್ಷೇಪ ಆರಂಭವಾಗುತ್ತೆ. ಏನೋ ವಿಷಯವನ್ನು ವಿವರಿಸುವ ಯತ್ನದಲ್ಲಿರುವಂತೆ ತೋರುತ್ತದೆ. ಬಹುತೇಕ ಸಂದರ್ಭಗಳಲ್ಲಿ ಆ ಯತ್ನದಲ್ಲೇ ಬಿಕ್ಕಳಿಕೆ ಪ್ರಾರಂಭವಾಗುವುದುಂಟು.

ಹಾಲಿನ ಬಗ್ಗೆ ಮೊದಲಿಗಿಂತ ಆಸಕ್ತಿ ಕಡಿಮೆ ಆಗಿದೆ. ಯಾವಾಗಲೂ ಸುತ್ತಮುತ್ತ ಮತ್ತು ಹೊರಗೆ ನೋಡುವ ತವಕ. ಹಾಲು ಕುಡಿಯುವಾಗಲೂ ಸಾನ್ವಿಯಿಂದ ಕೆಲವೊಮ್ಮೆ ಯಾವುದೋ ಕತೆ ಹೇಳುವ ಪ್ರಯತ್ನ ನಡೆಯುತ್ತದೆ. ಇನ್ನು ಕೆಲವೊಮ್ಮೆ ಹಾಲು ಕುಡಿಯುವಾಗಲೇ ಸಾನ್ವಿಯ ಸಣ್ಣಪುಟ್ಟ ತರಲೆ ಹಟಗಳು ಶುರುವಾಗುತ್ತವೆ. ಒಟ್ಟಾರೆ, ಸಾನ್ವಿಯ ಅಮ್ಮನಿಗೆ ಹಾಲು ಕುಡಿಸುವುದು ಒಂದು ಹೊಸ ಸಾಹಸ !

ನಿದ್ದೆ ಈಗ ರಾತ್ರಿಗೆ ಸರಿದಿದೆ. ದಿನದ ಹೊತ್ತಿನಲ್ಲಿ ಮಲಗಿಸುವುದು ಕಷ್ಟ, ಆದರೆ ರಾತ್ರಿಯಲ್ಲಿ ಸಾನ್ವಿಯ ಒಳ್ಳೆ ನಿದ್ದೆಯಾಗುತ್ತಿದೆ.

ಸದ್ದು ಮಾಡುತ್ತಿದ್ದರೆ ನಾವು ಎತ್ತಿಕೊಳ್ಳಬೇಕೆಂಬಂತೆ ನೋಡುವುದು ನಡೆಯುತ್ತದೆ. ಎತ್ತಿಕೊಂಡ ನಂತರ ಅಲ್ಲಾಡದೆ ಒಂದೆಡೆ ನಿಂತಿದ್ದರೆ, ಮತ್ತೆ ಅದಕ್ಕೆ ಗಲಾಟೆ ಶುರುವಾಗುತ್ತದೆ.

ದಿನದ ಉತ್ತಮ ಸಮಯ ಸಾನ್ವಿ ಎದ್ದಾಗ. ಗೋಡೆಯ ಮೇಲಿನ ಪ್ರಾಣಿಗಳು , ಪಕ್ಕದಲ್ಲಿನ ಗೊಂಬೆಗಳೊಡನೆ ಎದ್ದ ಕೂಡಲೇ ಸಾನ್ವಿಯ ಸಂಭಾಷಣೆ ಶುರುವಾಗಿರುತ್ತದೆ.

ಈ ತಿಂಗಳಲ್ಲಿ ಸಾನ್ವಿಯ ಮೊದಲ ಸರಸ್ವತಿ ಪೂಜೆ, ದಸರಾ, ಹ್ಯಾಲೋವಿನ್, ದೀಪಾವಳಿ ಆಚರಣೆಗಳು ನಡೆದವು. ಹಾಗೇ ಸಾನ್ವಿಯ ಸವಾರಿ ದೇವಾಲಯ, ಟಾಯ್ಸ್ ರ್ ಅಸ್ ಮತ್ತು ಟ್ರಿಕ್-ಟ್ರೀಟ್‍ಗೆ ಹೋಗಿತ್ತು.

 ತಿಂಗಳ ವಿಶೇಷ: ಸಾನ್ವಿಯ ಅಮ್ಮ ಹಾಲು ಕುಡಿಸಲು ಹೋದರೆ, ಸಾನ್ವಿ ಹಸಿವು ಆಗೇ ಇಲ್ಲವೇನೋ ಎಂಬಂತೆ ಆಟಗಳನ್ನು ಆಡುವುದು. ಕೆಳಗಿಸಿದ ತಕ್ಷಣವೇ ತುಂಬಾ ಹಸಿವು ಎಂಬಂತೆ ತನ್ನ ಕೈಗಳನ್ನು ಬಾಯಿಯಲ್ಲಿ ಇಟ್ಟುಕೊಳ್ಳುವುದು !

ಒಟ್ಟಾರೆ ಈ ತಿಂಗಳು ಸುಂದರವಾಗಿತ್ತು !!

12 comments:

  1. ಸಾನ್ವಿ ಮುದ್ದಾಗಿದೆ.ಅದರ ನಗು,ಕೇಕೆಗಳನ್ನು ರೆಕಾರ್ಡ್ ಮಾಡಿ ಬ್ಲಾಗಿಸಲು ಸಾಧ್ಯವೇ? ಧನ್ಯವಾದಗಳು.

    ReplyDelete
  2. ಕೃಷ್ಣಮೂರ್ತಿ ಸರ್,
    ನಿಮ್ಮ ಮೆಚ್ಚುಗೆಗೆ ವಂದನೆಗಳು.
    ಮುಂದಿನ ಕಂತುಗಳಲ್ಲಿ ಆಡಿಯೋ ಹಾಕುವ ಪ್ರಯತ್ನಮಾಡುತ್ತೇವೆ.

    ReplyDelete
  3. ಸಾನ್ವಿ ಮುದ್ದಾಗಿದ್ದಾಳೆ! ಮಕ್ಕಳ ಮಂದಹಾಸ, ಹೂಂಕಾರ ಎಲ್ಲವೂ ಚೆಂದ !! ಅಂದಹಾಗೆ ನಿಮ್ಮ ಸಾನ್ವಿಯನ್ನು ನನ್ನ ಪುಟ್ಟಿಪ್ರಪಂಚದ ಬಳಗದಲ್ಲಿ (blog roll) ಸೇರಿಸಿಕೊಳ್ಳ ಬಹುದೇ?
    ರೂಪ

    ReplyDelete
  4. ಮನಮುಕ್ತಾ,

    ಮೆಚ್ಚುಗೆಗೆ ಧನ್ಯವಾದಗಳು :)

    ReplyDelete
  5. ಪುಟ್ಟಿಯ ಅಮ್ಮ,

    ವಂದನೆಗಳು.
    ಖಂಡಿತವಾಗಿ ನಿಮ್ಮ ಬಳಗದಲ್ಲಿ ಸೇರಿಸಿಕೊಳ್ಳಿ..

    ReplyDelete
  6. putti saanvi muddu muddagiddale photodalli.. .. saanvi muddatavannu vivaravaagi, namgu avala jote bereyuvante vivarisadakke danya vaada sir-madam...

    mundina tingala avala mattastu muddatavannu kelalu nodalu kayta irtini.. saanvi ge hi helbidi....

    ReplyDelete
  7. ನನ ಬ್ಲಾಗ್ಗೆ ಬಂದು ಕಮೆಂಟ್ ಹಾಕಿದ್ದಕ್ಕಾಗಿ ಧನ್ಯವಾದಗಳು.
    ಸಾನ್ವಿ ಮುದ್ದಾಗಿದ್ದಾಳೆ. ಬರಹವೂ ಮುದ್ದಾಗಿದೆ.
    Please post your comments in English fonts.
    I can read it in my mobile

    ReplyDelete
  8. ತರುಣ್,
    ನಿಮ್ಮ ಮೆಚ್ಚುಗೆಯ ಪ್ರೀತಿಯ ನುಡಿಗಳಿಗೆ ಥ್ಯಾಂಕ್ಸ್ :)

    ReplyDelete
  9. ಬದರಿನಾಥ್,

    ಸಾನ್ವಿ ಬ್ಲಾಗ್‍ಗೆ ಬಂದು ಪ್ರತಿಕ್ರಿಯಸಿದ್ದಕ್ಕೆ ಧನ್ಯವಾದಗಳು !

    ReplyDelete
  10. sundara magu.

    magu vikaasavaadanthe appa -amma koodaa eshtondu gamanisalu shuru maadtheve..allave..?
    namma maguthanavannu adaralli hudukutteve.. allave..?

    sundara blogu

    ReplyDelete
  11. ಚುಕ್ಕಿ ಚಿತ್ತಾರ,

    ಸಾನ್ವಿ ಜೊತೆಯಲಿ ಹೆಜ್ಜೆ ಹಾಕಲು ಬಂದಿದ್ದಕ್ಕೆ ಧನ್ಯವಾದಗಳು.

    ನಿಮ್ಮ ಮಾತು ಅಕ್ಷರಶಃ ನಿಜ..ನಾವು ಮಗುವಿನ ಜೊತೆ ಮಗುವಾಗಿ ನಮ್ಮ ಬಾಲ್ಯವನ್ನು ಹುಡುಕುತ್ತೇವೆ.

    ನಿಮ್ಮ ಮೆಚ್ಚುಗೆಗೆ ವಂದನೆಗಳು

    ReplyDelete