ಮೊನ್ನೆ ಅಮ್ಮನ ಜೊತೆ ಪೋನ್‍ನಲ್ಲಿ ಮಾತಾಡುವಾಗ ಬಹಳ ಸಂಭ್ರಮದಿಂದ ಕೇಳಿದಳು - ’ಮನೆ ಕ್ಲೀನ್ ಮಾಡುವಾಗ ಏನು ಸಿಗ್ತು ಹೇಳು ನೋಡೋಣಾ’ ?
ಚಿಕ್ಕವನಿದ್ದಾಗಿನ ನನ್ನ ಅಂಗಿ ಗುಂಡಿಗಳ(ಬಟನ್) ಬಗೆಗಿನ ಆಸಕ್ತಿ, ಅಪ್ಪನ ಜೊತೆ ಹಾರಿಸುತ್ತಿದ್ದ ಗಾಳಿಪಟಗಳು..ಹಾಗೇ ಅನೇಕ ದೃಶ್ಯಾವಳಿಗಳು ಕಣ್ಮುಂದೆ ಸಾಗಿ ಹೋದವು. ನಾನು ಆ ಡಬ್ಬ, ಅ ಬಣ್ಣದ ಗುಂಡಿಗಳನ್ನು ಬಹುತೇಕ ಮರತೇ ಬಿಟ್ಟಿದ್ದೆ. ಆದರೆ ಅಮ್ಮ ಅದನ್ನು ಇಷ್ಟು ವರ್ಷ ಜೋಪಾನವಾಗಿ ಎತ್ತಿಟ್ಟಿದ್ದು ಮತ್ತು ಆ ಡಬ್ಬ ಸಿಕ್ಕಾಗ ಸಂಭ್ರಮಿಸಿದ ರೀತಿ ನನಗೆ ವಿಸ್ಮಯವುಂಟು ಮಾಡಿತ್ತು.
ಅದರ ಬಗ್ಗೆ ಯೋಚಿಸುತ್ತಿರುವಾಗ, ಸಾನ್ವಿ ಅಮ್ಮ ಚೀಲವೊಂದರಲ್ಲಿ ಏನೋ ಜೋಡಿಸುತ್ತಿದ್ದಳು. ನೋಡಿದರೆ ಸಾನ್ವಿಯ ಪುಟ್ಟ ಬಟ್ಟೆಗಳು.
ಈ ಚಿಕ್ಕದಾದ ಬಟ್ಟೆಗಳಲ್ಲಿ ಸಾನ್ವಿಯ ಬಾಲ್ಯದ ನೆನಪುಗಳನ್ನು ಹೆಕ್ಕಿ ಜೋಪಾನವಾಗಿ ಇಟ್ಟುಕೊಳ್ಳುವ ಪ್ರಯತ್ನದಲ್ಲಿದಂತೆ ಸಾನ್ವಿಯ ಅಮ್ಮ ಕಂಡಳು. ಆ ಬಟ್ಟೆಗಳನ್ನು ಸಾನ್ವಿ ಅಮ್ಮ ಜೋಪಾನಿಸುತ್ತಿದ್ದ ರೀತಿ ಮತ್ತು ಅದರ ಬಗೆಗಿನ ಪ್ರೀತಿ ನೋಡುತ್ತಿದ್ದೆ.
ಬಣ್ಣದ ಗುಂಡಿ-ಗಾಳಿಪಟದ ದಾರದುಂಡೆ ಕಂಡ ಅಮ್ಮನ ಸಂಭ್ರಮ ಈಗ ನನಗೆ ಅರ್ಥವಾಗತೊಡಗಿತ್ತು.
ಆ ಡಬ್ಬದಲ್ಲಿ , ಪುಟಾಣಿ ಬಟ್ಟೆಗಳಲ್ಲಿ, ಆ ಗಾಳಿಪಟ ದಾರದಲ್ಲಿ ಬಾಲ್ಯದ ಕೊಂಡಿಗಳು ಹೆಣೆದುಕೊಂಡದ್ದು ಗೋಚರವಾಗಿತ್ತು.
ಚಿಕ್ಕದಾದ ಬಟ್ಟೆಗಳನ್ನು ಜೋಡಿಸುವ ಸಾನ್ವಿ ಅಮ್ಮನ ಕಾರ್ಯ ಮುಂದುವರೆದಿತ್ತು.
ಇದ್ಯಾವುದರ ತಂಟೆಯಿಲ್ಲದೆ ಸಾನ್ವಿ ತನ್ನ ಪಾಡಿಗೆ ತಾನು ಆಡುತ್ತಿದ್ದಳು.
ನೆನಪುಗಳು ಹಾಗೇ.ಯಾವುದೋ ಕೊಂಡಿ,ಯಾವುದೋ ಸುಂದರ ನೆನಪುಗಳ ಸರಮಾಲೆಯನ್ನೇ ಬಿಚ್ಚಿಡುತ್ತದೆ.ಕಾಲೇಜಿನ ನೆನಪೊಂದನ್ನು ಬ್ಲಾಗಿನಲ್ಲಿ ಹಂಚಿಕೊಂಡಿದ್ದೇನೆ.ಭೇಟಿಕೊಡಿ.ನಮಸ್ಕಾರ.
ReplyDeletenice :) ನಾನು ನನ್ನ ಮಗಳು ಪುಟ್ಟಪಾಪುವಾಗಿದ್ದಾಗ ಹಾಕುತ್ತಿದ್ದ ಬಟ್ಟೆಗಳನ್ನೊಮ್ಮೆ ತೆಗೆದು ಸವರಿದೆ.
ReplyDeleteಸವಿ ನೆನಪು ಬೇಕು ಸವಿಯಲೀ ಬದುಕು :)))
ReplyDeleteಕೃಷ್ಣಮೂರ್ತಿ ಸರ್,
ReplyDeleteಧನ್ಯವಾದಗಳು..ನೀವು ಹೇಳಿದ ಹಾಗೆ ನೆನಪಿನ ಸುರಳಿ ಬಿಚ್ಚಕೊಳ್ಳುತ್ತಾ ಹೋಗುತ್ತೆ.
ಸುಮ,
ReplyDeleteಮನಕ್ಕೆ ಮುದ ನೀಡುವ ಮಗುವಿನ ಸಾಂಗತ್ಯ ಎಷ್ಟೊಂದು ಹಿತಕರ !
ಪುಟ್ಟಿಯ ಅಮ್ಮ,
ReplyDeleteವಂದನೆಗಳು ನಿಮ್ಮ ಪ್ರತಿಕ್ರಿಯೆಗೆ :)
ಬರಹ ಓದಿ ಮನಸ್ಸು ಕೆಲ ಸಮಯದ ಹಿ೦ದೆ ನಡೆಯಿತು.ಇ೦ತಹ ನೆನಪುಗಳನ್ನು ನೆನಸಿಕೊ೦ಡಷ್ಟೂ ಅವುಗಳ ಸಿಹಿ ಹೆಚ್ಚಾಗುತ್ತದೆ.
ReplyDeletecute saanvi..
ಮನಮುಕ್ತಾ
ReplyDeleteಧನ್ಯವಾದಗಳು !
savi savi nenanpu...saavir nenapu!!!!!!!
ReplyDeleteಮಹಾಂತೇಶ್,
ReplyDeleteಹೌದು :)
ಧನ್ಯವಾದಗಳು