Wednesday, September 29, 2010

ಬೆಳದಿಂಗಳ ಮರಿ


ಬೆಳದಿಂಗಳ ಮರಿ
ನಕ್ಷತ್ರ ತೊಟ್ಟಿಲಲಿ
ಚಂದ್ರನ ತುಂಡು
ದಿಂಬಾಗಿಸಿ ಮಲಗಿತ್ತೋ

ಜೋಗುಳ ಪದ
ಹಕ್ಕಿಯ ಹಾಡಲ್ಲಿ
ಬೆಳದಿಂಗಳ್ಮರಿ ಕಂಡು
ಪಿಸುಮಾತಲಿ ಹಾಡಿತ್ತೋ

ಮುಂಜಾವು ರವಿ
ಮೂಡಲ ಮನೆಯಲಿ
ಮೋಡದ ಹಿಂದೆ
ಸರಿದು ಕಾದಿತ್ತೋ

ಮೂಡಲ ಮನೆಯಾಚೆ
ಇಣುಕುವುದು ಯಾವಾಗ
ರವಿ ಕೇಳಲು
ಹಕ್ಕಿ ಉಲಿಯಿತು
ಬೆಳದಿಂಗಳ್ಮರಿ ಎದ್ದಾಗ

12 comments:

  1. ಚೆ೦ದದ ಸಾಲುಗಳು...
    ಬೆಳದಿ೦ಗಳ್ಮರಿಗೆ ಹಕ್ಕಿಗಳ ಪಿಸುಮಾತಿನ ಜೋಗುಳ...ವಾಹ್..!

    ReplyDelete
  2. ಮನಮುಕ್ತಾ,
    ಸುಮ್ಮನೆ ಹಾಗೇ ಗೀಚಿದ ಸಾಲುಗಳು ..
    ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು

    ReplyDelete
  3. ಬೆಳದಿಂಗಳ ಮರಿ..ಎನ್ನುವ ಕಲ್ಪನೆಯೇ ಹೊಸತು ಅನ್ನಿಸುತ್ತೆ. ಆದಕ್ಕೆ ಹಕ್ಕಿಗಳ ಕಲರವದ ಸಿಂಚನ...ಚೆಂದದ ಕವನ..

    ReplyDelete
  4. ಸುಂದರ ಸಾಲುಗಳು!! ಪುಟ್ಟ ಸಾನ್ವಿಗೆ ಶುಭ ಹಾರೈಕೆಗಳು:)

    ReplyDelete
  5. ಮಹಾಂತೇಶ್,
    ನಿಮ್ಮ ಮೆಚ್ಚುಗೆಗೆ ಥ್ಯಾಂಕ್ಸ್ !

    ReplyDelete
  6. ಶಿವು ಅವರೇ,
    ಸಾನ್ವಿ ಬ್ಲಾಗಿಗೆ ಸ್ವಾಗತ !
    ನಿಮಗೆ ಇಷ್ಟವಾಗಿದ್ದಕ್ಕೆ ಸಂತೋಷವಾಯ್ತು

    ReplyDelete
  7. ಪುಟ್ಟಿಯ ಅಮ್ಮ,
    ಸಾನ್ವಿ ಬ್ಲಾಗಿಗೆ ನಿಮಗೂ ಸ್ವಾಗತ...
    ನಿಮ್ಮ ಪ್ರೀತಿಗೆ ವಂದನೆಗಳು

    ReplyDelete
  8. hmmm. super agide papu saanvi....

    ಬೆಳದಿಂಗಳ ಮರಿ.. eno hosa pada... hosatana tumbide...

    ReplyDelete
  9. ತರುಣ್,

    ಸಾನ್ವಿ ಬ್ಲಾಗಿಗೆ ಸುಸ್ವಾಗತ !
    ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

    ReplyDelete
  10. ವೆಂಕಟಕೃಷ್ಣ ಅವರೇ,
    ಸಾನ್ವಿ ಬ್ಲಾಗಿಗೆ ಸ್ವಾಗತ !

    ReplyDelete