Tuesday, September 7, 2010

ಒಂದು ತಿಂಗಳಲ್ಲಿ (Month One)

ಒಂದು ತಿಂಗಳಲ್ಲಿ ಸಾನ್ವಿ ಚೂರು ಉದ್ದ ಆಗಿದ್ದಾಳೆ ಹಾಗೆಯೇ ಸ್ಚಲ್ಪ ತೂಕ ಹೆಚ್ಚಿಗೆ ಆಗಿದೆ.

ಸಾನ್ವಿ ಈಗ ಕತ್ತು ಎತ್ತಿ ನಮ್ಮನ್ನು ನೋಡ್ತಾಳೆ. ನಾವು ಮುಂದೆ ಆಡಾಡ್ಡಿದರೆ ಪುಟ್ಟ ಕಣ್ಣುಗಳು ನಮ್ಮನ್ನು ಹಿಂಬಾಲಿಸುತ್ತವೆ.

ಬೆನ್ನು ಮೇಲೆ ಮಾಡಿ , (ಮರಿ)ಅಜ್ಜಿ ಕಾಲ ಮೇಲೆ ಮಲಗಿ, ಎಣ್ಣೆ ಮಾಲೀಶ್ ಮಾಡಿಸಿಕೊಳ್ಳೋದು ಸಾನ್ವಿಗೆ ತುಂಬಾ ಇಷ್ಟ.ಎಣ್ಣೆ ಮಾಲೀಶ್ ನಂತರ ಬಿಸಿಬಿಸಿ ನೀರು ಎಷ್ಟು ಹಾಕಿದರೂ ಚಿಂತೆಯಿಲ್ಲ.

ಆದರೆ ಅಲ್ಲಿಂದ ಎಬ್ಬಿಸಿ ನೆಟ್ಟಗೆ ಕುಳಿಸಿಕೊಂಡು ನೀರು ಹಾಕೋದು ಚೂರು ಇಷ್ಟ ಇಲ್ಲ. ಭಾರೀ ಬೇಜಾರು, ಅಳು ಬಂದೇ ಬಿಡುತ್ತೆ ಸಾನ್ವಿಗೆ !

ಬೆಳಕಿನ ಕಡೆ ಜಾಸ್ತಿ ಆಸಕ್ತಿ. ಕಿಟಕಿ-ಬಾಗಿಲು ಎಲ್ಲಿ ಬೆಳಕು ಬರುತ್ತೋ ಆ ಕಡೆ ಗಮನ.

ಸಂಗೀತದ ಅಲೆಗಳು ಬಹುಷಃ ಇಷ್ಟ. ತೂಗು ಕುರ್ಚಿಯಲ್ಲಿ ಸಂಗೀತ ಹಾಕಿದ ಕೂಡಲೇ ಚಿತ್ತ ಆ ಕಡೆ ಹರಿಯುತ್ತೆ.

ಬಹುತೇಕ ದಿನಗಳಂದು ರಾತ್ರಿ ಪಾಳಿಯಲ್ಲಿ ಸಾನ್ವಿಯವರ ಕೆಲಸ ಜೋರು ! ಮಧ್ಯರಾತ್ರಿ ಅಸುಪಾಸಿನಲ್ಲಿ ಶುರುವಾಗುವ ಆಟದ ಸಮಯ ಕೆಲವೊಮ್ಮೆ ಮುಂಜಾವಿನವರೆಗೆ ನಡೆಯುತ್ತೆ.

ಮಲಗಿದಾಗ ಪುಟ್ಟ ಮುಖದ ಮೇಲೆ ಮೂಡುತ್ತೆ ಚೆಂದದ ನಗು. ಪುಟ್ಟ ಕಂದ ಯಾಕೇ ನಗುತ್ತೆ ಅಂತಾ ಗೊತ್ತಿಲ್ಲಾ, ಆದರೆ ಅದು ಮಂದಹಾಸ ಬೀರೋದು ನೋಡುವುದು ಒಂದು ಹಬ್ಬ.



Saanvi has grew little taller and added little weight.

She lifts her head and follows us as we move around.

Favorite activity is getting oil massage from granny while laying on granny's legs. She doesn't mind pouring any amount of hot water after that..
 
But problem comes when she is made to sit straight and water is poured. She gets annoyed and big cry always follows.
 
Light interests her a lot. She looks at windows and doors from where light peeks in.
 
Music probably soothes her. She seems like listening to it when music on her bouncer is turned on.
 
She is very active in night slots. Usually she starts playing around midnight and sometimes keeps going till early hours.
 
Best part so far has been the cute smile on her face when she is sleeping. Not sure though why babies smile, but its incredibly beautiful to watch !

8 comments:

  1. ಮುದ್ದು ಸಾನ್ವಿಯ ನಗು,ಹಾವಭಾವದ ವರ್ಣನೆ ಸು೦ದರವಾಗಿದೆ.
    ನನ್ನ ಮಕ್ಕಳು ಮಗುವಿದ್ದಾಗ ಅವರಿಗೆ ಮಾಡಿಸುತ್ತಿದ್ದ ಎಣ್ಣೇ ಸ್ನಾನ.. ದಿನಕ್ಕೆರಡು ಬಾರಿ ಮಾಲಿಶು..ರಾತ್ರಿ ಜಾಗರಣೆ.. ಮುಖ ನೊಡಿದ ಕೂಡಲೆ ಪಳಕ್ಕನೆ ನಗುವುದು.. ಎಲ್ಲಾ ನೆನಪಿಗೆ ಬ೦ದವು. :)ಧನ್ಯವಾದಗಳು.

    ReplyDelete
  2. ಮನಮುಕ್ತಾ,
    ನಿಮ್ಮ ಪ್ರತಿಕ್ರಿಯೆ-ಮೆಚ್ಚುಗೆಗೆ ಧನ್ಯವಾದಗಳು.
    ನಿಮ್ಮ ನೆನಪು ಹಂಚಿಕೊಂಡಿರಿ..ಅದು ಸುಂದರವಾಗಿತ್ತು.

    ReplyDelete
  3. Time just flies ... One month already ...
    tayinaadige yaavaga bartiddare Saanvi? :)

    ReplyDelete
  4. Rich!
    Yep..its already 1 month !
    Saanvi mundina varshadalli bartidare :)

    ReplyDelete
  5. vaaw... ondu tingaLaaytaa saanvige....
    mudaagi kaaNtaa iddaaLe....

    god bless her...

    ReplyDelete
  6. so magala jote jagarane nadita ide anni!!!!!!!!!

    ReplyDelete
  7. ದಿನಕರ್,

    ನಿಮ್ಮ ಪ್ರೀತಿಗೆ ಶರಣು..
    ಧನ್ಯವಾದಗಳು !

    ReplyDelete
  8. ಮಹಾಂತೇಶ್,
    ಹೂ೦ ಸಾರ್..ಜಾಗತೇ ರಹೋ :)

    ReplyDelete