Wednesday, October 6, 2010

Month Two

Its 2 months now !

Saanvi has become more vocal.

She is using the repeated short cries to demand the milk. Latest use of her cry is simply to grab our attention. When she thinks that she is alone and want people around her, she lets our the shrill cry !She stops the cry as soon as we pick her up.

No clear sleep pattern still.

But mostly she is getting into very short burst of sleeps. Sometimes it takes so much time to put her to sleep but only to find that she wakes up in next 5-10 minutes. Other times, as usual the night shifts continue.

She looks like started gazing at the pictures of the animals which are decorated on walls of her room.

When we keep talking to her sometimes with animated movements and voices, Saanvi gets excited & starts smiling. She makes faces as if she wants to say something. Often we have heard some sylabbles like 'aaa..kkkkkkk'. Her mom & granny are confident that she says 'aakka' !

Fun episode:
One day, I was speaking to her as if she understands what I was speaking and asked her 'do you know what Basavanna has said about younger ones'. She was looking at my face when I was speaking and as soon as I finished, she opened her mouth and said something which sounded like 'o.....kkkkkkkkk'.  We all burst laughing; thanking Saanvi to say its ok for me to explain what Basavanna told !



ಆಗಲೇ ೨ ತಿಂಗಳಾಯ್ತು !

ಸಾನ್ವಿ ಬಾಯಿ ಜೋರಾಗಿದೆ..
ಪದೇ ಪದೇ ಸ್ಪಲ್ಪ ಅತ್ತರೆ, ಬಹುತೇಕ ಸಂದರ್ಭದಲ್ಲಿ ಹಾಲಿಗೋಸ್ಕರ. ನಮ್ಮ ಗಮನವನ್ನು ತನ್ನತ್ತ ಸೆಳೆಯುವುದು ತನ್ನ ಕೂಗಿನಿಂದ ಸಾಧ್ಯ ಎಂಬುದು ಹೊಸ ಕಲಿಕೆ. ಅಕ್ಕಪಕ್ಕದಲ್ಲಿ ಯಾರು ಇಲ್ಲಾ ಎಂದೆನಿಸಿದಾಗ, ಒಂದು ಜೋರು ಆವಾಜ್ ಬರುತ್ತದೆ. ಎತ್ತಿಕೊಂಡ ಕೂಡಲೇ ಗಪ್‍ಚುಪ್ !

ನಿದ್ದೆಯ ವಿಷಯದಲ್ಲಿ ಇನ್ನೂ ಯಾವುದೇ ನಿಯಮಿತ ವೇಳಾಪಟ್ಟಿ ಜಾರಿಗೆ ಬಂದಿಲ್ಲ..

ಬಹುತೇಕ ’ಕೋಳಿ’ ನಿದ್ದೆ ಜಾಸ್ತಿ. ಮಲಗಿಸಲು ಅರ್ಧಗಂಟೆ ತಗೊಂಡರೆ, ಸಾನ್ವಿಗೆ ನಿದ್ದೆಯಿಂದ ಎಳೋಕೇ ೫-೧೦ ನಿಮಿಷ ಸಾಕು. ಉಳಿದಂತೆ ರಾತ್ರಿ ಪಾಳಿ ಮುಂದುವರೆದಿದೆ.

ಸಾನ್ವಿ ರೂಮಿನ ಗೋಡೆಯ ಮೇಲೆ ವಿವಿಧ ಪ್ರಾಣಿ-ಪಕ್ಷಿಗಳ ಚಿತ್ರಗಳಿವೆ. ಈಗೀಗ ಅವುಗಳ ಕಡೆ ನೋಡುತ್ತಿದ್ದಾಳೋ ಅನಿಸಿತು.

ಸಾನ್ವಿ ಜೊತೆ ರಾಗವಾಗಿ ಮಾತನಾಡುತ್ತಿದ್ದರೆ, ಸಾನ್ವಿಗೆ ಏನೋ ಖುಷಿ. ಮಂದಹಾಸ ಅರಳಿಬಿಡುತ್ತೆ. ಹಾಗೇ ನಮ್ಮೊಂದಿಗೆ ಮಾತಾಡಲು ಮಾತಾಡಲು ಪ್ರಯತ್ನಿಸುತ್ತಾಳೆನೋ ಅನಿಸುವಂತೆ ಬಾಯಿ ಮುಖ ಮಾಡುವುದಿದೆ. ಕೆಲವೊಮ್ಮೆ ಬಾಯಿಂದ ’ಅ......ಕಕಕ’ ತರದ ಅಕ್ಷರಗಳು ಕೇಳಿವೆ. ಸಾನ್ವಿ ಅಮ್ಮ ಮತ್ತು ಮುತ್ತಜ್ಜಿಗೆ ಅದು ಸಾನ್ವಿ ’ಅಕ್ಕ’ ಎಂದು ಹೇಳಿದ್ದಾಳೆ ಎಂಬ ಖಾತ್ರಿ !

ಇತ್ತೀಚಿಗೆ ಒಂದು ಮಜಾ ಘಟನೆ ನಡೆಯಿತು..

ಸಾನ್ವಿ ಜೊತೆಗೆ ಸುಮ್ಮನೆ ಮಾತಾಡುವುದು ಒಂದು ನೆಚ್ಚಿನ ಸಮಯ. ಸಾನ್ವಿಗೆ ಅರ್ಥವಾಗೇ ಬಿಡ್ತು ಅನ್ನೋ ಹಾಗೇ ಏನಾದರೂ ಹೇಳ್ತಾ ಇರ್ತೀವಿ. ಹಾಗೇ ಹೇಳ್ತಾ, ಸಾನ್ವಿಗೆ ’ಬಸವಣ್ಣನವರು ಕಿರಿಯರ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ’ ಅಂತಾ ಕೇಳ್ತಾ ಇದ್ದೆ. ನನ್ನ ಮುಖವನ್ನೇ ನೋಡ್ತಾ ಇದ್ದ ಸಾನ್ವಿ, ನನ್ನ ಮಾತು ಮುಗಿಯುತ್ತಿದ್ದಂತೆ ಬಾಯಿ ತೆರೆದು ’ಒ....ಕೆ’ ತರದ ಸ್ವರ ಹೊರಡಿಸಿ ನಕ್ಕಳು ! ನಾವೆಲ್ಲಾ ನಕ್ಕಿದ್ದೇ ನಕ್ಕಿದ್ದು. ಬಸವಣ್ಣನವರ ಬಗ್ಗೆ ಮಾತಾಡಲು ’ಓಕೆ’ ಕೊಟ್ಟಿದ್ದಕ್ಕೆ ಸಾನ್ವಿಗೆ ಥ್ಯಾಂಕ್ಸು !

16 comments:

  1. ಸಾನ್ವಿ,
    ನಮಗೂ ಗೊತ್ತು ನಿನಗೆ ಎಲ್ಲಾ ಅರ್ಥ ಆಗ್ತಾ ಇದೆ ಅಂತ... ನಿಮ್ಮ ಅಪ್ಪ ಅಮ್ಮ ನಿನ್ನನ್ನೂ ನಮ್ಮ ಕುಟುಂಬದ ಸದಸ್ಯರನ್ನಾಗಿ ಮಾಡಿದ್ದರೆ..... ನೀನು ಈಗ ನಮ್ಮ ಮನೆಯ ಮಗು ಕೂಡ....... ಬೇಗ ಭಾರತಕ್ಕೆ ಬಾ....

    ReplyDelete
  2. ಮುದ್ದು ಸಾನ್ವಿ ಜೊತೆ ನಮಗೂ attachment ಬೆಳೆಯುವ೦ತೆ ಮಾಡಿದ ಅಪ್ಪ ಅಮ್ಮನಿಗೆ ವ೦ದನೆಗಳು. ಸಾನ್ವಿ "ಓಕೆ" ಅ೦ದದ್ದು ತು೦ಬಾ ಆಪ್ತವಾಗಿತ್ತು.

    ಶುಭಾಶಯಗಳು
    ಅನ೦ತ್

    ReplyDelete
  3. ದಿನಕರ್,
    ಎಂತಹ ಪ್ರೀತಿಭರಿತ ಹೃದಯ ನಿಮ್ಮದು...
    ನಿಮ್ಮ ಪ್ರೀತಿಗೆ ನಮ್ಮ ನಮನಗಳು.
    ಹೀಗೆ ಇರಲಿ ನಿಮ್ಮ ಹಾರೈಕೆ.

    ReplyDelete
  4. ಅನಂತ್ ಸರ್,
    ನಿಮ್ಮ ಮೆಚ್ಚುಗೆಗೆ ವಂದನೆಗಳು.
    ನಿಮ್ಮ ಆಶೀರ್ವಾದ ಯಾವಾಗಲೂ ಬೇಕು..

    ReplyDelete
  5. ಸರ್,

    ಮಗು ತುಂಬಾ ಮುದ್ದು. ಇಷ್ಟೆಲ್ಲಾ ಗಮನಿಸಿರುವ ನೀವು ಅದಕ್ಕೆ ಈಗಲೇ ಕತೆಗಳನ್ನು ಹೇಳಲು ಪ್ರಾರಂಭಿಸಿ. ಸಾನ್ವಿಯ ಮೆದುಳು ಕ್ರಿಯೇಟಿವಿಟಿಗಾಗಿ ತೆರೆದುಕೊಳ್ಳಬಹುದು.

    ReplyDelete
  6. ಶಿವು ಅವರೇ,
    ನಿಮ್ಮ ಮಾತು ನಿಜ..
    ಕಥಾಕಾಲಕ್ಷೇಪ ಆಗಲೇ ಅವರ ಅಮ್ಮ ಶುರುಮಾಡಿದ್ದಾರೆ..

    ReplyDelete
  7. ಮುದ್ದು ಸಾನ್ವಿಯ ಬಗ್ಗೆ ಚೆನ್ನಾಗಿ ಬರೆದಿದ್ದೀರಿ.ನಮ್ಮ ಮಕ್ಕಳೆಲ್ಲ ಈಗ ಬೆಳೆದು ದೊಡ್ದವರಾಗಿರುವುದರಿಂದ ಅವರ ಬಾಲ್ಯ ಮರೆತಂತಾಗಿದೆ.ಸಾನ್ವಿ ಮೊಮ್ಮಗಳಂತೆ ಬಂದು ಖುಷಿ ಕೊಡುತ್ತಿದ್ದಾಳೆ.ಅವಳ ಬಾಲ್ಯದ ಆಟಗಳನ್ನು ನಮ್ಮೆಲ್ಲರ ಜೊತೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.ನಮಸ್ಕಾರ.

    ReplyDelete
  8. ಡಾಕ್ಟರ್ ಸರ್,
    ನಿಮ್ಮ ಪ್ರೀತಿ ದೊಡ್ಡದು
    ನಿಮ್ಮ ಆಶೀರ್ವಾದ ಇರಲಿ ಹೀಗೆ..

    ReplyDelete
  9. ಸಾನ್ವಿಯ ಬೆಳವಣಿಗೆಯ ಹ೦ತಗಳನ್ನು ನೀವು ಬರೆಯುವ ರೀತಿ ನಮ್ಮನ್ನೂ ಅವಳೊಡನೆ ಸ್ಪ೦ದಿಸುವ೦ತೆ ಮಾಡುತ್ತಿದೆ. ಹೀಗೆ ಮು೦ದುವರೆಸಿ... ಸಾನ್ವಿಯ ಕಿಶೋರಾವಸ್ಥೆಯ ಆನ೦ದವನ್ನು ಸವಿಯುವ೦ತೆ ಮಾಡುತ್ತಿರುವುದಕ್ಕಾಗಿ ಧನ್ಯವಾದಗಳು.

    ReplyDelete
  10. ಪ್ರಭಾ ಅವರೇ,
    ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು
    ನಿಮ್ಮ ಪ್ರೀತಿಗೆ ಋಣಿ

    ReplyDelete