ಕಾಡಿನೊಳಗೊಂದು ಹಂಚಿನ ಮನೆ
ಎಷ್ಟು ದೊಡ್ಡದು ಅ ಮನೆ
ನಾ ಎಷ್ಟು ಓಡಾಡಿದರೂ ಮುಗಿಯದ ಮನೆ
ಒಪ್ಪವಾಗಿ ಜೋಡಿಸಿಟ್ಟ ಸಾಮಾನುಗಳು
ಅಲ್ಲೊಂದು ತೊಟ್ಟಿಲು ಇಲ್ಲೊಂದು ದೊಡ್ದಪಾತ್ರೆ
ಯಾವುದನ್ನು ನಾ ಮುಟ್ಟುವ ಆಗಿಲ್ಲ
ಬಿಳಿ ತಲೆಗೂದಲಿನ ಅಜ್ಜನ ಚಿತ್ರಗಳು
ಅಲ್ಲಿ ಅಜ್ಜನ ಜೊತೆ ಚಿಕ್ಕ ಪಾಪುಗಳುನನದೊಂದು ಅಲ್ಲಿ ಚಿತ್ರವಿದೆಯಾ ?
ಕೋಣೆ ತುಂಬಾ ಸನ್ಮಾನ ಪ್ರಶಸ್ತಿಗಳು
ಅಟ್ಟದ ಮೆಟ್ಟಿಲುಗಳ ಹತ್ತಿ ಇಳಿಯುವುದೇ ಇಷ್ಟ
ಕೆಳಗೆ ಅಜ್ಜ ಬರೆದ ಪುಸ್ತಕ ರಾಶಿ
ಹೇಗೆ ಬರೆದರು ಅಷ್ಟು ಪುಸ್ತಕ !
ಪುಸ್ತಕ ಬೇಕು ನನಗೊಂದು
ಬಂದು ನಿಂತೆನು ಮನೆಯ ಹೊರಗೆ
ಮಾತಾಡಿಕೊಳ್ಳುತ್ತಿದ್ದರು ಅಪ್ಪ-ಅಮ್ಮ
ಕುವೆಂಪು ಅಜ್ಜನದಂತೆ ಆ ಮನೆ
ಹೆಸರು ಕವಿಶೈಲವಂತೆ.
ಕುವೆಂಪು ಅಜ್ಜನದಂತೆ ಆ ಮನೆ
ಹೆಸರು ಕವಿಶೈಲವಂತೆ.
No comments:
Post a Comment