Monday, December 6, 2010

Month Four

We have a detailed observer in the house these days !

Saanvi keeps looking at every little thing in the house. Her seeing sessions start during her baths, where she keeps looking at every soap, shampoo bottle & patterns on towels. We have to turn her head to bath her. If she is taken to kitchen, she looks at the colorful boxes & cookwares.

Probably her fingers are the tastiest thing she is finding. Loves to keep the fingers in the mouth and drools.

While enjoying licking the fingers, she is making an attempt to flip over. With little push, she gets on her tummy and lifts head to see around.

Looks like the zeal to speak is getting more & more intense. Saanvi tries to say something and the speech sessions goes non-stop. She bursts into loud laughs sometimes when we are speaking with her. More the people around her, she gets more vocal. Probably loves having audience and attention !

Saanvi grasps things like the bangles, chain & towel. Towel straight away makes it to her mouth!

We have been on road for some short trips and she is trying to look everything outside.

She looks like chewing all the time. Probably time for teething..



ನಮ್ಮ ಮನೆಯಲ್ಲಿದ್ದಾರೆ ಕುತೂಹಲಭರಿತ ವೀಕ್ಷಕರೊಬ್ಬರು !

ಮನೆಯಲ್ಲಿರುವ ಎಲ್ಲಾ ಚಿಕ್ಕ-ದೊಡ್ಡ ವಸ್ತುಗಳನ್ನು ನೋಡುತ್ತಿದ್ದಾಳೆ ಸಾನ್ವಿ. ಸ್ನಾನ ಮಾಡಿಸುವಾಗ ಶುರುವಾಗುತ್ತೆ ವೀಕ್ಷಣೆ. ಅಲ್ಲಿನ ಸಾಬೂನು, ಶ್ಯಾಂಪೂ ಶೀಶೆಗಳು ಮತ್ತು ಟವೆಲ್‍ಗಳನ್ನು ನೋಡುತ್ತಲೇ ಇರುತ್ತಾಳೆ. ಕೆಲವೊಮ್ಮೆ ತಲೆಯನ್ನು ನಮ್ಮಡೆಗೆ ತಿರುಗಿಸಿ ಸ್ನಾನ ಮಾಡಿಸಬೇಕಾಗುತ್ತದೆ. ಅಡುಗೆ ಕೋಣೆಯ ಕಡೆ ಹೋದರೆ,  ಅಲ್ಲಿನ ಡಬ್ಬಗಳು ಮತ್ತು ಆಡುಗೆ ಸಾಮಾಗ್ರಿಗಳು ಕಡೆ ಗಮನ.

ಸದ್ಯಕ್ಕೆ ಸಾನ್ವಿಗೆ ಅವಳ ಬೆರಳುಗಳು ಬಹುಷಃ ರುಚಿಯೆನಿಸುತ್ತಿವೆ. ಬಾಯಿಯಲ್ಲಿ ಬೆರಳು ಇಟ್ಟುಕೊಳ್ಳುವುದು ನಿತ್ಯದ ಕೆಲಸ.

ಬೆರಳು ನೆಕ್ಕುತ್ತಲೇ ಮಗುಚಿಕೊಳ್ಳುವ ಪ್ರಯತ್ನ ನಡೆಯುತ್ತದೆ. ಸ್ಪಲ್ಪ ಸಹಾಯದಿಂದ ಮುಗುಚಿಕೊಳ್ಳುತ್ತಾಳೆ. ಹೊಟ್ಟೆ ಕೆಳಗೆ ಮಾಡಿ ಮಲಗಿ ಕತ್ತು ಎತ್ತಿ ಸುತ್ತಮುತ್ತ ನೋಡುವ ಕೆಲಸ ಸುಸ್ತಾಗುವವರೆಗೆ ಸಾಗುತ್ತದೆ.

ಮಾತಾಡುವ ಹಂಬಲ ದಿನದಿನವೂ ಜಾಸ್ತಿಯಾಗುತ್ತಿದೆ. ಏನೋ ಹೇಳುವ ಪ್ರಯತ್ನದಲ್ಲಿದ್ದಂತೆ ತೋರುತ್ತಾಳೆ ಸಾನ್ವಿ. ಹಲವಾರು ನಿಮಿಷಗಳವರೆಗೆ ಈ ಸಂಭಾಷಣೆ ನಡೆಯುತ್ತಿರುತ್ತೆ. ನಡುವೆ ದೊಡ್ಡದಾಗಿ ನಗಲು ಶುರುಮಾಡುತ್ತಾಳೆ. ಸಾನ್ವಿ ಸುತ್ತ ಜಾಸ್ತಿ ಜನವಿದ್ದಷ್ಟು, ಮಾತಾಡಲು ಜಾಸ್ತಿ ಹುರುಪು. ಬಹುಷಃ ತನ್ನದೇ ಪ್ರೇಕ್ಷಕ ವರ್ಗದ ಗಮನ ಖುಷಿಕೊಡುತ್ತಿರಬಹುದು.

ಕೈ ಬಳೆಗಳು, ಕೊರಳ ಸರಗಳು ಮತ್ತು ಟವೆಲ್‍ಗಳು, ಸಾನ್ವಿ ಬೆರಳುಗಳ ಹಿಡಿತಕ್ಕೆ ಸಿಗುವ ವಸ್ತುಗಳು. ಟವೆಲ್ ನೇರವಾಗಿ ಕೆಲವೊಮ್ಮೆ ಬಾಯಿಗೆ ಹೋಗುತ್ತೆ.

ಹತ್ತಿರದ ಸ್ಥಳಗಳಿಗೆ ಸಾನ್ವಿಯನ್ನು ಕರೆದುಕೊಂಡು ಹೋಗಿದ್ದೆವು. ಹೊರಗಿನ ಪ್ರಪಂಚ ನೋಡುವ ಅಚ್ಚರಿಯಲ್ಲಿದ್ದಳು ಸಾನ್ವಿ.

ಯಾವಾಗಲೂ ಬಾಯಿಯಲ್ಲಿ ಏನೋ ಇರುವ ಹಾಗೇ ಜಗಿಯುತ್ತಿದ್ದಾಳೆ. ಬಹುಷಃ ಹಲ್ಲು ಮೂಡುವ ಸಮಯ ಹತ್ತಿರವಿರಬೇಕು...

14 comments:

  1. Cute as always! Love her big bright eyes:)
    Roopa

    ReplyDelete
  2. ಕುತೂಹಲ ತು೦ಬಿದ ಸಾನ್ವಿಯ ಕಣ್ಣುಗಳು ...ಮುದ್ದಾಗಿ ಕಾಣುತ್ತಾಳೆ.
    ಹಲ್ಲು ಬರುವ ಮೊದಲು ಮಕ್ಕಳಿಗೆ ಕಿರಿಕಿರಿಯಾಗುತ್ತದೆ.
    ಕೆಲವು ಮಕ್ಕಳಿಗೆ ತ್ರಾಸದಾಯಕವೂ ಆಗುತ್ತದೆ. ಜಾಸ್ತಿ ತೊ೦ದರೆ ಕ೦ಡರೆ ಡಾಕ್ಟರ್ ಅದಕ್ಕೆ ಉಪಾಯಗಳನ್ನೂ ಸೂಚಿಸುತ್ತಾರೆ.
    ಮು೦ದೆ ಸಾನ್ವಿಯ ಹೋಳಿ ಮಾಡುವ ಸೊಬಗನ್ನು ತಿಳಿಯಲು ಕಾಯುತ್ತಿದ್ದೇನೆ.ನನಗೆ ನನ್ನ ಮಕ್ಕಳು ಚಿಕ್ಕವರಿದ್ದಾಗಿನ ನೆನಪು ಮರುಕಳಿಸುತ್ತಿದೆ..
    ಧನ್ಯವಾದಗಳು.

    ReplyDelete
  3. ರೂಪಾ,
    ನಿಮ್ಮ ಪ್ರೀತಿಯ ಅಭಿಪ್ರಾಯಕ್ಕೆ ವಂದನೆಗಳು.

    ReplyDelete
  4. ಮನಮುಕ್ತಾ,

    ನಿಮ್ಮ ಆತ್ಮೀಯ ನುಡಿಗಳಿಗೆ ಧನ್ಯವಾದಗಳು.
    ನಿಮ್ಮ ಸಲಹೆಯನ್ನು ನೆನಪಿಟ್ಟುಕೊಳ್ಳುತ್ತೇವೆ.

    ReplyDelete
  5. ತು೦ಬಾ ಮುದ್ದಾಗಿ ಕಾಣುತ್ತೀ ಸಾನ್ವಿ, ನಿನ್ನ ಕಣ್ಣುಗಳನ್ನೇ ನೋಡಬೇಕನಿಸುತ್ತೆ.

    ಶುಭಾಶಯಗಳು

    ReplyDelete
  6. ಪುಟ್ಟ ಸಾನ್ವಿ ಬೆಳೆಯುವ ಪರಿಯನ್ನು ಸುಂದರವಾಗಿ ಬ್ಲಾಗಿಗರಿಗೆ ಕಟ್ಟಿ ಕೊಡುತ್ತಿದ್ದೀರ , ತನ್ನ ಭಾವನೆಗಳನ್ನು ಬೆರಗು ಕಣ್ಣಿನ ಮೂಲಕ ಹೊರ ಹಾಕಿ ಅಚ್ಚರಿಯ ಜಗದ ಪರಿಚಯ ಮಾಡಿಕೊಳ್ಳುತ್ತಿರುವ ಸಾನ್ವಿ , ಹಂತ ಹಂತ ವಾಗಿ ಬೆಳೆಯುತ್ತಿದ್ದಾಳೆ ಅವಳಿಗೆ ಪ್ರೀತಿಯ ಶುಭಾಶಯಗಳು.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  7. saanvi beLeyuva pari khushi koDtaa ide....

    bariya kavana , kathegaagi blog barade magaLigaagi blog maaDiddu matte, adannu update maaDtaa irodu khushi kodatte...

    ReplyDelete
  8. awwwwwwwwwn that's so cute and i love cooing babies..
    krishi has been doing the same too..I wish U guys were closer, so krishi n saanvi could play together .

    ReplyDelete
  9. ಅನಂತ್ ಸರ್,
    ನಿಮ್ಮ ಆಶೀರ್ವಾದವಿರಲಿ.

    ReplyDelete
  10. ಪ್ರೀತಿಯ ಬಾಲು,

    ನಿಮ್ಮ ಚೆಂದದ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  11. ದಿನಕರ್,

    ನಿಮ್ಮ ಮೆಚ್ಚುಗೆಯ ನುಡಿಗಳಿಗೆ ನಮನ.

    ReplyDelete
  12. Shikha,

    You can still coo the babies over the net/phone :)

    ReplyDelete
  13. Your Saanvi's attempt to put her fingers in mouth reminds me of Anvitha's attempt to put her whole palm in her mouth!!!! She was almost there when mid-way she found her thumb tastier, so she stopped her struggle.

    ReplyDelete
  14. Ms.Hegde,

    hahaaa..Saanvi has progressed from few fingers to whole hands now :)

    ReplyDelete