Sunday, November 28, 2010

Visits, Shopping & Thanksgiving !

Visits, Shopping & Thanksgiving !

That is how the week has been & Saanvi has been little busy doing rounds in the town !

Its more than 100 years old, more than 50 persons from here have won the Noble prize, its alumni has started world renowned tech companies - Google, Yahoo, Sun, Cisco, HP.

What could be this renowned place ?

Its Stanford University !

Stanford is around 20 minutes from our place and recently we visited Stanford. Saanvi roamed around the university campus. It is such a huge campus and flipping through the campus needs some time. After zipping through the campus, next Saanvi went to the adjacent Stanford Shopping Center.

The bright lights and colorful shops did delight Saanvi for a short time. There was already a Christmas tree set in the mall and the sparkling tree grabbed her attention. But soon sleep & evening took over.

Speaking of technology and creativity, there is nothing like Space technology and who is the pioneer in the space technology !

Its NASA !!

Other day, Saanvi visited the NASA Exploration Center.

NASA center provides opportunity to experience NASA missions & astronomy. The center has some pretty cool exhibits and has a big theater that beams educational videos on planets & other space related topics.

When we visited the NASA center, there was a video about Solar system. Saanvi watched it for few while with wide eyes from her stroller. Her attention diverted towards the exhibit which was in a special room whose walls were like the moon landing scene. There was a small rock in the room and it was from Moon.  We learnt that it was brought by Apollo crew.

After going through the Mars exhibits and replica of Space Station, Saanvi slipped into sleep.

Not far from NASA was another place which had become synonym with searching.

Its Google !

Google is no longer a noun, it has become a verb. Its hard to imagine somebody not using Google.

The campus is situated in the quite part of Mountain View. We roamed around in Google campus with Saanvi.

Then there was the shopping for Black Friday & Thanksgiving.

Overall it was a super week that was filled with visits to tech meccas and shopping malls.

 *******************

Thanksgiving was celebrated by early European settlers to thank God for making them survive through the harsh winter when they arrived to the new found land (America). Over the years celebration has become widespread in US.

Celebration of Thanksgiving is often associated with the traditional Turkey & these days with heavy shopping. More than anything, it is a nice opportunity to offer thanks to everybody who has been with us, who has supported us and who inspire us.

Saanvi(& dad-mom) would like to thank everybody who are providing the constant love, support and blessings.

Friday, November 19, 2010

ಪುಟ್ಟ ಬಟ್ಟೆ ಮತ್ತು ಗಾಳಿಪಟ ದಾರ

ಮೊನ್ನೆ ಅಮ್ಮನ ಜೊತೆ ಪೋನ್‍ನಲ್ಲಿ ಮಾತಾಡುವಾಗ ಬಹಳ ಸಂಭ್ರಮದಿಂದ ಕೇಳಿದಳು - ’ಮನೆ ಕ್ಲೀನ್ ಮಾಡುವಾಗ ಏನು ಸಿಗ್ತು ಹೇಳು ನೋಡೋಣಾ’ ?

ಸಾನ್ವಿ ಜೊತೆ ಆಡುತ್ತಿದ್ದ ನನಗೆ ಗೊತ್ತಾಗಲಿಲ್ಲ. ಅಮ್ಮನೇ ಮುಂದುವರೆಸಿ ಹೇಳಿದಳು ’ನೀನು ಚಿಕ್ಕವನಿದ್ದಾಗ ಆಸೆಯಿಂದ ಕೂಡಿಡುತ್ತಿದ್ದ ಬಣ್ಣ-ಬಣ್ಣದ ಅಂಗಿ ಗುಂಡಿಗಳ ಡಬ್ಬ ಸಿಗ್ತು! ಅದರ ಜೊತೆ ಗಾಳಿಪಟ ಹಾರಿಸುತ್ತಿದ್ದ ದಾರದುಂಡೆ !!’ .

ಚಿಕ್ಕವನಿದ್ದಾಗಿನ ನನ್ನ ಅಂಗಿ ಗುಂಡಿಗಳ(ಬಟನ್) ಬಗೆಗಿನ ಆಸಕ್ತಿ, ಅಪ್ಪನ ಜೊತೆ ಹಾರಿಸುತ್ತಿದ್ದ ಗಾಳಿಪಟಗಳು..ಹಾಗೇ ಅನೇಕ ದೃಶ್ಯಾವಳಿಗಳು ಕಣ್ಮುಂದೆ ಸಾಗಿ ಹೋದವು. ನಾನು ಆ ಡಬ್ಬ, ಅ ಬಣ್ಣದ ಗುಂಡಿಗಳನ್ನು ಬಹುತೇಕ ಮರತೇ ಬಿಟ್ಟಿದ್ದೆ. ಆದರೆ ಅಮ್ಮ ಅದನ್ನು ಇಷ್ಟು ವರ್ಷ ಜೋಪಾನವಾಗಿ ಎತ್ತಿಟ್ಟಿದ್ದು ಮತ್ತು ಆ ಡಬ್ಬ ಸಿಕ್ಕಾಗ ಸಂಭ್ರಮಿಸಿದ ರೀತಿ ನನಗೆ ವಿಸ್ಮಯವುಂಟು ಮಾಡಿತ್ತು.

ಅದರ ಬಗ್ಗೆ ಯೋಚಿಸುತ್ತಿರುವಾಗ, ಸಾನ್ವಿ ಅಮ್ಮ ಚೀಲವೊಂದರಲ್ಲಿ ಏನೋ ಜೋಡಿಸುತ್ತಿದ್ದಳು. ನೋಡಿದರೆ ಸಾನ್ವಿಯ ಪುಟ್ಟ ಬಟ್ಟೆಗಳು.

ಹುಟ್ಟಿದಾಗ ಸಾನ್ವಿಗೆ ತಂದಿದ್ದ ಬಟ್ಟೆಗಳಲ್ಲಿ ಹಲವು ಈಗ ಮೂರು ತಿಂಗಳ ನಂತರ ಆಗುತ್ತಿರಲಿಲ್ಲ. ನೋಡುನೋಡುತ್ತಾಲೇ ಸಾನ್ವಿ ಆ ಬಟ್ಟೆಗಳಾಚೆ ಬೆಳೆದು ಬಿಟ್ಟಿದ್ದಳು. ಆ ಚಿಕ್ಕದಾದ ಬಟ್ಟೆಗಳ ಉಸ್ತುವಾರಿಯನ್ನು ಸಾನ್ವಿಯ ಅಮ್ಮ ವಹಿಸಿಕೊಂಡು ಚೀಲದಲ್ಲಿ ತುಂಬುತ್ತಿದ್ದಳು.

ಈ ಚಿಕ್ಕದಾದ ಬಟ್ಟೆಗಳಲ್ಲಿ ಸಾನ್ವಿಯ ಬಾಲ್ಯದ ನೆನಪುಗಳನ್ನು ಹೆಕ್ಕಿ ಜೋಪಾನವಾಗಿ ಇಟ್ಟುಕೊಳ್ಳುವ ಪ್ರಯತ್ನದಲ್ಲಿದಂತೆ ಸಾನ್ವಿಯ ಅಮ್ಮ ಕಂಡಳು. ಆ ಬಟ್ಟೆಗಳನ್ನು ಸಾನ್ವಿ ಅಮ್ಮ ಜೋಪಾನಿಸುತ್ತಿದ್ದ ರೀತಿ ಮತ್ತು ಅದರ ಬಗೆಗಿನ ಪ್ರೀತಿ ನೋಡುತ್ತಿದ್ದೆ.

ಬಣ್ಣದ ಗುಂಡಿ-ಗಾಳಿಪಟದ ದಾರದುಂಡೆ ಕಂಡ ಅಮ್ಮನ ಸಂಭ್ರಮ ಈಗ ನನಗೆ ಅರ್ಥವಾಗತೊಡಗಿತ್ತು.

ಆ ಡಬ್ಬದಲ್ಲಿ , ಪುಟಾಣಿ ಬಟ್ಟೆಗಳಲ್ಲಿ, ಆ ಗಾಳಿಪಟ ದಾರದಲ್ಲಿ ಬಾಲ್ಯದ ಕೊಂಡಿಗಳು ಹೆಣೆದುಕೊಂಡದ್ದು ಗೋಚರವಾಗಿತ್ತು.

ಚಿಕ್ಕದಾದ ಬಟ್ಟೆಗಳನ್ನು ಜೋಡಿಸುವ ಸಾನ್ವಿ ಅಮ್ಮನ ಕಾರ್ಯ ಮುಂದುವರೆದಿತ್ತು.

ಇದ್ಯಾವುದರ ತಂಟೆಯಿಲ್ಲದೆ ಸಾನ್ವಿ ತನ್ನ ಪಾಡಿಗೆ ತಾನು ಆಡುತ್ತಿದ್ದಳು.

Wednesday, November 10, 2010

Month Three

Smiling wins !

Looks like that is what she is learning !!

Saanvi has learnt to smile whenever somebody speaks with her. Smiling starts since the time she wakes up and gets into peak mode when we get into talks with her. She gets into story telling mode and tries hard to explain something. Most of the times, she tries so hard that she ends up getting hicups.

Focus from milk seems to be deviated and she is more interested to view surroundings & outside. Even while drinking milk, she gets into the mood to tell tales. Sometimes starts throwing tantrums while drinking milk. In summary, feeding milk is becoming a new adventure for Saanvi's mom.

Sleeping looks to be totally shifted to night and she is enjoying a decent sleep in night. However it is difficult to make her sleep during day time.

She wants us to pick her up when she starts making sounds. After picking her up, she waits for sometime to see if we move. If we don't move, then again the unrest will start.

Best time is when she wakes up in the morning. She will be in a jovial mode talking to all the toys and pictures, making loud noises.

She celebrated her first Sarswati pooja, Dasara, Halloween and Deepavali. She had been to temple, toys r us and for trick/treat.

Feature of the month: Saanvi's mom trying to feed her and Saanvi doing little stunts as if she is not hungry or ready. So she is put down and immediately she keeps her hands in the mouth and start licking them as if she is hungry !

Overall it has been a fun month !



ನಗು ನಗುತಾ ನಲಿ..

ಮುಖದ ನೋಡಿದ ಕೂಡಲೇ ನಗುವುದನ್ನು ಸಾನ್ವಿ ಕಲಿತದ್ದು ಹೊಸದು. ಬೆಳಿಗ್ಗೆ ಎದ್ದಾಗಿನಿಂದ ಸಾನ್ವಿ ಮಂದಹಾಸ ಕಾರ್ಯಕ್ರಮ ಶುರುವಾಗುತ್ತೆ. ನಾವು ಹೋಗಿ ಸಾನ್ವಿ ಮುಂದೆ ನಿಂತರೆ, ನಗು ಹೆಚ್ಚಾಗುತ್ತೆ ಹಾಗೇ ಕಥಾ ಕಾಲಕ್ಷೇಪ ಆರಂಭವಾಗುತ್ತೆ. ಏನೋ ವಿಷಯವನ್ನು ವಿವರಿಸುವ ಯತ್ನದಲ್ಲಿರುವಂತೆ ತೋರುತ್ತದೆ. ಬಹುತೇಕ ಸಂದರ್ಭಗಳಲ್ಲಿ ಆ ಯತ್ನದಲ್ಲೇ ಬಿಕ್ಕಳಿಕೆ ಪ್ರಾರಂಭವಾಗುವುದುಂಟು.

ಹಾಲಿನ ಬಗ್ಗೆ ಮೊದಲಿಗಿಂತ ಆಸಕ್ತಿ ಕಡಿಮೆ ಆಗಿದೆ. ಯಾವಾಗಲೂ ಸುತ್ತಮುತ್ತ ಮತ್ತು ಹೊರಗೆ ನೋಡುವ ತವಕ. ಹಾಲು ಕುಡಿಯುವಾಗಲೂ ಸಾನ್ವಿಯಿಂದ ಕೆಲವೊಮ್ಮೆ ಯಾವುದೋ ಕತೆ ಹೇಳುವ ಪ್ರಯತ್ನ ನಡೆಯುತ್ತದೆ. ಇನ್ನು ಕೆಲವೊಮ್ಮೆ ಹಾಲು ಕುಡಿಯುವಾಗಲೇ ಸಾನ್ವಿಯ ಸಣ್ಣಪುಟ್ಟ ತರಲೆ ಹಟಗಳು ಶುರುವಾಗುತ್ತವೆ. ಒಟ್ಟಾರೆ, ಸಾನ್ವಿಯ ಅಮ್ಮನಿಗೆ ಹಾಲು ಕುಡಿಸುವುದು ಒಂದು ಹೊಸ ಸಾಹಸ !

ನಿದ್ದೆ ಈಗ ರಾತ್ರಿಗೆ ಸರಿದಿದೆ. ದಿನದ ಹೊತ್ತಿನಲ್ಲಿ ಮಲಗಿಸುವುದು ಕಷ್ಟ, ಆದರೆ ರಾತ್ರಿಯಲ್ಲಿ ಸಾನ್ವಿಯ ಒಳ್ಳೆ ನಿದ್ದೆಯಾಗುತ್ತಿದೆ.

ಸದ್ದು ಮಾಡುತ್ತಿದ್ದರೆ ನಾವು ಎತ್ತಿಕೊಳ್ಳಬೇಕೆಂಬಂತೆ ನೋಡುವುದು ನಡೆಯುತ್ತದೆ. ಎತ್ತಿಕೊಂಡ ನಂತರ ಅಲ್ಲಾಡದೆ ಒಂದೆಡೆ ನಿಂತಿದ್ದರೆ, ಮತ್ತೆ ಅದಕ್ಕೆ ಗಲಾಟೆ ಶುರುವಾಗುತ್ತದೆ.

ದಿನದ ಉತ್ತಮ ಸಮಯ ಸಾನ್ವಿ ಎದ್ದಾಗ. ಗೋಡೆಯ ಮೇಲಿನ ಪ್ರಾಣಿಗಳು , ಪಕ್ಕದಲ್ಲಿನ ಗೊಂಬೆಗಳೊಡನೆ ಎದ್ದ ಕೂಡಲೇ ಸಾನ್ವಿಯ ಸಂಭಾಷಣೆ ಶುರುವಾಗಿರುತ್ತದೆ.

ಈ ತಿಂಗಳಲ್ಲಿ ಸಾನ್ವಿಯ ಮೊದಲ ಸರಸ್ವತಿ ಪೂಜೆ, ದಸರಾ, ಹ್ಯಾಲೋವಿನ್, ದೀಪಾವಳಿ ಆಚರಣೆಗಳು ನಡೆದವು. ಹಾಗೇ ಸಾನ್ವಿಯ ಸವಾರಿ ದೇವಾಲಯ, ಟಾಯ್ಸ್ ರ್ ಅಸ್ ಮತ್ತು ಟ್ರಿಕ್-ಟ್ರೀಟ್‍ಗೆ ಹೋಗಿತ್ತು.

 ತಿಂಗಳ ವಿಶೇಷ: ಸಾನ್ವಿಯ ಅಮ್ಮ ಹಾಲು ಕುಡಿಸಲು ಹೋದರೆ, ಸಾನ್ವಿ ಹಸಿವು ಆಗೇ ಇಲ್ಲವೇನೋ ಎಂಬಂತೆ ಆಟಗಳನ್ನು ಆಡುವುದು. ಕೆಳಗಿಸಿದ ತಕ್ಷಣವೇ ತುಂಬಾ ಹಸಿವು ಎಂಬಂತೆ ತನ್ನ ಕೈಗಳನ್ನು ಬಾಯಿಯಲ್ಲಿ ಇಟ್ಟುಕೊಳ್ಳುವುದು !

ಒಟ್ಟಾರೆ ಈ ತಿಂಗಳು ಸುಂದರವಾಗಿತ್ತು !!

Tuesday, November 2, 2010

ಸಾನ್ವಿಯ ಹ್ಯಾಲೋವಿನ್

ಕುಂಬಳಕಾಯಿಯ ಹಿಡಿಕೆಯ ಸುತ್ತ ವರ್ತುಲಾಕಾರದಲ್ಲಿ ಕೊಯ್ದು ಎಳೆದಾಗ, ಅದು ಚಿಕ್ಕ ಮುಚ್ಚಳಿಕೆಯ ತರ ಹೊರಗೆ ಬಂತು. ಅದಕ್ಕೆ ತಿರುಳಿನಿಂದ ಅಂಟಿಕೊಂಡಿದ್ದ ಬೀಜದ ಸರಮಾಲೆಗಳು. ಕುಂಬಳಕಾಯಿಯೊಳಗೆ ಸೌಟಿನಿಂದ ಎರೆದು ತಿರುಳು-ಬೀಜಗಳನ್ನು ತೆಗೆದದ್ದಾಯಿತು.

ಕುಂಬಳಕಾಯಿ ಹೊರಮೈಯ ಮೇಲೆ ಎರಡು ತ್ರಿಕೋನಕಾರದಲ್ಲಿ ಕಣ್ಣುಗಳಂತೆ ಕೊರೆದು, ನಡುವೆ ಇನ್ನೊಂದು ತ್ರಿಕೋನದಂತ ಮೂಗನು ಕೊರೆದದ್ದಾಯಿತು. ಮೂಗಿನ ಕೆಳಗೆ ಬಾಯಿ ಆಕಾರದಲ್ಲಿ ಕೊರೆದಾಗ, ಅಲ್ಲೊಂದು ಮುಖ ಕುಂಬಳಕಾಯಿಯ ಮೇಲೆ ಮೂಡಿತ್ತು.

ಸಾನ್ವಿ ತನ್ನ ಬೌನ್ಸರ್‍ನಲ್ಲಿ ಕುಳಿತು, ತನ್ನ ಮುಂದೆ ನಡೆಯುತಿದ್ದ ಕುಂಬಳಕಾಯಿ ಕೆತ್ತನೆ ಕಡೆ ನೋಡುತ್ತಿದ್ದಳು..

ಹ್ಯಾಲೋವಿನ್ ಎಂಬ ವಿಶಿಷ್ಟ ಆಚರಣೆಗೆ ಸಿದ್ಧತೆ ನಡೆದಿತ್ತು..

ಕಣ್ಣು-ಮೂಗು-ಬಾಯಿಗಳನ್ನು ಇನ್ನೊಮ್ಮೆ ತೀಡಿ, ಅದರೊಳಗೆ ಮೇಣದ ಬತ್ತಿ ಇಟ್ಟಾಗ, ಕುಂಬಳಕಾಯಿಗೆ ಜೀವ ಬಂದಂತಿತ್ತು.
ಅದರ ತಲೆಯ ಮೇಲೆ ಮುಚ್ಚಳದಂತ ಚಿಪ್ಪನ್ನು ಇಟ್ಟಾಗ, ಜಾಕ್-ಓ-ಲ್ಯಾಂಟ್ರನ್(Jack O' Lantern) ಸಿದ್ಧವಾಗಿತ್ತು.

ಹ್ಯಾಲೋವಿನ್ ಆಚರಣೆಯಲ್ಲಿ ಜಾಕ್-ಓ-ಲ್ಯಾಂಟ್ರನ್ ಒಂದು ಪ್ರಮುಖ ಭಾಗ. ಕುಂಬಳಕಾಯಿಯಲ್ಲಿ ಮುಖವನ್ನು(ಬಹುತೇಕ ಕಡೆಗಳಲ್ಲಿ ಭಯಾನಕ ಮುಖ) ಕೊರೆದು ಅದರಲ್ಲಿ ದೀಪ ಹಚ್ಚಿ ಮನೆಯೊರಗೆ ಇಟ್ಟರೆ, ಅದು ದುಷ್ಟ ಶಕ್ತಿಗಳನ್ನು ಮನೆಯಿಂದ ದೂರವಿಡುತ್ತೆಂಬ ಪ್ರತೀತಿ.

ಜಾಕ್-ಓ-ಲ್ಯಾಂಟ್ರನ್ ಮನೆಯ ಬಾಗಿಲಲ್ಲಿ ಸ್ಥಾಪಿಸಿ ಬಂದಾಗ, ಸಾನ್ವಿಯನ್ನು ಅವರ ಅಮ್ಮ ಹ್ಯಾಲೋವಿನ್ ಡ್ರೆಸ್‍ನಲ್ಲಿ ಅಲಂಕರಿಸುತ್ತಿದ್ದಳು.

ಹ್ಯಾಲೋವಿನ್ ದಿನದಂದು ವಿವಿಧ ತರದ ಫ್ಯಾನ್ಸಿ ಡ್ರೆಸ್‍ಗಳನ್ನು ತೊಡುವುದು ಒಂದು ಸಂಪ್ರದಾಯವಾಗಿ ಬಿಟ್ಟಿದೆ. ಮಕ್ಕಳಿಗೆ ಶಾಲೆಗಳಲ್ಲಿ ಹ್ಯಾಲೋವಿನ್ ಡ್ರೆಸ್ ಡೇ ಸಹ ಇರುತ್ತೆ. ಬಾಲಕರಲ್ಲಿ ಸುಪರ್ ಮ್ಯಾನ್, ಸ್ಪೈಡರ್ ಮ್ಯಾನ್, ಐರನ್ ಮ್ಯಾನ್, ಪೋಲಿಸ್, ಸ್ಟಾರ್ ವಾರ್ಸ್ ಡ್ರೆಸ್‍ಗಳು ತುಂಬಾ ಪ್ರಸಿದ್ಧಿ. ಬಾಲಕಿಯರಲ್ಲಿ ಯುವರಾಣಿ, ಕಿನ್ನರಿ, ಸುಪರ್ ಗರ್ಲ್ ಬೇಡಿಕೆಯವು.
ದೊಡ್ಡವರದು ಬೇರೆಯದೇ ಒಂದು ವಿಚಿತ್ರ ಡ್ರೆಸ್ ಲೋಕ.

ನಮ್ಮ ಸಾನ್ವಿಗೆ ಹ್ಯಾಲೋವಿನ್‍ಗೆ ’ಹಸಿರು ಬಟಾಣಿ ಕಾಯಿ’ (Pea in the Pod) ಡ್ರೆಸ್ ಹಾಕಿದ್ದೆವು.

ಬಿಡಿಸಿದ ಬಟಾಣಿಕಾಯಿ ನಡುವೆ ಹಸಿರು ಬಟಾಣಿ ಕಾಳುಗಳ ವಸ್ತ್ರ. ತಲೆಗೆ ಬಟಾಣಿಕಾಯಿ ತೊಟ್ಟಿನಂತ ಹಸಿರು ಟೋಪಿ. ಟೋಪಿಗೊಂದು ಚಿಕ್ಕ ಹಸಿರು ಎಲೆ.

ಸಾನ್ವಿ ಥೇಟ್ ಹಸಿರು ಬಟಾಣಿ ಕಾಯಿ ತರನೇ ಮುದ್ದಾಗಿ ಕಾಣುತ್ತಿದ್ದಳು.

ಬಟಾಣಿ ಪುಟಾಣಿ ಸಾನ್ವಿ ’ಟ್ರಿಕ್ ಆರ್ ಟ್ರೀಟ್’ (Trick or Treat) ಹೊರಟಿತ್ತು.

ಹ್ಯಾಲೋವಿನ್ ಡ್ರೆಸ್‍ ಧರಿಸಿದ ಮಕ್ಕಳು ಅಕ್ಕಪಕ್ಕದ ಮನೆಗಳಿಗೆ ಹೋಗಿ, ಬಾಗಿಲು ಬಡಿದು ’ಟ್ರಿಕ್ ಆರ್ ಟ್ರೀಟ್’ ಎಂದು ಕೇಳುತ್ತಾರೆ. ಮನೆಯವರು ಟ್ರೀಟ್ ಎಂದು ಉತ್ತರಿಸಿ ಚಾಕೋಲೇಟ್-ಕ್ಯಾಂಡಿಗಳನ್ನು ಮಕ್ಕಳಿಗೆ ಕೊಡುತ್ತಾರೆ. ಬಹುಷಃ ಯಾರೂ ಟ್ರಿಕ್ ಎನ್ನುವುದಿಲ್ಲ. ಟ್ರೀಟ್ ಕೊಡದಿದ್ದರೆ ಮಕ್ಕಳು ಮಾಡುವ ತರಲೆಗಳಿಗೆ ಟ್ರಿಕ್ ಎನ್ನುತ್ತಾರೆ.

ಸಾನ್ವಿ ಬಟಾಣಿ ಡ್ರೆಸ್‍ನಲ್ಲಿ ’ಟ್ರಿಕ್ ಆರ್ ಟ್ರೀಟ್’ ಹೊರಟಾಗ, ಅಪ್ಪ-ಅಮ್ಮ ಚಾಕೋಲೇಟ್ ಬಕೆಟ್ ಹಿಡಿದು ಹಿಂಬಾಲಿಸಿದೆವು.
ಅಪ್ಪ-ಅಮ್ಮನ ಸ್ನೇಹಿತರಾದ ದೀಪ್ತಿ ಮನೆಗೆ ಹೋಗಿ ಕೇಳಿದಾಗ, ಸಾನ್ವಿಗೆ ಟ್ರೀಟ್ ಸಿಕ್ಕಿತು. ಸಾಕಷ್ಟು ಚಾಕೋಲೇಟ್‍ಗಳು ಬಕೆಟ್ ತುಂಬಿದವು.

ಸಾನ್ವಿ ಖುಷ್ ! ಕತೆ ಹೇಳೋ ತರ ಸ್ವರ ಹೊರಡಿಸಿ, ನಗುತ್ತಾ ಇದ್ದಳು ಸಾನ್ವಿ. ಬಹಳಷ್ಟು ಚಾಕೋಲೇಟ್‍ಗಳು ಸಿಕ್ಕಿವೆ ಎಂದು ಗೊತ್ತಾಯಿತೋ ಏನೋ..

ಸಂಚಾರ ಮುಗಿಸಿ ಮನೆಗ ಮರಳಿದಾಗ, ಜಾಕ್-ಓ-ಲ್ಯಾಂಟ್ರನ್ ನಗುತ್ತಾ ಸಾನ್ವಿಗೆ ಸ್ವಾಗತ ಬಯಸಿತ್ತು.

ಹೀಗೆ ನಡೆದಿತ್ತು ಸಾನ್ವಿಯ ಹ್ಯಾಲೋವಿನ್ !