Wednesday, October 20, 2010

ಮಳೆ, ದೇವಾಲಯ ಮತ್ತು ಪುಸ್ತಕ

ಹೊರಗೆ ಜಿನುಗುತಿತ್ತು ಮಳೆ..

ಸಾನ್ವಿ ಬಂದ ನಂತರದ ಮೊದಲ ಮಳೆ..

ಕಿಟಕಿಯಿಂದ ಹೊರಗೆ ಬೀಳುತ್ತಿದ್ದ ಮಳೆ ಹನಿಗಳನ್ನು ಸಾನ್ವಿಗೆ ತೋರಿಸುತ್ತ ನಿಂತಿದ್ದೆವು.
ಎಷ್ಟು ಗೊತ್ತಾಯಿತೋ ಎನೋ..

ಈ ದಿನಗಳೇ ಹಾಗೇ, ಸಾನ್ವಿಗೆ ಎಲ್ಲದೂ ಹೊಸದು.

ಮೊನ್ನೆ ಮೊದಲ ಬಾರಿ ಸಾನ್ವಿಗೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದೆವು. ದೇವಸ್ಥಾನ ತಲುಪವಷ್ಟರಲ್ಲೇ ಸಾನ್ವಿ ನಿದ್ದೆ ಹೋಗಿದ್ದಳು. ಎಚ್ಚರವಾಗಿದ್ದು ದೇವಾಲಯದಲ್ಲಿ ನಡೆಯುತ್ತಿದ್ದ ಭರತನಾಟ್ಯದ ನಾದಕ್ಕೆ. ದೇವಾಲಯದ ಪ್ರಾಂಗಣದಲ್ಲಿ ನವರಾತ್ರಿ ವಿಶೇಷವಾಗಿ ಜರುಗುತ್ತಿದ್ದ ಭರತನಾಟ್ಯ. ಬಣ್ಣಬಣ್ಣದ ವಸ್ತ್ರಗಳು, ಗೆಜ್ಜೆಗಳು, ಒಡವೆಗಳಿಂದ ಕಂಗೋಳಿಸುತ್ತಿದ್ದ ನೃತ್ಯಗಾರ್ತಿಯರನ್ನು ನಮ್ಮ ಸಾನ್ವಿ ನೋಡುತ್ತಿದ್ದಂತೆ ಅನಿಸಿತು. ಮನೆಯಲ್ಲಿ ಚಿಕ್ಕ ಶಬ್ದಕ್ಕೆ ಎದ್ದೇಳುವ ಸಾನ್ವಿ, ದೇವಸ್ಥಾನದಲ್ಲಿನ ಘಂಟನಾದಕ್ಕಾಗಲಿ ಅಥವಾ ಭರತನಾಟ್ಯದ ತಾಳಕ್ಕಾಗಲಿ ಬೆಚ್ಚದೆ ಕುಳಿತಿದ್ದು ಅಚ್ಚರಿಯಾಗಿತ್ತು.

ಸರಸ್ವತಿ ಪೂಜೆ ದಿವಸ ಸಾನ್ವಿಗೆ ಮೊದಲ ಪುಸ್ತಕ ತಂದಿದ್ದೆವು. ಅದನ್ನು ಸಾನ್ವಿ ಓದುವ ದಿನಗಳಿನ್ನೂ ಬಹಳ ದೂರವಿದ್ದರೂ, ಹಾಗೇ ಸುಮ್ಮನೆ ತಂದು, ಪೂಜೆಗೆ ಇಟ್ಟಿದ್ದೆವು. ಪುಸ್ತಕವನ್ನು ಅದಕ್ಕೆ ಇಟ್ಟ ಹೂವನ್ನು ಸಾನ್ವಿ ಪಿಳಿಪಿಳಿ ನೋಡುತ್ತಿದ್ದಳು.
ನಾವು ಚಿಕ್ಕವರಿದ್ದಾಗ ಬಹಳ ಕಷ್ಟದ ಪಠ್ಯಪುಸ್ತಕವೊಂದನ್ನು ಸರಸ್ವತಿ ಪೂಜೆಗೆ ಇಡುತ್ತಿದ್ದದ್ದು ನೆನಪಾಯಿತು !

ನಂತರದ ಆಯುಧ ಪೂಜೆ ದಿವಸ ನಮ್ಮ ಕಾರ್‌ಗೆ ಮತ್ತು ಸಾನ್ವಿಯ ಸ್ಟ್ರಾಲರ್‌ಗೂ ಪೂಜೆ ನಡೆಯಿತು. ಪೂಜೆ ನಂತರ, ಸಾನ್ವಿ ನಮ್ಮ ಕಾರ್‌ನ ಡ್ರೈವರ್ ಸೀಟ್ ಮೇಲೆ ಅಮ್ಮನ ಜೊತೆ ಕುಳಿತು ಪರಿಶೀಲನೆ ಮಾಡಿದ್ದು ಮಜವಾಗಿತ್ತು.

ಮತ್ತೆ ಬಿಸಿಲು ಮರಳಿ ಬಂದ ಹಾಗಿದೆ..

ಬೆಳಕು ಇಣುಕುವ ಕಿಟಕಿಗಳ ಕಡೆ ಸಾನ್ವಿಯ ಆಸಕ್ತಿ ಸಹ ಹೆಚ್ಚಾದ ಹಾಗಿದೆ..

9 comments:

  1. ಅಪ್ಪ ಅಮ್ಮ;ನಿಮ್ಮ ಬ್ಲಾಗಿನ ಹೆಸರಿನಷ್ಟೇ ನಿಮ್ಮ ಪ್ರೀತಿಯೂ ಅನನ್ಯ!'ಸಾನ್ವಿಯ ಜೊತೆಯಲ್ಲಿ'ಯ ಪ್ರತಿಯೊಂದು ಸಂಚಿಕೆಯೂ ವಿಶಿಷ್ಟ.ಮುಂದಿನ ಸಂಚಿಕೆಗಾಗಿ ಕಾಯುವಂತೆ ಮಾಡುತ್ತದೆ.ಧನ್ಯವಾದಗಳು.ನಮಸ್ಕಾರ,ನಿಮಗೂ ನಿಮ್ಮ ಮುದ್ದು ಮಗಳಿಗೂ.

    ReplyDelete
  2. ಕೃಷ್ಣಮೂರ್ತಿ ಸರ್,
    ನಿಮ್ಮ ವಿಶ್ವಾಸಕ್ಕೆ ಸಾಟಿಯುಂಟೇ..
    ಹೀಗೆ ಇರಲಿ ನಿಮ್ಮ ಆಶೀರ್ವಾದ.

    ReplyDelete
  3. saanvi namma jotege beLeyuttiddaaLe....
    very nice...

    yaavaaga bhaaratakke barodu...?

    ReplyDelete
  4. Hm, devasthanadalli bharathanatya mugida nantara yakshagaanavU naDeda dinavaadare aavattu devasthanakke naanu bandidde.

    Sanvina nODbEku ondina. yaavaaga gottilla.

    Sanvige neevu pustaka tanda vishya Odi nange khushiyaaytu.
    chenaagi bardideera, istavaaytu.

    -Shantala

    ReplyDelete
  5. ಮನಮುಕ್ತಾ,
    ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ.

    ReplyDelete
  6. ರಿಚಿ,
    ಥ್ಯಾಂಕ್ಸ್ ಕಣೋ..

    ReplyDelete
  7. ದಿನಕರ್,
    ವಂದನೆಗಳು..
    ಮುಂದಿನ ವರ್ಷದ ಮೊದಲ ಭಾಗದಲ್ಲಿ..

    ReplyDelete
  8. ಶಾಂತಲಾ,
    ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು..
    ನಾವು ಭರತನಾಟ್ಯ ಮುಗಿಯುತ್ತಿದ್ದ ಹಾಗೇ ಸಾನ್ವಿ ಅಳಲು ಶುರುಮಾಡಿದಳು ಅಂತಾ ಬಂದು ಬಿಟ್ಟೆವು..

    ಖಂಡಿತವಾಗಿ ಭೇಟಿಯಾಗೋಣಾ.

    ReplyDelete