Saturday, August 28, 2010

ಸೃಷ್ಟಿ ಸೊಬಗು



                   
ಶುಭ್ರ ಆಕಾಶದಿ
ನಗುವ ಚಲುವ ಚಂದಿರ
ನಮ್ಮ ಮನೆಯಂಗಳದಿ
ನಲಿವ ಮುದ್ದು ತಾರೆ

ಹಸಿರ ವನದಿ
ಅರಳುವ ಕೆಂಪು ಹೂವು
ನಮ್ಮ ಹೃದಯದಿ
ಸೂಸುವ ಕಂಪು ಮೊಗ್ಗು

ನೀಲ ಸಾಗರದಾಳದಿ
ಹೊಳೆವ ಹವಳ ಪಚ್ಚೆ
ನಮ್ಮ ಒಡಲಾಳದಿ
ಬಿರಿವ ಪುಟ್ಟ ರತ್ನ

ಸೃಷ್ಟಿಯ ಸೊಬಗಿನದಿ
ಎನಿತು ವಿಸ್ಮಯ 
ನಮ್ಮಯ ಜೀವನದಿ
ನೀನೇ ಚೇತನ್ಮಯ

10 comments: