ಕೆಂಗುಲಾಬಿ ಬಣ್ಣ ಕಪ್ಪು ಕೇಶ
ಗುಂಡು ಕೆನ್ನೆ ಹವಳದ ತುಟಿ
ಪುಟ್ಟ ಬೆರಳು ಮುದ್ದು ಪಾದ
ಜಗಕೆ ಆಗಷ್ಟೆ ಆಗಮಿಸಿದ
ಆ ಸೊಬಗ ಜೀವ ನನ್ನ ಕೈಗಳಲಿ..
ಎಲ್ಲವೂ ಹೊಸದು ಎಲ್ಲವೂ ಬೆರಗಿನದು
ಈ ಜಗವೆಲ್ಲಾ ಆನಂದಮಯಕೈಗಳಲೊಂದು ನವ ಚೇತನ
ಹೃದಯದಲಿ ಹೊಸ ಹುಮ್ಮಸ್ಸು
ಸೃಷ್ಟಿಯ ಈ ಅದ್ಭುತ ರಚನೆಗೆ
ಮಾತು ಬರೀ ಮೌನ
ಮನದಲ್ಲೊಂದು ನಮನ
ಆ ಸೃಷ್ಟಿಯ ’ಕಲಾವಿದ’ನಿಗೆ
ಪಿಳಿಪಿಳಿ ಕಣ್ಣುಗಳಲಿ
ಮೊದಲ ಬಾರಿಗೆ
ನನ್ನನ್ನೇ ನೋಡುತ್ತಿದ್ದ
ನನ್ನ ಮಗಳು ..
ಮುದ್ದಾದ ಮಗು..ಮಧುರವಾದ ಭಾವ..ಸು೦ದರ ಸಾಲುಗಳು...ಹಿಡಿಸಿತು.
ReplyDeleteಮನಮುಕ್ತಾ,
ReplyDeleteನಮ್ಮ ಬ್ಲಾಗಿಗೆ ನಿಮಗೆ ಸುಸ್ವಾಗತ !
ನಿಮ್ಮ ಪ್ರೀತಿಯ ಮಾತುಗಳಿಗೆ ಧನ್ಯವಾದಗಳು.
ಪ್ರೀತಿಯಿಂದ