Saturday, August 28, 2010

ಸೃಷ್ಟಿ ಸೊಬಗು



                   
ಶುಭ್ರ ಆಕಾಶದಿ
ನಗುವ ಚಲುವ ಚಂದಿರ
ನಮ್ಮ ಮನೆಯಂಗಳದಿ
ನಲಿವ ಮುದ್ದು ತಾರೆ

ಹಸಿರ ವನದಿ
ಅರಳುವ ಕೆಂಪು ಹೂವು
ನಮ್ಮ ಹೃದಯದಿ
ಸೂಸುವ ಕಂಪು ಮೊಗ್ಗು

ನೀಲ ಸಾಗರದಾಳದಿ
ಹೊಳೆವ ಹವಳ ಪಚ್ಚೆ
ನಮ್ಮ ಒಡಲಾಳದಿ
ಬಿರಿವ ಪುಟ್ಟ ರತ್ನ

ಸೃಷ್ಟಿಯ ಸೊಬಗಿನದಿ
ಎನಿತು ವಿಸ್ಮಯ 
ನಮ್ಮಯ ಜೀವನದಿ
ನೀನೇ ಚೇತನ್ಮಯ

Sunday, August 22, 2010

Mistaken Identity !

It was then few hours since Saanvi was born.

After the initial feeding she was taken to the baby nursery. After some time, nurse called our ward room and told that baby is ready for feed and that she is bringing the baby back.

We both were excited to hear that our baby is coming back.

As nurse brought the trolley with baby, something didn't seemed right. I had remembered our Saanvi had yellow cap. This baby had a purple cap. Also it didn't look like Saanvi we had seen earlier !

Thanks to tagging system !

The number on baby's tag was different from what was on my tag & Saanvi's mother's tag.

It was not our Saanvi !!

Apparently there was some confusion from nurse's side. Earlier there was a family in our ward room and they had moved to a different room. Nurse had brought their baby to our room !!

After this little drama, our Saanvi came. We confirmed by matching the tagging numbers. As well, the baby was the Saanvi we had seen few hours before !

With tagging system in place, though its not so easy for babies to get swapped, things like these are always uncomforting ones.


PS: After the child is born, the babies are taken to baby nursery so that they monitor baby overnight and also that mom can take some rest. Moms definitely need rest after the delivery! The nurse brings the baby back to mom when it is hungry.

Thursday, August 19, 2010

ನನ್ನ ಮಗಳು











ಕೆಂಗುಲಾಬಿ ಬಣ್ಣ ಕಪ್ಪು ಕೇಶ
ಗುಂಡು ಕೆನ್ನೆ ಹವಳದ ತುಟಿ
ಪುಟ್ಟ ಬೆರಳು ಮುದ್ದು ಪಾದ
ಜಗಕೆ ಆಗಷ್ಟೆ ಆಗಮಿಸಿದ
ಆ ಸೊಬಗ ಜೀವ ನನ್ನ ಕೈಗಳಲಿ..

ಎಲ್ಲವೂ ಹೊಸದು ಎಲ್ಲವೂ ಬೆರಗಿನದು
ಈ ಜಗವೆಲ್ಲಾ ಆನಂದಮಯ
ಕೈಗಳಲೊಂದು ನವ ಚೇತನ
ಹೃದಯದಲಿ ಹೊಸ ಹುಮ್ಮಸ್ಸು

ಸೃಷ್ಟಿಯ ಈ ಅದ್ಭುತ ರಚನೆಗೆ
ಮಾತು ಬರೀ ಮೌನ
ಮನದಲ್ಲೊಂದು ನಮನ
ಆ ಸೃಷ್ಟಿಯ ’ಕಲಾವಿದ’ನಿಗೆ

ಪಿಳಿಪಿಳಿ ಕಣ್ಣುಗಳಲಿ
ಮೊದಲ ಬಾರಿಗೆ
ನನ್ನನ್ನೇ ನೋಡುತ್ತಿದ್ದ
ನನ್ನ ಮಗಳು ..

Thursday, August 12, 2010

When Stork visits

Initially we thought this blog will be in Kannada, but soon realized that by keeping open there are more thoughts, expressions and works that can be brought in.

So the blog will be multi-lingual and will be making an attempt to capture small steps of our dear daughter Saanvi.

It will be a walk through the beautiful tomorrow's that will be arriving.

Speaking of arrival,  often arrival of baby is indicated by the image of a Stork bearing the baby wrapped in a sling held in its beak.


Though its not sure how this beautiful association started but the imagination itself is wonderful.

So when Stork visited us, it indeed brought us a lovely & beautiful baby..

Big thanks to the Stork who visited us ! We owe you a nice treat !!

Wednesday, August 11, 2010

ಪುಟ್ಟ ಪುಟ್ಟ ಹೆಜ್ಜೆ


ಚಂದ್ರ-ತಾರೆಗಳು ನಲಿಯುವ ಆಕಾಶದಂಗಳದಿಂದ ನಮ್ಮ ಮನೆಗೆ ಮುದ್ದು ತಾರೆಯೊಂದರ ಆಗಮನವಾಗಿದೆ.


ನೋಡಲಿಕ್ಕೆ ಹೊಳೆಯುವ ಪುಟ್ಟ ತಾರೆಯಂತಿರುವ ಈ ನಮ್ಮ ಮಗುವಿನ ಆಗಮನದಿಂದ ನಮ್ಮ ಮನಗಳಲ್ಲಿ ಹೂಮಳೆ ನಡದೇ ಇದೆ.

ನಮ್ಮ ಮುದ್ದು ಮಗುವಿಗೆ ನಾವಿಟ್ಟ ಹೆಸರು - ಸಾನ್ವಿ.

ಸಾನ್ವಿಯ ಪುಟ್ಟ ಪುಟ್ಟ ಹೆಜ್ಜೆಗಳ ಗುರುತುಗಳನ್ನು ಹೆಕ್ಕಿ ಜೋಪಾನ ಮಾಡುವ ಚಿಕ್ಕ ಪ್ರಯತ್ನವೇ ಈ ಬ್ಲಾಗ್.

ಸಾನ್ವಿ ಜೊತೆಯಲಿ ಸಾಗುತ್ತ ಮುದ್ದು ಮಗಳ ಈ ಸುಂದರ ಪಯಣದಲ್ಲಿ ನಾವು ಹೆಜ್ಜೆ ಹಾಕುತ್ತಿರುತ್ತೇವೆ.

ಅಂದಾಗೆ ಮೇಲೆ ಹಾಕಿದ ಹೆಜ್ಜೆ ಗುರುತುಗಳು ಸಾನ್ವಿ ಜನಿಸಿದ ಮೊದಲ ದಿನ ಆಸ್ಪತ್ರೆಯಲ್ಲಿ ತೆಗೆದದ್ದು. ಮಗುವಿನ ಅಪ್ಪ-ಅಮ್ಮನಿಗೆ ಅದರ ಪಾದಗಳ ಅಚ್ಚಿರುವ ಒಂದು ನೆನಪಿನ ಕಾಣಿಕೆ ಕೊಡುವ ಸುಂದರ ಪರಿಪಾಟ ಆಸ್ಪತ್ರೆಯಲ್ಲಿದೆ. ಈ ಪಾದಗಳು ಆ ನೆನಪಿನ ಕಾಣಿಕೆಯಿಂದ !


- ಅಪ್ಪ ಅಮ್ಮ