The rabbit hops around the house and Saanvi sitting in rabbit's arms starts giggling.
Rabbit hop is one of the many things which makes Saanvi laugh. Rabbits are us and she love hopping carrying her.
Things like pretending to fall or even sneezing is making her giggle.
Surest thing to put a smile on her face is the mirror.
Anytime she is taken near the mirror, she smiles at her own image. Sometimes she even says something to her image.
Saanvi enjoyed the new toys & dress for Christmas. She roamed in christmas in the park celebration. Met Santa.
On New year day, she visited the temple in new dress.
And Saanvi turned over on her own ! Now she gets on her tummy without any pushing and looks around laying on tummy.
ಮೊಲ ಮನೆ ತುಂಬಾ ಕುಪ್ಪಳಿಸುತ್ತಿದ್ದರೆ, ಮೊಲದ ಕೈಯಲ್ಲಿ ಕುಳಿತ ಸಾನ್ವಿಗೆ ಖುಷಿಯೋ ಖುಷಿ.
ಸಾನ್ವಿ ನಗಿಸಲು ಮೊಲದ ಆಟವೊಂದು ವಿಧಾನ. ನಾವೇ ಮೊಲವಾಗಿ ನೆಗೆಯುತ್ತಿದ್ದರೆ ಕಿಲಿಕಿಲಿ ನಗು ಸಾನ್ವಿಗೆ.
ಸುಮ್ಮನೆ ಬೀಳುವಂತೆ ಮಾಡುವುದು ಸಹ ನಗು ತರಿಸುತ್ತೆ.
ಖಂಡಿತವಾಗಿ ಸಾನ್ವಿಯ ಅಚ್ಚುಮೆಚ್ಚಿನ ವಸ್ತು - ಕನ್ನಡಿ.
ಯಾವಾಗ ಕನ್ನಡಿಯ ಮುಂದೆ ಇದ್ದರೂ, ತನ್ನ ಬಿಂಬವನ್ನು ತಾನೇ ನೋಡಿಕೊಂಡು ನಗುವುದು ಖಂಡಿತ. ಕೆಲವೊಮ್ಮೆ ತನ್ನ ಬಿಂಬಕ್ಕೆ ಏನೋ ಹೇಳುವ ಪ್ರಯತ್ನವೂ ನಡೆಯುವುದು.
ಕ್ರಿಸ್ಮಸ್‍ಗೆ ಹೊಸ ಬಟ್ಟೆ ಮತ್ತು ಬೊಂಬೆಗಳು ಸಾನ್ವಿಗೆ ಹಾಜರಾದವು. ಸಂತಾ ಕ್ಲಾಸ್ ಭೇಟಿ ಸಹ ಆಯ್ತು. ಹಾಗೆಯೇ ’ಕ್ರಿಸ್ಮಸ್ ಇನ್ ದ ಪಾರ್ಕ್’ ನಲ್ಲಿ ಸುತ್ತಾಟವೂ ನಡೆಯಿತು.
ಹೊಸ ವರ್ಷದ ದಿನ ಹೊಸ ವಸ್ತ್ರದಲ್ಲಿ ಸಾನ್ವಿ ದೇವಾಲಯಕ್ಕೆ ಹೋಗಿದ್ದಳು.
ಅಂದಾಗೆ, ಸಾನ್ವಿ ಹೊಸ ವರ್ಷದ ದಿನ ಯಾವ ಸಹಾಯವಿಲ್ಲದೆ ಮಗುಚಿಕೊಂಡಳು. ಈಗ ಮಗುಚಿಕೊಂಡು ಹೊಟ್ಟೆಯ ಮೇಲೆ ಮಲಗಿ ಸುತ್ತಲೂ ನೋಡುವ ಕೆಲಸ.