ಪಾರಿಜಾತ ಪುಷ್ಪವೊಂದು
ಗಾಳಿಯಲಿ ತೇಲಿ ಬಂದು
ಅದರ ಸೊಬಗಿನಿಂದ ಮೋಹಗೊಂಡು
ಬೊಗಸೆಯೊಡ್ಡಿ ನಾವು ನಿಂತೆವಂದು
ಪರಾಗ ರೇಣು ಮಡಿಲಲಿ
ಪುಟ್ಟ ಪಾರಿಜಾತ ಮೊಳೆಯಿತಲ್ಲಿ
ಪಾರಿಜಾತ ಹೊತ್ತ ಸಂತಸದಲಿ
ಕಂಗೊಳಿಸಿದಳು ಅವಳು ಅಂದದಲಿ
ನವಮಾಸ ಒಡಲ ಬೆಳಗಿ
ಇಳಿಯಿತು ಪಾರಿಜಾತ ಇಳೆಗೆ
ಎನಿತು ಸೊಬಗು ಎಂತ ಸೃಷ್ಟಿ
ದೇವಲೋಕದ ಪುಷ್ಪವೇ ಸೈ
ಪಾರಿಜಾತ ನಲಿದು ನಲಿಸಿ
ಕಮ್ಮನೆ ಪ್ರೀತಿ ಸೂಸಿ
ಬೆಳೆಯುವುದ ಕಂಡು ಹರ್ಷಿಸಿ
ನೋಡುತ್ತಲೇ ವರ್ಷವೊಂದ ಗಳಿಸಿ
ಪ್ರೇಮ ಪಾರಿಜಾತಕ್ಕೀಗ ಒಂದು ವರ್ಷ !
ಬೆಳಯಲಿ ಪಾರಿಜಾತ ಅಂದವಾಗಿ
ಹರಡಲಿ ಕಂಪು ಕೀರ್ತಿಯಾಗಿ
ಮಾಡಲಿ ಹೆಸರು ಸಾಧನೆಗಾಗಿ
ಇದುವೇ ಆಶಯ ಪಾರಿಜಾತಕ್ಕಾಗಿ