Showing posts with label ಸಾನ್ವಿ. Show all posts
Showing posts with label ಸಾನ್ವಿ. Show all posts

Sunday, October 28, 2012

First day of school !

Her mom was getting Saanvi ready.

Saanvi:  Where am I going ?
Mom:  You are going to the playhome school that we saw other day.
Saanvi (as expected) : Why?
Mom: To play in the slide & swing. Also there are lots of friends & teacher.

In no time, Saanvi was ready in her bright pink dress. The little green school bag that mainly had snacks box and water bottle was on her.

We took her to the school.

We didn't know how she would react when its time to go inside the school. Is she going to cry and insist she won't go? In any case, we thought we will hang around the school.

So we took her to the playhome and left her at the class room where there were already 2 other kids. She sat with them and the teacher brought some colorful cups to stack upon. We stayed there some more time and Saanvi started looking comfortable.

We took courage and left her with the teacher. We came out of school and then waited for some more time outside. There was no noise. Finally,we came back to home.

We knew she needs to be in school for 2 & half hours. But it felt like time was running very slow. We were wondering if she started crying after we came. We again came to school after one hour and the maid in school informed that Saanvi is doing fine.

Finally after 2 & half hours, it was time for Saanvi to come out of school.

There she was..

Our little girl with bag on her back. She was walking towards the school gate, holding hand of her teacher. She looked little excited, little puzzled, little happy & little tensed. As soon as she saw us, her eyes lit up. She rushed to the gate and hugged us.

We were very eager to hear how did it go. Teacher & maid was full of praise for Saanvi that she didn't cry at all and it was good to see the kid to be like that on first day. Looks like she had a good time in school with singing rhymes, playing & seeing new friends.

Teacher also told she has given a 'star' to Saanvi as she was absolutely good on first day.

While returning back, Saanvi was very happy & proud about the star. She said teacher gave the star & kept showing it.

What a way to end the first day in school by taking a star back home !

Sunday, September 4, 2011

Month Twelve


Saanvi is on her feet !

She gets up on her own and starts walking around. She simply loves walking and its becoming hard for her mom to catch up with her !

She has seen somebody touching her photo on the computer screen and giving a kiss. Now she does the same, every time she sees one of her photo. She does it for other baby and children photos as well.

One day, she was standing on top of a book and her mom told that book should not be stamped by leg. She told it should be respected by touching it by hand and doing namaste. Now she started doing it for everything she hits by leg that includes table, bed, modem, TV remote, computer.

She can now eat on her own and especially enjoys eating crispy things.

She can Imitate animals and does a cute imitation of Lion, Dog & Cow.

Also learnt some dance moves and starts dancing around !

Finally, Saanvi's birthday was celebrated for 3 days. First day, Saanvi had cake cutting party and next two days, she spent wit h family by visiting the temple towns - Sringeri, Horanadu, Dharmstala & Kukke

Overall, an exciting and memorable year that went by !!



ಸಾನ್ವಿ ತನ್ನ ಕಾಲ ಮೇಲೆ ನಿಂತುಕೊಳ್ಳುತ್ತಾಳೆ !

ಯಾವ ನೆರವಿಲ್ಲದೆ, ತಾನೇ ಎದ್ದು ನಿಂತು ನಡೆದಾಡಲು ಕಲಿತಿದ್ದಾಳೆ. ನಡೆದಾಡುವುದು ಸಾನ್ವಿಗೆ ತುಂಬಾ ಅಚ್ಚುಮೆಚ್ಚು. ಆದರೆ ಸಾನ್ವಿಯ ಹಿಂದೆ ಓಡಿ ಅವಳನ್ನು ಹಿಡಿಯುವುದು ಅಮ್ಮನಿಗೆ ಕಷ್ಟ !

ಗಣಕಯಂತ್ರದ ಪರದೆಯ ಮೇಲೆ ಅವಳ ಪೋಟೋವನ್ನು ಮುಟ್ಟಿ ಮನೆಯವರೆಲ್ಲಾ ಮುತ್ತಿಡುವುದನ್ನು ನೋಡಿದ ಸಾನ್ವಿ, ಈಗ ತನ್ನ ಪೋಟೋ ನೋಡಿದ ತಕ್ಷಣ ಅದನ್ನು ಕೈಯಿಂದ ಮುಟ್ಟಿ ಮುತ್ತಿಡುತ್ತಾಳೆ. ಯಾವುದೇ ಮಕ್ಕಳ ಪೋಟೋ ನೋಡಿದರೂ ಅದಕ್ಕೆ ಮುತ್ತು ಸಿಗುತ್ತದೆ.

ಅದು ಯಾವಾಗಲೋ ಪುಸ್ತಕದ ಮೇಲೆ ಹತ್ತಿ ನಿಂತಾಗ, ಸಾನ್ವಿಯ ಅಮ್ಮ ಪುಸ್ತಕವನ್ನು ಹಾಗೆ ತುಳಿಯಬಾರದೆಂದು ಹೇಳಿದ್ದಳು. ಪುಸ್ತಕವನ್ನು ಮುತ್ತಿ ನಮಸ್ಕರಿಸಿದ್ದಳು. ಈಗ ಕಾಲಿಂದ ಮುಟ್ಟಿದ ಎಲ್ಲದನ್ನು ಮುಟ್ಟಿ ನಮಸ್ಕಾರ ಮಾಡಲು ಶುರು ಮಾಡಿಕೊಂಡಿದ್ದಾಳೆ. ಮೇಜು, ಹಾಸಿಗೆ, ಗಣಕ ಯಂತ್ರ, ಮೋಡೆಮ್, ಟಿವಿ ರಿಮೋಟ್ ಎಲ್ಲದಕ್ಕೂ ನಮಸ್ಕರಿಸಿದ್ದಾಳೆ !

ಆಹಾರವನ್ನು ತಟ್ಟೆಯಿಂದ ಬಾಯಿಗೆ ಹಾಕಿಕೊಳ್ಳುವದನ್ನು ಕಲಿತಿದ್ದಾಳೆ. ಗರಿಗರಿಯಾದ ಆಹಾರವನ್ನು ತಿನ್ನುವುದು ಇಷ್ಟ.

ಪ್ರಾಣಿಗಳನ್ನು ಅನುಕರಣೆ ಮಾಡುವುದು ಕಲಿತಿದ್ದಾಳೆ. ಸಿಂಹ, ನಾಯಿ ಮತ್ತು ಹಸುವಿನ ಅನುಕರಣೆ ಮುದ್ದಾಗಿ ಮಾಡುತ್ತಾಳೆ.
ಕುಣಿಯುವಕ್ಕೆ ಹೆಜ್ಜೆ ಹಾಕುವುದನ್ನು ಕಲಿತಿದ್ದಾಳೆ.

ಸಾನ್ವಿಯ ಮೊದಲ ಜನ್ಮದಿನವನ್ನು ೩ ದಿವಸ ಆಚರಿಸಲಾಯಿತು. ಮೊದಲ ದಿನ , ಸಾನ್ವಿ ಕೇಕ್ ಕತ್ತರಿಸಿದಳು. ಮುಂದಿನ ಎರಡು ದಿವಸ, ಕುಟುಂಬದವರೊಂದಿಗೆ ಶೃಂಗೇರಿ, ಹೊರನಾಡು, ಧರ್ಮಸ್ಥಳ ಮತ್ತು ಕುಕ್ಕೆ ಕ್ಷೇತ್ರಗಳಲ್ಲಿ ಕಳೆದಳು.

ಒಟ್ಟಾರೆ, ಒಂದು ಅವಿಸ್ಮರಣೀಯ ಮತ್ತು ಉತ್ಸಾಹ-ಉಲ್ಲಾಸದ ಸಾನ್ವಿಯ ಮೊದಲ ವರ್ಷ ಕಳೆಯಿತು.



Wednesday, August 17, 2011

ಪ್ರೇಮ ಪಾರಿಜಾತಕ್ಕೆ ಒಂದು ವರ್ಷ !

ಪಾರಿಜಾತ ಪುಷ್ಪವೊಂದು 
ಗಾಳಿಯಲಿ ತೇಲಿ ಬಂದು
ಅದರ ಸೊಬಗಿನಿಂದ ಮೋಹಗೊಂಡು
ಬೊಗಸೆಯೊಡ್ಡಿ ನಾವು ನಿಂತೆವಂದು

ಪರಾಗ ರೇಣು ಮಡಿಲಲಿ
ಪುಟ್ಟ ಪಾರಿಜಾತ ಮೊಳೆಯಿತಲ್ಲಿ
ಪಾರಿಜಾತ ಹೊತ್ತ ಸಂತಸದಲಿ
ಕಂಗೊಳಿಸಿದಳು ಅವಳು ಅಂದದಲಿ 

ನವಮಾಸ ಒಡಲ ಬೆಳಗಿ
ಇಳಿಯಿತು ಪಾರಿಜಾತ ಇಳೆಗೆ 
ಎನಿತು ಸೊಬಗು ಎಂತ ಸೃಷ್ಟಿ
ದೇವಲೋಕದ ಪುಷ್ಪವೇ ಸೈ

ಪಾರಿಜಾತ ನಲಿದು ನಲಿಸಿ
ಕಮ್ಮನೆ ಪ್ರೀತಿ ಸೂಸಿ
ಬೆಳೆಯುವುದ ಕಂಡು ಹರ್ಷಿಸಿ 
ನೋಡುತ್ತಲೇ ವರ್ಷವೊಂದ ಗಳಿಸಿ

ಪ್ರೇಮ ಪಾರಿಜಾತಕ್ಕೀಗ ಒಂದು ವರ್ಷ !

ಬೆಳಯಲಿ ಪಾರಿಜಾತ ಅಂದವಾಗಿ
ಹರಡಲಿ ಕಂಪು ಕೀರ್ತಿಯಾಗಿ
ಮಾಡಲಿ ಹೆಸರು ಸಾಧನೆಗಾಗಿ 
ಇದುವೇ ಆಶಯ ಪಾರಿಜಾತಕ್ಕಾಗಿ 

Saturday, April 23, 2011

Month Eight

There is a constant demand from Saanvi to make her walk. With somebody holding her shoulders, she is loving to walk. Instead of small steps, she is covering the ground with big steps !

Along with the walks, kicking the ball is another favorite activity these days.

She gets excited seeing other kids around. Often she extends her hand as if to call them and sometimes makes noises when she see other kids.

She is liking the boiled vegetables, rice & pulses. Saanvi can hold pieces of the vegetables in her fingers and stuffs into her mouth. Same with the Chapati pieces.

There are two new teeth now on upper jaw. All together 4 tooth !

















ಸಾನ್ವಿಗೆ ನಡೆದಾಡುವ ಹುಮ್ಮಸ್ಸು. ನಾವು ಯಾರಾದರೂ ಹಿಡಿದುಕೊಂಡು ಓಡಾಡಿಸಿದರೆ ಮನೆ ತುಂಬಾ ಹೆಜ್ಜೆ ಇಡುವ ಆಟ. ಪುಟ್ಟ ಹೆಜ್ಜೆಗಳ ಬದಲು ದಾಪುಗಾಲು ಇಡುತ್ತಿರುವುದು ವಿಶೇಷ !

ಇದರ ಜೊತೆಗೆ ಕಾಲಿನಿಂದ ಚೆಂಡನ್ನು ತಳ್ಳುವುದು ಇನ್ನೊಂದು ನೆಚ್ಚಿನ ಆಟ.

ಚಿಕ್ಕ ಮಕ್ಕಳನ್ನು ನೋಡಿದರೆ ಸಾನ್ವಿಗೆ ತುಂಬಾ ಖುಷಿ. ಚಿಕ್ಕ ಮಕ್ಕಳೆಗೆ ಕೈ ಚಾಚುವುದು ಮತ್ತು ಧ್ವನಿ ಮಾಡುತ್ತಿರುತ್ತಾಳೆ.

ಬೇಯಿಸಿದ ತರಕಾರಿ, ಅನ್ನ ಮತ್ತು ಬೇಳೆ ಇಷ್ಟವಾಗುತ್ತಿವೆ. ತರಕಾರಿ ತುಂಡುಗಳನ್ನು ಬೆರಳಿನಲ್ಲಿ ಹಿಡಿದುಕೊಂಡು ಬಾಯಿಗೆ ಹಾಕಿಕೊಳ್ಳುತ್ತಿರುತ್ತಾಳೆ. ಹಾಗೆಯೇ ತನ್ನ ನೆಚ್ಚಿನ ಚಪಾತಿ ತುಂಡುಗಳನ್ನೂ ಸಹ.

ಹೊಸದಾಗಿ ಎರಡು ಹಲ್ಲುಗಳು ಮೇಲ್ದವಡೆಯಲ್ಲಿ ಬಂದಿವೆ. ಈಗ ಒಟ್ಟು ನಾಲ್ಕು ಹಲ್ಲುಗಳು !

Saturday, March 26, 2011

ಬಣ್ಣದ ಲೋಕ















ಜಿಗಿಜಿಗಿದು ಕುಣಿವ ಅಲೆಯ ನೀಲಿ
ಸುಯ್‍ಸುಯ್ ತೂಗೋ ಮರದ ಕಂದು
ಬಣ್ಣದ ಬೆರಗಿನ ಲೋಕವಿದು

ಚಿಲಿಪಿಲಿ ಉಲಿಯುವ ಗಿಳಿಯ ಹಸಿರು
ಜುಮುಜುಮು ತೂಗುವ ಹೂವಿನ ಕೇಸರಿ
ಬಣ್ಣದ ಬೆರಗಿನ ಲೋಕವಿದು

ಕರಕರ ಕಡಿಯುವ ಸೇಬಿನ ಕೆಂಪು
ಹನಿಹನಿ ಜಿನುಗುವ ಹಾಲಿನ ಬಿಳುಪು
ಬಣ್ಣದ ಬೆರಗಿನ ಲೋಕವಿದು

ಪಳಪಳ ಹೊಳೆವ ಕಿವಿಯೊಲೆ ಹಳದಿ
ಹಿಡಿಹಿಡಿ ಸಿಗುವ ಜಡೆ ಕಪ್ಪು
ಬಣ್ಣದ ಬೆರಗಿನ ಲೋಕವಿದು

ಬಗೆಬಗೆ ಬಣ್ಣ ಬಗೆಬಗೆ ವಿಧ
ಎಂತಹ ಸುಂದರ ಲೋಕವಿದು
ಬಣ್ಣದ ಬೆರಗಿನ ಲೋಕವಿದು

******************************
ಹೋಳಿ ಹಬ್ಬವನ್ನು ಬಣ್ಣದ ಸಡಗರದಿಂದ ಸಾನ್ವಿ ಆಚರಿಸಿದ ಕ್ಷಣಗಳಲ್ಲಿ..

Tuesday, March 15, 2011

Month Seven

Saanvi is calling..

She has learnt to wave hands as if to call us.  She grabs any object which she can hold and tries to shake it.

Saanvi is able to sit for a while. Trying to touch her own feet when sitting is her favorite activity. After sitting for a while, she just slowly slide sidewise and becomes flat. It looks like a sack of sugar sliding...

Curiosity towards food is been increasing and she has been looking at our plates. These days she is getting to taste new food like customized versions of rice & green vegetables. This is complimenting her staple food. She enjoys grating small pieces of apple with her two teeth. But she most enjoys the little chapati/talipattu pieces and chews on them as if they are world's most tastiest bytes.

Drinking water has become a play. She blows air while drinking water to make the hissing sound.

Finally, she is making voices as if she is singing. The singing session goes on for most of the day and sometimes the songs are non-stop !


ಕೈ ಬೀಸುವುದು ಸಾನ್ವಿಯ ಹೊಸ ಕಲಿಕೆ. ನಮ್ಮನ್ನು ಕೈ ಬೀಸಿ ಕರೆಯುವಂತೆ ಭಾಸವಾಗುತ್ತದೆ. ಹಾಗೇ ಕೈಗೆ ಸಿಕ್ಕದನ್ನು ಅಲುಗಾಡಿಸುವುದು ನಡಿದಿದೆ.

ಕುಳಿತುಕೊಳ್ಳುವುದಕ್ಕೆ ಶುರುಮಾಡಿದ್ದಾಳೆ ಸಾನ್ವಿ. ಕುಳಿತ ಸ್ವಲ್ಪ ಸಮಯದ ನಂತರ ಸಕ್ಕರೆ ಮೂಟೆಯ ತರ ಪಕ್ಕಕ್ಕೆ ವಾಲಿ ಅಡ್ಡವಾಗಿ ಬಿಡುತ್ತಾಳೆ. ಕುಳ್ಳಿರಿಸಿದಾಗ ತನ್ನ ಪಾದಗಳನ್ನು ತಾನೇ ಮುಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಿರುತ್ತಾಳೆ.

ಆಹಾರದ ಬಗ್ಗೆ ಆಸಕ್ತಿ-ವಿಸ್ಮಯ ಹೆಚ್ಚು ಬೆಳೆದಿದೆ. ನಾವು ಊಟ ಮಾಡುವಾಗ ನಮ್ಮ ತಟ್ಟೆಗಳ ಕಡೆ ಗಮನ ಜಾಸ್ತಿಯಾಗಿದೆ. ತನ್ನ ಎಂದಿನ ಆಹಾರದ ಜೊತೆಗೆ ಈಗೀಗ ಹೊಸ ಬಗೆಯ ರುಚಿಗಳನ್ನು ನೋಡುತ್ತಿದ್ದಾಳೆ. ಮೆತ್ತಗೆ ಬೇಯಿಸಿದ ಅನ್ನ-ಸೊಪ್ಪು-ಕೆಲವೊಮ್ಮೆ ತರಕಾರಿ ಸೇವನೆ. ಸೇಬಿನ ಚಿಕ್ಕ ಹೋಳುಗಳನ್ನು ತನ್ನ ಎರಡು ಹಲ್ಲುಗಳಲ್ಲಿ ಕರಕರ ಎಂದು ಎರೆಯುತ್ತಿರುತ್ತಾಳೆ.
ಅತ್ಯಂತ ಖುಷಿಕೊಡುವುದು ಚಪಾತಿ ಅಥವಾ ತಾಳಿಪಟ್ಟಿನ ಚಿಕ್ಕ ತುಂಡು. ಅದನ್ನು ಕೈಯಲ್ಲಿ ಕೊಟ್ಟರೆ ಕೈ-ಬಾಯಿ ಹಚ್ಚಿಕೊಂಡು ಚಪ್ಪರಿಸಿಕೊಂಡು ತಿನ್ನುವುದು ಅತ್ಯಂತ ಮೆಚ್ಚಿನ ಸಮಯ !

ನೀರು ಕುಡಿಯುವುದು ಸಹ ಹೊಸ ಆಟವಾಗಿದೆ. ನೀರು ಕುಡಿಯುವಾಗ ಅದರೊಳಗೆ ಗಾಳಿ ಊದುವುದು ಮತ್ತು ಅದರಿಂದ ಉಂಟಾಗುವ ಗುಳುಗುಳು ಶಬ್ದದಿಂದ ಖುಷಿ!

ಕಡೆಯದಾಗಿ ಹಾಡಿನ ರಾಗದಂತೆ ಧ್ವನಿ ಮಾಡುವುದು ಇನ್ನೊಂದು ಹೊಸ ಕಲಿಕೆ. ಈ ರಾಗಾಲಾಪ ದಿನವಿಡಿ ನಡೆಯುತ್ತಿರುತ್ತದೆ.

Saturday, March 5, 2011

ಬೆಳ್ಳಿ ಗೆಜ್ಜೆ















ಪುಟ್ಟ ಪುಟ್ಟ ಪಾದ
ಬೆಳ್ಳಿ ಗೆಜ್ಜೆಯ ಅಂಚು

ಗೆಜ್ಜೆಯ ಹೊಳೆವ ಗುಂಡು
ತಾಕಿದಾಗ ಮೂಡುವ ಸದ್ದು

ಗಲ್‍ಗಲ್ ಸದ್ದಿಗೆ ಅಚ್ಚರಿ
ಅರಳಿ ನಿಂತ ಕಣ್ಣು

ಕಾಲು ಕುಣಿಸಿದ ಕಿನ್ನರಿಗೆ 
ಸದ್ದಿನ ಮೂಲದ ಹುಡುಕಾಟ

ನಾದ ಹೊಮ್ಮುವ ಮೂಲ
ಕಾಲ ತುದಿಯಲ್ಲೆನ್ನುವ ಸಂತಸ

ಮತ್ತೆ ಕಾಲು ಕುಲುಕಾಟ
ಮತ್ತದೇ ಅಚ್ಚರಿ ವಿಸ್ಮಯದಾಟ

ಕಿನ್ನರಿಯ ಮೆಚ್ಚುಗೆಯ ನೋಟ
ಬೆಳ್ಳಿಗೆಜ್ಜೆಗೆ ಸಂತೃಪ್ತಿಯ ಹೆಮ್ಮೆ

**********************
ಸಾನ್ವಿಗೆ ನಿನ್ನೆ ಬೆಳ್ಳಿಗೆಜ್ಜೆ ತೊಡಿಸಿ, ಅವರ ಅಮ್ಮ ಮತ್ತು ಅಜ್ಜಿ ನೋಡುತ್ತಿದ್ದಾಗಿನ ದೃಶ್ಯಾವಳಿ ಇದು..

Monday, February 14, 2011

ವೀಣೆ, ರಾಗ ಮತ್ತು ಪ್ರೀತಿ

ಒಲವಿನ ವೀಣೆ ಮೀಟಿ                                           
ನಲಿವಿನ ನಾದ ಹೊಮ್ಮಿ           
ಜನಿಸಿದ ಸುಶ್ರಾವ್ಯ ರಾಗ 

ರಾಗ ಹುಟ್ಟಿದ ಸಮಯ
ವೀಣೆ ಪಟ್ಟ ಪರಿಶ್ರಮ
ನೆನಪಿನ ಸಂಗ್ರಹದಿ ಗುನುಗು

ರಾಗಕ್ಕೆ ನಗು ಹಿಮ್ಮೇಳ
ಆಗಾಗ ಕೇಕೆಯ ತಾಳ
ಈಗ ರಾಗವಾಗುತ್ತಿದೆ ಹಾಡು

ಹಾಡಿನ ಪಲ್ಲವಿ ಸುಂದರ
ಬೆಳಯಲಿ ಉಲ್ಲಾಸದ ಸ್ವರ
ಅಗಲಿ ವೀಣೆಗೆ ಸಡಗರ 

******************************************
ನಮ್ಮ ಪ್ರೀತಿಯ ವ್ಯಾಕರಣದಲಿ ಹೊಸ ಭಾಷ್ಯ ನೀಡಿದ ಜೀವನ ರಾಗ ಸಾನ್ವಿಗೆ  ಮತ್ತು ಸಾನ್ವಿ ಅಮ್ಮನಿಗೆ , ವ್ಯಾಲೆಂಟೇನ್ ದಿನದ ನೆಪದಲ್ಲಿ ಈ ಕವನ ಅರ್ಪಣೆ !

ಪ್ರೀತಿ ಎಲ್ಲರ ಮನದಲಿ ನಲಿಯಲಿ !

Monday, February 7, 2011

Month Six

Play time is here !

Peek a Boo is her current favorite game.
She likes it when we hide behind a curtain or door and then appear before her with a boo !Even covering our face to hide and then booing also has same effect.

In front of mirror, she likes playing peek a boo with her image..

Then there is Jhoot-Moot. It will be Saanvi & mom trying to catch dad. After running around the house holding her, Saanvi simply can't stop laughing.

The love for fingers continue to grow along with the urge to grab and put things in mouth.

Saanvi started to eat the mashed carrot, peas & sweet potato. She tried the mashed banana but didn't like it much.

She celebrated Sankranti & attended a party at dad's office as well !


















ಇದು ಆಟದ ಸಮಯ !

ಕಣ್ಣಾಮುಚ್ಚೆ ತುಂಬಾ ಇಷ್ಟವಾಗೋ ಆಟ.

ಬಾಗಿಲು ಅಥವಾ ಪರದೆಯ ಹಿಂದೆ ಅವಿತು ನಂತರ ಬೂ ಮಾಡಿದರೆ ಸಿಕ್ಕಾಪಟ್ಟೆ ಇಷ್ಟ.
ಕೈಯಿಂದ ಮುಖ ಮುಚ್ಚಿಕೊಂಡು, ಹುಡುಕುವ ಹಾಗೆ ಮಾಡಿ ಬೂ ಮಾಡಿದರೂ ಖುಷಿ.
ಕನ್ನಡಿಯ ಮುಂದೆ ನಿಂತು, ತನ್ನ ಬಿಂಬದ ಜೊತೆ ಕಣ್ಣಾಮುಚ್ಚೆ ಆಡುವುದು ಸಹ ಇಷ್ಟ.

ಇನ್ನು ಜೂಟ್-ಮುಟ್ ಆಟದಲ್ಲಿ ಸಾನ್ವಿ ಮತ್ತು ಅಮ್ಮ , ಅಪ್ಪನನ್ನು ಹಿಡಿಯಲು ಮನೆ ತುಂಬಾ ಓಡುವುದು ಸಾನ್ವಿಗೆ ಬಹಳ ನಗು ತರಿಸುವ ಆಟ.

ಎಂದಿನಂತೆ ಬೆರಳುಗಳ ಬಗೆಗಿನ ಪ್ರೀತಿ ಇದ್ದೆ ಇದೆ.

ಕೈಯೆಗೆ ಸಿಕ್ಕಿದ್ದನ್ನು ಬಾಯಿಗೆ ಹಾಕಿಕೊಳ್ಳುವ ಹುನ್ನಾರವು ಇರುತ್ತೆ.

ಗಂಧಕ್ಕಿಂತ ನುಣುಪಾಗಿ ಮಾಡಿದ ಗೆಜ್ಜರಿ, ಬಟಾಣಿ ಮತ್ತು ಸಿಹಿಗೆಣಸು ಸವಿಯಲು ಆರಂಭಿಸಿದ್ದಾಳೆ. ಬಾಳೆಹಣ್ಣಿನ ರುಚಿ ಅಷ್ಟು ಇಷ್ಟವಾಗಲಿಲ್ಲ..

ಈ ಮಾಸದಲ್ಲಿ ಸಾನ್ವಿಯ ಸಂಕ್ರಾಂತಿ ಆಚರಣೆ ನಡೆಯಿತು. ಹಾಗೆಯೇ ಅಪ್ಪನ ಅಫೀಸ್ ಪಾರ್ಟಿಗೂ ಸಾನ್ವಿ ಭೇಟಿ ನೀಡಿದ್ದಳು !

Sunday, January 30, 2011

ಅಡುಗೆ ಮನೆ


ಒಗ್ಗರಣೆ ಹಾಕುವಾಗ ಚಟಪಟ ಸದ್ದು
ಸೌಟು ಮಾಡುವ ಸೊರಸೊರ ಶಬ್ದ
ಸಾರು ಕುದಿಯುವಾಗ ಕೊತಕೊತ
ಸಾನ್ವಿಗೆ ನೋಡಲು ಬಲು ಇಷ್ಟ

ಮಿಕ್ಸರ್ ತಿರುವಾಗ ಗೊರಗೊರ ಶಬ್ದ
ಒವೆನ್ ಬಿಸಿಯಾಗುವಾಗ ಸರ್‌ಸರ್ ಶಬ್ದ
ಪಾತ್ರೆ ಬಿದ್ದಾಗ ಟಳ್‍ಟಳ್
ಸಾನ್ವಿ ತಟ್ಟನೆ ಬೆದರುವಳು ಇಲ್ಲೇ

ನೀರು ಬೀಳುವ ಸೀಳ್‍ಸೀಳ್ ಸದ್ದು
ತರಕಾರಿ ಹೆಚ್ಚುವಾಗ ಕಟ್‍ಕಟ್ ಶಬ್ದ
ಬೇಳೆ ಹಾಕುವಾಗ ಟಕ್‍ಟಕ್
ಸಾನ್ವಿಗೆ ಕೇಳಲು ಬಲು ಇಷ್ಟ

ಚಪಾತಿ ಉದ್ದುವಾಗ ಲೊಟಲೊಟ ಸದ್ದು
ದೋಸೆ ಹೊಯ್ಯುವಾಗ ಚುಯ್‍ಚುಯ್ ಶಬ್ದ
ಏಳುವ ಬಿಸಿಬಿಸಿ ಹೊಗೆ
ಸಾನ್ವಿ ಕಣ್ಣು ಅರಳುವ ಬಗೆ

ಅಡುಗೆ ಮನೆಯ ನೋಟ ಶಬ್ದ
ಯಾವಾಗ ಹೊಕ್ಕರು ನಿಲ್ಲದ ಅಚ್ಚರಿ
ಮಾಡುವುದು ವಿಸ್ಮಯ ಸೊಬಗು
ಸಾನ್ವಿಗೆ ಅದೊಂದು ಬಣ್ಣದ ಬೆರಗು

Sunday, January 16, 2011

ಸವಾರಿ















ಬಣ್ಣದ ಗೊಂಬೆಗಳ ಅಂಗಿವುಟ್ಟು
ಕೂದಲು ಹಣೆ ಮೇಲೆ ಬಿಟ್ಟು
ಬೆಚ್ಚನೆ ಟೋಪಿ ತೊಟ್ಟು
ಹೊರಟಿದೆ ನನ್ನ ಸವಾರಿ

ಕಿಟಕಿ ಹೊರಗಿನ ಬೆಳಕು
ಓಡುವ ವಾಹನದ ಸದ್ದು
ಬಾಯಿಗೆ ಸಿಗುವ ಕೈಬೆರಳು
ಮಜವಾಗಿ ಸಾಗಿದೆ ದಾರಿ

ಯಾವ ಯಾವುದೋ ಅಂಗಡಿ
ಎಷ್ಟೊಂದು ಅಲ್ಲಿ ಜನ
ಎಲ್ಲೆಲ್ಲೂ ಬಣ್ಣ ಬೆರಗು
ಇನ್ನೂ ಎಷ್ಟೊಂದಿದೆ ನೋಡೋದು

ಆದರೆ ನೋಡಿದ್ದು ಸಾಕಾಯ್ತು
ಹೊಟ್ಟೆಯು ಹಸಿವಾಯ್ತು
ಮನೆಗೆ ಹೋಗೋಣವೆನಿಸ್ತು
ಇನ್ನೂ ಎಷ್ಟೊತ್ತು ಇಲ್ಲಿರೋದು

ಮನೆಗೆ ಬಂದಾಯ್ತು
ಹಾಲು ಕುಡಿದಾಯ್ತು
ಟೆಡ್ಡಿ ಹೊದಿಕೆ ಅಮ್ಮ ಹೊದಿಸಿಯಾಯ್ತು
ಈಗ ಸಮಯ ಮಲಗೋದು

Saturday, January 8, 2011

Month Five

The rabbit hops around the house and Saanvi sitting in rabbit's arms starts giggling.

Rabbit hop is one of the many things which makes Saanvi laugh. Rabbits are us and she love hopping carrying her.

Things like pretending to fall or even sneezing is making her giggle.

Surest thing to put a smile on her face is the mirror.

Anytime she is taken near the mirror, she smiles at her own image. Sometimes she even says something to her image.

Saanvi enjoyed the new toys & dress for Christmas. She roamed in christmas in the park celebration. Met Santa.

On New year day, she visited the temple in new dress.

And Saanvi turned over on her own !  Now she gets on her tummy without any pushing and looks around laying on tummy.

ಮೊಲ ಮನೆ ತುಂಬಾ ಕುಪ್ಪಳಿಸುತ್ತಿದ್ದರೆ, ಮೊಲದ ಕೈಯಲ್ಲಿ ಕುಳಿತ ಸಾನ್ವಿಗೆ ಖುಷಿಯೋ ಖುಷಿ.

ಸಾನ್ವಿ ನಗಿಸಲು ಮೊಲದ ಆಟವೊಂದು ವಿಧಾನ. ನಾವೇ ಮೊಲವಾಗಿ ನೆಗೆಯುತ್ತಿದ್ದರೆ ಕಿಲಿಕಿಲಿ ನಗು ಸಾನ್ವಿಗೆ.

ಸುಮ್ಮನೆ ಬೀಳುವಂತೆ ಮಾಡುವುದು ಸಹ ನಗು ತರಿಸುತ್ತೆ.

ಖಂಡಿತವಾಗಿ ಸಾನ್ವಿಯ ಅಚ್ಚುಮೆಚ್ಚಿನ ವಸ್ತು - ಕನ್ನಡಿ.

ಯಾವಾಗ ಕನ್ನಡಿಯ ಮುಂದೆ ಇದ್ದರೂ, ತನ್ನ ಬಿಂಬವನ್ನು ತಾನೇ ನೋಡಿಕೊಂಡು ನಗುವುದು ಖಂಡಿತ. ಕೆಲವೊಮ್ಮೆ ತನ್ನ ಬಿಂಬಕ್ಕೆ ಏನೋ ಹೇಳುವ ಪ್ರಯತ್ನವೂ ನಡೆಯುವುದು.

ಕ್ರಿಸ್ಮಸ್‍ಗೆ ಹೊಸ ಬಟ್ಟೆ ಮತ್ತು ಬೊಂಬೆಗಳು ಸಾನ್ವಿಗೆ ಹಾಜರಾದವು. ಸಂತಾ ಕ್ಲಾಸ್ ಭೇಟಿ ಸಹ ಆಯ್ತು. ಹಾಗೆಯೇ ’ಕ್ರಿಸ್ಮಸ್ ಇನ್ ದ ಪಾರ್ಕ್’ ನಲ್ಲಿ ಸುತ್ತಾಟವೂ ನಡೆಯಿತು.

ಹೊಸ ವರ್ಷದ ದಿನ ಹೊಸ ವಸ್ತ್ರದಲ್ಲಿ ಸಾನ್ವಿ ದೇವಾಲಯಕ್ಕೆ ಹೋಗಿದ್ದಳು.

ಅಂದಾಗೆ, ಸಾನ್ವಿ ಹೊಸ ವರ್ಷದ ದಿನ ಯಾವ ಸಹಾಯವಿಲ್ಲದೆ ಮಗುಚಿಕೊಂಡಳು. ಈಗ ಮಗುಚಿಕೊಂಡು ಹೊಟ್ಟೆಯ ಮೇಲೆ ಮಲಗಿ ಸುತ್ತಲೂ ನೋಡುವ ಕೆಲಸ.

Tuesday, December 28, 2010

ಬೆರಳ್ಗೆ ಬಾಯಿ !

ಮೊದಮೊದಲು ಒಂದು ಬೆರಳು ಬಾಯಿಯಲ್ಲಿ ಇರುತಿತ್ತು.

ಈಗೀಗ ಎರಡು ಕೈಗಳಲ್ಲಿನ ಕನಿಷ್ಟ ಎರಡು ಬೆರಳುಗಳು ಬಾಯಿಗೆ ಹೋಗುತ್ತಿವೆ. ಅದರ ಜೊತೆ, ಚಪ್ಪರಿಸಿಕೊಂಡು ಬೆರಳು ಚೀಪುವುದು ನಡೆಯುತ್ತಿದೆ.

ಮೊನ್ನೆ ಸೋಫಿ ಎಂಬ ಚಿಕ್ಕ ಜಿರಾಫೆ ಮರಿ ತಗೆದುಕೊಂಡು ಬಂದೆವು. ಸಾನ್ವಿ ತರದ, ಹಲ್ಲು ಮೂಡುವುದಕ್ಕಿಂತ ಮುಂಚಿನ(ಹಲ್ಲು ಮೂಡಿದ) ಮಕ್ಕಳಲ್ಲಿ ತುಂಬಾ ಪ್ರಸಿದ್ಧವಾದದಂತೆ ಈ ಸೋಫಿ. ರಬ್ಬರಿನಿಂದ ಮಾಡಿದ ಸೋಫಿ, ಸಾನ್ವಿ ಕೈ ಬಾಯಲ್ಲಿ ಆಡಿತು.

ಕುವೆಂಪು ’ಬೆರಳ್ಗೆ ಕೊರಳ್’ಲ್ಲಿ ಹೇಳುವ ರೀತಿಯಲ್ಲಿ, ನಮ್ಮ ಸಾನ್ವಿ ‘ಬೆರಳ್ಗಳು ನೂರು ಮಡಿ ಲೇಸು, ರಬ್ಬರಿನ ಆ ನಮ್ಮ ಸೂಫಿಗಿಂ’ ಎಂಬಂತೆ ಕೆಲವೇ ದಿನಗಳಲ್ಲಿ ಮರಳಿ ತನ್ನ ಬೆರಳಿಗೆ ಮರಳಿದಳು !


ಇದರ ಜೊತೆಗೆ ಸಿರಿಲ್ ತಿನ್ನಿಸುವಾಗ ಚಮಚ ಕಚ್ಚುವುದು, ಕುತ್ತಿಗೆ ಸುತ್ತಲಿನ ವಸ್ತ್ರ ಎಳೆದು ಬಾಯಿಗೆ ಹಾಕಿಕೊಳ್ಳುವುದು ಮುಂದುವರೆದಿದೆ.

ಇದಿಷ್ಟು ಸಾನ್ವಿಯ ಬೆರಳುಗಳ ಕತೆಯಾದರೆ, ನಮ್ಮಗಳ ಬೆರಳುಗಳು ಸಾನ್ವಿಗೆ ವಿಸ್ಮಯವುಂಟು ಮಾಡುವ ಆಟಿಕೆಗಳು.

ನಮ್ಮ ಕೈ ಬೆರಳುಗಳನ್ನು ಸಾನ್ವಿ ಮುಂದೆ ಆಡಿಸುತ್ತಿದ್ದರೆ, ಅದನ್ನು ತದೇಕಚಿತ್ತದಿಂದ ನೋಡುತ್ತಿರುತ್ತಾಳೆ. ಬೆರಳುಗಳು ಹೇಗೆ ಓಡಾಡುತ್ತವೆಯೋ, ಹಾಗೇ ಸಾನ್ವಿಯ ದೃಷ್ಟಿ ಹಿಂಬಾಲಿಸುತ್ತದೆ. ಮುಖದಿಂದ ಎಷ್ಟು ದೂರ ಬೆರಳುಗಳನ್ನು ತೆಗೆದುಕೊಂಡು ಹೋದರು, ಅದನ್ನೇ ನೋಡುತ್ತಿರುತ್ತಾಳೆ.ನಮ್ಮ ಬೆರಳುಗಳ ಕೈಗೆ ಸಿಗುತ್ತಿದ್ದರೆ, ಮತ್ತೆ ಆ ಬೆರಳುಗಳನ್ನು ಬಾಯಿಗೆ ಎಳೆದುಕೊಂಡು ಹೋಗುವ ಉತ್ಸಾಹ. ಕೆಲವೊಮ್ಮೆ ಒಂದರ ಬದಲಾಗಿ ಎರಡು ಕೈಗಳನ್ನು ಹಿಡಿದಾಗ, ಯಾವ ಬೆರಳುಗಳನ್ನು ಹಿಂಬಾಲಿಸಬೇಕೆಂಬ ಜಿಜ್ಞಾಸೆ !

ಪುಟ್ಟ ಮಕ್ಕಳು ಬೆರಳು ಬಾಯಲ್ಲಿ ಇಟ್ಟುಕೊಳ್ಳುವುದರಿಂದ ಅವಕ್ಕೆ ಸಮಾಧಾನ ಆಗುತ್ತದೆಯಂತೆ, ಹಾಗೇ ಹಲ್ಲು ಬರುವದಕ್ಕಿಂತ ಮುಂಚೆ ಬೆರಳು ಚೀಪುವುದು ಜಾಸ್ತಿಯಾಗುತ್ತದೆ ಎಂದು ಸಾನ್ವಿಯ ಅಜ್ಜಿ ತಮ್ಮ ಬೆರಳು ತೋರಿಸಿ ಹೇಳುವಾಗ, ಸಾನ್ವಿ ದೃಷ್ಟಿ ಅವರ ಬೆರಳುಗಳೇ ಮೇಲೆ ಇತ್ತು !

Tuesday, December 14, 2010

ಅನ್ನಪೂರ್ಣೇ ಸದಾಪೂರ್ಣೇ..

ಈ ಸಲ ಚುಚ್ಚುಮದ್ದುಗಳ ನಂತರ ಸಾನ್ವಿ ಅಷ್ಟೇನೂ ಅಳಲಿಲ್ಲ.

ನಾಲ್ಕನೇಯ ತಿಂಗಳ ಚುಚ್ಚುಮದ್ದುಗಳನ್ನು ಸಾನ್ವಿಗೆ ನೀಡಿದ ನಂತರ ವೈದ್ಯರು, ಸಾನ್ವಿಗೆ ನಿಧಾನವಾಗಿ ಘನ ಆಹಾರವನ್ನು ಕೊಡಬಹುದೆಂದು ಸೂಚಿಸಿದ್ದರು.

ವೈದ್ಯರ ಸಲಹೆ ಮೇರೆಗೆ ಸಾನ್ವಿಗೆ ಅಕ್ಕಿ ಸಿರಿಯಲ್‍ನಿಂದ ಘನ ಆಹಾರ ಕೊಡಲು ಶುರುಮಾಡಲು ಸನ್ನದ್ಧರಾದೆವು. ಹುಟ್ಟಿದ ಗಳಿಗೆಯಿಂದ ಕೇವಲ ಎದೆಹಾಲು ಕುಡಿಯುತ್ತಿದ್ದ ಸಾನ್ವಿಗೆ ಬೇರೆ ಆಹಾರ ಕೊಡಬಹುದೆನ್ನುವ ವಿಷಯ ನಮಗೆ ವಿಶೇಷವೆನಿಸಿತ್ತು.

ಇಂತಹ ಸುಸಂದರ್ಭವನ್ನು ವಿಶೇಷವಾದ ಜಾಗವೊಂದರಲ್ಲಿ ಶುರುಮಾಡಬೇಕೆಂಬುದು ಸಾನ್ವಿ ಅಮ್ಮನ ಅಭಿಪ್ರಾಯ. ಪರಮಶಕ್ತಿಯಾದ ಭಗವಂತನ ಆಲಯಕ್ಕಿಂತ ವಿಶೇಷ ಜಾಗ ಬೇರೇನೂ ತೊರಲಿಲ್ಲ.

ಲಿವರ್‌ಮೋರ್‌ನ ಶಿವವಿಷ್ಣು ದೇವಾಲಯದಲ್ಲಿ, ಸಾನ್ವಿಯ ಅಮ್ಮ ಪುಟಾಣಿ ಚಮಚದಿಂದ ಸಿರಿಯಲ್‍ನ್ನು ದಿವ್ಯಸಾನ್ಯಿಧ್ಯದಲ್ಲಿ, ಸಾನ್ವಿಗೆ ತಿನಿಸಿದಳು. ಮೊದಲ ಸಲ ಹಾಲಿಗಿಂತ ಭಿನ್ನವಾದ ರುಚಿಯ ಸಿರಿಯಲ್ ತಿಂದ ಸಾನ್ವಿ ಅದೇನೆಂದು ತಿಳಿಯದೇ ಮುಖ ನೋಡುತ್ತಿದ್ದಳು. ನಂತರ ಚಮಚೆಯಲ್ಲಿ ನೀರಿನ ಸ್ವಾದನೆ ನಡೆಯಿತು.

ಸಧ್ಯಕ್ಕೆ ದಿನಕ್ಕೆ ಒಂದು ಸಲ ಸಿರಿಯಲ್ ಅಸ್ವಾದನೆ ನಡೆಯುತ್ತಿದೆ. ಸಿರಿಯಲ್‍ನ್ನು ಹಾಲಿನಲ್ಲಿ ತೆಳುವಾಗಿ ಕಲೆಸಿ, ಸಾನ್ವಿ ಬಾಯಿಯಲ್ಲಿ ಚಮಚದಲ್ಲಿ ಇಡುತ್ತಿದಂತೆ ಸಾನ್ವಿ ಬಾಯಿ ತೆರೆಯುವುದು ನೋಡುವುದು ಚೆಂದ. ಮೈಮೇಲೆ ಬೀಳಬಾರದಂತೆ ಸಾನ್ವಿಯ ಕುತ್ತಿಗೆಯ ಸುತ್ತ ವಸ್ತ್ರ ಕಟ್ಟಿದ್ದರೂ, ಆ ವಸ್ತ್ರವನ್ನೇ ತನ್ನ ಬಾಯಿಗೆ ಹಾಕಿಕೊಳ್ಳವ ಸನ್ನಹ ಸಾನ್ವಿಯದು. ಕೊನೆಗೆ ಬಾಯಿ ಸುತ್ತಲೂ ಬಿಳಿಯ ಪದರ. ಅದನ್ನು ಒರೆಸಿ, ನೀರು ಕುಡಿಸಿದರೆ ಸಾನ್ವಿಯ ಸಿರಿಲ್ ಕೊನೆಗೊಳ್ಳುತ್ತದೆ.

ಸಾನ್ವಿಗೆ ಅನ್ನಪ್ರಾಶನ ಮಾಡಿಸುವಾಗ ಅದಿ ಶಂಕರಾಚಾರ್ಯರು ರಚಿಸಿದ ಅನ್ನಪೂರ್ಣ ಸ್ತೋತ್ರದ ಕೆಲವು ಸಾಲುಗಳು ನೆನಪಾದವು

ಅನ್ನಪೂರ್ಣೇ ಸದಾಪೂರ್ಣೇ
ಶಂಕರಪ್ರಾಣವಲ್ಲಭೆ |
ಜ್ಞಾನವೈರಾಗ್ಯಾಸಿದ್ಯಾರ್ಥಂ
ಭಿಕ್ಷಾಂ ದೇಹಿ ಚ ಪಾರ್ವತಿ||

ಅದರ ಅನುವಾದ - ಓ ಅನ್ನಪೂರ್ಣೇ, ಯಾವಾಗಲೂ ತುಂಬಿರುವವಳೇ, ಶಿವನ ಸತಿಯೇ, ಜ್ಞಾನ ಮತ್ತು ವೈರಾಗ್ಯ ಪಡೆಯುವಂತೆ ಭಿಕ್ಷೆಯನ್ನು ನೀಡು ಪಾರ್ವತಿಯೇ.

ಸಾನ್ವಿಗೆ ಅನ್ನ ಉಣಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮ ವಿನಮ್ರ ಪ್ರಾರ್ಥನೆ - ಪ್ರಪಂಚದಲ್ಲಿ ಹಸಿದವರು ಎಲ್ಲೇ ಇರಲಿ , ಯಾರೇ ಇರಲಿ, ಅವರಿಗೆಲ್ಲಾ ಅನ್ನವನ್ನು ನೀಡು.

ಹೊಟ್ಟೆಯ ಹಸಿವಿನ ಜೊತೆ ನಮೆಲ್ಲರ ಜ್ಞಾನದ ಹಸಿವು ನೀಗಲಿ.

Monday, December 6, 2010

Month Four

We have a detailed observer in the house these days !

Saanvi keeps looking at every little thing in the house. Her seeing sessions start during her baths, where she keeps looking at every soap, shampoo bottle & patterns on towels. We have to turn her head to bath her. If she is taken to kitchen, she looks at the colorful boxes & cookwares.

Probably her fingers are the tastiest thing she is finding. Loves to keep the fingers in the mouth and drools.

While enjoying licking the fingers, she is making an attempt to flip over. With little push, she gets on her tummy and lifts head to see around.

Looks like the zeal to speak is getting more & more intense. Saanvi tries to say something and the speech sessions goes non-stop. She bursts into loud laughs sometimes when we are speaking with her. More the people around her, she gets more vocal. Probably loves having audience and attention !

Saanvi grasps things like the bangles, chain & towel. Towel straight away makes it to her mouth!

We have been on road for some short trips and she is trying to look everything outside.

She looks like chewing all the time. Probably time for teething..



ನಮ್ಮ ಮನೆಯಲ್ಲಿದ್ದಾರೆ ಕುತೂಹಲಭರಿತ ವೀಕ್ಷಕರೊಬ್ಬರು !

ಮನೆಯಲ್ಲಿರುವ ಎಲ್ಲಾ ಚಿಕ್ಕ-ದೊಡ್ಡ ವಸ್ತುಗಳನ್ನು ನೋಡುತ್ತಿದ್ದಾಳೆ ಸಾನ್ವಿ. ಸ್ನಾನ ಮಾಡಿಸುವಾಗ ಶುರುವಾಗುತ್ತೆ ವೀಕ್ಷಣೆ. ಅಲ್ಲಿನ ಸಾಬೂನು, ಶ್ಯಾಂಪೂ ಶೀಶೆಗಳು ಮತ್ತು ಟವೆಲ್‍ಗಳನ್ನು ನೋಡುತ್ತಲೇ ಇರುತ್ತಾಳೆ. ಕೆಲವೊಮ್ಮೆ ತಲೆಯನ್ನು ನಮ್ಮಡೆಗೆ ತಿರುಗಿಸಿ ಸ್ನಾನ ಮಾಡಿಸಬೇಕಾಗುತ್ತದೆ. ಅಡುಗೆ ಕೋಣೆಯ ಕಡೆ ಹೋದರೆ,  ಅಲ್ಲಿನ ಡಬ್ಬಗಳು ಮತ್ತು ಆಡುಗೆ ಸಾಮಾಗ್ರಿಗಳು ಕಡೆ ಗಮನ.

ಸದ್ಯಕ್ಕೆ ಸಾನ್ವಿಗೆ ಅವಳ ಬೆರಳುಗಳು ಬಹುಷಃ ರುಚಿಯೆನಿಸುತ್ತಿವೆ. ಬಾಯಿಯಲ್ಲಿ ಬೆರಳು ಇಟ್ಟುಕೊಳ್ಳುವುದು ನಿತ್ಯದ ಕೆಲಸ.

ಬೆರಳು ನೆಕ್ಕುತ್ತಲೇ ಮಗುಚಿಕೊಳ್ಳುವ ಪ್ರಯತ್ನ ನಡೆಯುತ್ತದೆ. ಸ್ಪಲ್ಪ ಸಹಾಯದಿಂದ ಮುಗುಚಿಕೊಳ್ಳುತ್ತಾಳೆ. ಹೊಟ್ಟೆ ಕೆಳಗೆ ಮಾಡಿ ಮಲಗಿ ಕತ್ತು ಎತ್ತಿ ಸುತ್ತಮುತ್ತ ನೋಡುವ ಕೆಲಸ ಸುಸ್ತಾಗುವವರೆಗೆ ಸಾಗುತ್ತದೆ.

ಮಾತಾಡುವ ಹಂಬಲ ದಿನದಿನವೂ ಜಾಸ್ತಿಯಾಗುತ್ತಿದೆ. ಏನೋ ಹೇಳುವ ಪ್ರಯತ್ನದಲ್ಲಿದ್ದಂತೆ ತೋರುತ್ತಾಳೆ ಸಾನ್ವಿ. ಹಲವಾರು ನಿಮಿಷಗಳವರೆಗೆ ಈ ಸಂಭಾಷಣೆ ನಡೆಯುತ್ತಿರುತ್ತೆ. ನಡುವೆ ದೊಡ್ಡದಾಗಿ ನಗಲು ಶುರುಮಾಡುತ್ತಾಳೆ. ಸಾನ್ವಿ ಸುತ್ತ ಜಾಸ್ತಿ ಜನವಿದ್ದಷ್ಟು, ಮಾತಾಡಲು ಜಾಸ್ತಿ ಹುರುಪು. ಬಹುಷಃ ತನ್ನದೇ ಪ್ರೇಕ್ಷಕ ವರ್ಗದ ಗಮನ ಖುಷಿಕೊಡುತ್ತಿರಬಹುದು.

ಕೈ ಬಳೆಗಳು, ಕೊರಳ ಸರಗಳು ಮತ್ತು ಟವೆಲ್‍ಗಳು, ಸಾನ್ವಿ ಬೆರಳುಗಳ ಹಿಡಿತಕ್ಕೆ ಸಿಗುವ ವಸ್ತುಗಳು. ಟವೆಲ್ ನೇರವಾಗಿ ಕೆಲವೊಮ್ಮೆ ಬಾಯಿಗೆ ಹೋಗುತ್ತೆ.

ಹತ್ತಿರದ ಸ್ಥಳಗಳಿಗೆ ಸಾನ್ವಿಯನ್ನು ಕರೆದುಕೊಂಡು ಹೋಗಿದ್ದೆವು. ಹೊರಗಿನ ಪ್ರಪಂಚ ನೋಡುವ ಅಚ್ಚರಿಯಲ್ಲಿದ್ದಳು ಸಾನ್ವಿ.

ಯಾವಾಗಲೂ ಬಾಯಿಯಲ್ಲಿ ಏನೋ ಇರುವ ಹಾಗೇ ಜಗಿಯುತ್ತಿದ್ದಾಳೆ. ಬಹುಷಃ ಹಲ್ಲು ಮೂಡುವ ಸಮಯ ಹತ್ತಿರವಿರಬೇಕು...

Friday, November 19, 2010

ಪುಟ್ಟ ಬಟ್ಟೆ ಮತ್ತು ಗಾಳಿಪಟ ದಾರ

ಮೊನ್ನೆ ಅಮ್ಮನ ಜೊತೆ ಪೋನ್‍ನಲ್ಲಿ ಮಾತಾಡುವಾಗ ಬಹಳ ಸಂಭ್ರಮದಿಂದ ಕೇಳಿದಳು - ’ಮನೆ ಕ್ಲೀನ್ ಮಾಡುವಾಗ ಏನು ಸಿಗ್ತು ಹೇಳು ನೋಡೋಣಾ’ ?

ಸಾನ್ವಿ ಜೊತೆ ಆಡುತ್ತಿದ್ದ ನನಗೆ ಗೊತ್ತಾಗಲಿಲ್ಲ. ಅಮ್ಮನೇ ಮುಂದುವರೆಸಿ ಹೇಳಿದಳು ’ನೀನು ಚಿಕ್ಕವನಿದ್ದಾಗ ಆಸೆಯಿಂದ ಕೂಡಿಡುತ್ತಿದ್ದ ಬಣ್ಣ-ಬಣ್ಣದ ಅಂಗಿ ಗುಂಡಿಗಳ ಡಬ್ಬ ಸಿಗ್ತು! ಅದರ ಜೊತೆ ಗಾಳಿಪಟ ಹಾರಿಸುತ್ತಿದ್ದ ದಾರದುಂಡೆ !!’ .

ಚಿಕ್ಕವನಿದ್ದಾಗಿನ ನನ್ನ ಅಂಗಿ ಗುಂಡಿಗಳ(ಬಟನ್) ಬಗೆಗಿನ ಆಸಕ್ತಿ, ಅಪ್ಪನ ಜೊತೆ ಹಾರಿಸುತ್ತಿದ್ದ ಗಾಳಿಪಟಗಳು..ಹಾಗೇ ಅನೇಕ ದೃಶ್ಯಾವಳಿಗಳು ಕಣ್ಮುಂದೆ ಸಾಗಿ ಹೋದವು. ನಾನು ಆ ಡಬ್ಬ, ಅ ಬಣ್ಣದ ಗುಂಡಿಗಳನ್ನು ಬಹುತೇಕ ಮರತೇ ಬಿಟ್ಟಿದ್ದೆ. ಆದರೆ ಅಮ್ಮ ಅದನ್ನು ಇಷ್ಟು ವರ್ಷ ಜೋಪಾನವಾಗಿ ಎತ್ತಿಟ್ಟಿದ್ದು ಮತ್ತು ಆ ಡಬ್ಬ ಸಿಕ್ಕಾಗ ಸಂಭ್ರಮಿಸಿದ ರೀತಿ ನನಗೆ ವಿಸ್ಮಯವುಂಟು ಮಾಡಿತ್ತು.

ಅದರ ಬಗ್ಗೆ ಯೋಚಿಸುತ್ತಿರುವಾಗ, ಸಾನ್ವಿ ಅಮ್ಮ ಚೀಲವೊಂದರಲ್ಲಿ ಏನೋ ಜೋಡಿಸುತ್ತಿದ್ದಳು. ನೋಡಿದರೆ ಸಾನ್ವಿಯ ಪುಟ್ಟ ಬಟ್ಟೆಗಳು.

ಹುಟ್ಟಿದಾಗ ಸಾನ್ವಿಗೆ ತಂದಿದ್ದ ಬಟ್ಟೆಗಳಲ್ಲಿ ಹಲವು ಈಗ ಮೂರು ತಿಂಗಳ ನಂತರ ಆಗುತ್ತಿರಲಿಲ್ಲ. ನೋಡುನೋಡುತ್ತಾಲೇ ಸಾನ್ವಿ ಆ ಬಟ್ಟೆಗಳಾಚೆ ಬೆಳೆದು ಬಿಟ್ಟಿದ್ದಳು. ಆ ಚಿಕ್ಕದಾದ ಬಟ್ಟೆಗಳ ಉಸ್ತುವಾರಿಯನ್ನು ಸಾನ್ವಿಯ ಅಮ್ಮ ವಹಿಸಿಕೊಂಡು ಚೀಲದಲ್ಲಿ ತುಂಬುತ್ತಿದ್ದಳು.

ಈ ಚಿಕ್ಕದಾದ ಬಟ್ಟೆಗಳಲ್ಲಿ ಸಾನ್ವಿಯ ಬಾಲ್ಯದ ನೆನಪುಗಳನ್ನು ಹೆಕ್ಕಿ ಜೋಪಾನವಾಗಿ ಇಟ್ಟುಕೊಳ್ಳುವ ಪ್ರಯತ್ನದಲ್ಲಿದಂತೆ ಸಾನ್ವಿಯ ಅಮ್ಮ ಕಂಡಳು. ಆ ಬಟ್ಟೆಗಳನ್ನು ಸಾನ್ವಿ ಅಮ್ಮ ಜೋಪಾನಿಸುತ್ತಿದ್ದ ರೀತಿ ಮತ್ತು ಅದರ ಬಗೆಗಿನ ಪ್ರೀತಿ ನೋಡುತ್ತಿದ್ದೆ.

ಬಣ್ಣದ ಗುಂಡಿ-ಗಾಳಿಪಟದ ದಾರದುಂಡೆ ಕಂಡ ಅಮ್ಮನ ಸಂಭ್ರಮ ಈಗ ನನಗೆ ಅರ್ಥವಾಗತೊಡಗಿತ್ತು.

ಆ ಡಬ್ಬದಲ್ಲಿ , ಪುಟಾಣಿ ಬಟ್ಟೆಗಳಲ್ಲಿ, ಆ ಗಾಳಿಪಟ ದಾರದಲ್ಲಿ ಬಾಲ್ಯದ ಕೊಂಡಿಗಳು ಹೆಣೆದುಕೊಂಡದ್ದು ಗೋಚರವಾಗಿತ್ತು.

ಚಿಕ್ಕದಾದ ಬಟ್ಟೆಗಳನ್ನು ಜೋಡಿಸುವ ಸಾನ್ವಿ ಅಮ್ಮನ ಕಾರ್ಯ ಮುಂದುವರೆದಿತ್ತು.

ಇದ್ಯಾವುದರ ತಂಟೆಯಿಲ್ಲದೆ ಸಾನ್ವಿ ತನ್ನ ಪಾಡಿಗೆ ತಾನು ಆಡುತ್ತಿದ್ದಳು.

Wednesday, November 10, 2010

Month Three

Smiling wins !

Looks like that is what she is learning !!

Saanvi has learnt to smile whenever somebody speaks with her. Smiling starts since the time she wakes up and gets into peak mode when we get into talks with her. She gets into story telling mode and tries hard to explain something. Most of the times, she tries so hard that she ends up getting hicups.

Focus from milk seems to be deviated and she is more interested to view surroundings & outside. Even while drinking milk, she gets into the mood to tell tales. Sometimes starts throwing tantrums while drinking milk. In summary, feeding milk is becoming a new adventure for Saanvi's mom.

Sleeping looks to be totally shifted to night and she is enjoying a decent sleep in night. However it is difficult to make her sleep during day time.

She wants us to pick her up when she starts making sounds. After picking her up, she waits for sometime to see if we move. If we don't move, then again the unrest will start.

Best time is when she wakes up in the morning. She will be in a jovial mode talking to all the toys and pictures, making loud noises.

She celebrated her first Sarswati pooja, Dasara, Halloween and Deepavali. She had been to temple, toys r us and for trick/treat.

Feature of the month: Saanvi's mom trying to feed her and Saanvi doing little stunts as if she is not hungry or ready. So she is put down and immediately she keeps her hands in the mouth and start licking them as if she is hungry !

Overall it has been a fun month !



ನಗು ನಗುತಾ ನಲಿ..

ಮುಖದ ನೋಡಿದ ಕೂಡಲೇ ನಗುವುದನ್ನು ಸಾನ್ವಿ ಕಲಿತದ್ದು ಹೊಸದು. ಬೆಳಿಗ್ಗೆ ಎದ್ದಾಗಿನಿಂದ ಸಾನ್ವಿ ಮಂದಹಾಸ ಕಾರ್ಯಕ್ರಮ ಶುರುವಾಗುತ್ತೆ. ನಾವು ಹೋಗಿ ಸಾನ್ವಿ ಮುಂದೆ ನಿಂತರೆ, ನಗು ಹೆಚ್ಚಾಗುತ್ತೆ ಹಾಗೇ ಕಥಾ ಕಾಲಕ್ಷೇಪ ಆರಂಭವಾಗುತ್ತೆ. ಏನೋ ವಿಷಯವನ್ನು ವಿವರಿಸುವ ಯತ್ನದಲ್ಲಿರುವಂತೆ ತೋರುತ್ತದೆ. ಬಹುತೇಕ ಸಂದರ್ಭಗಳಲ್ಲಿ ಆ ಯತ್ನದಲ್ಲೇ ಬಿಕ್ಕಳಿಕೆ ಪ್ರಾರಂಭವಾಗುವುದುಂಟು.

ಹಾಲಿನ ಬಗ್ಗೆ ಮೊದಲಿಗಿಂತ ಆಸಕ್ತಿ ಕಡಿಮೆ ಆಗಿದೆ. ಯಾವಾಗಲೂ ಸುತ್ತಮುತ್ತ ಮತ್ತು ಹೊರಗೆ ನೋಡುವ ತವಕ. ಹಾಲು ಕುಡಿಯುವಾಗಲೂ ಸಾನ್ವಿಯಿಂದ ಕೆಲವೊಮ್ಮೆ ಯಾವುದೋ ಕತೆ ಹೇಳುವ ಪ್ರಯತ್ನ ನಡೆಯುತ್ತದೆ. ಇನ್ನು ಕೆಲವೊಮ್ಮೆ ಹಾಲು ಕುಡಿಯುವಾಗಲೇ ಸಾನ್ವಿಯ ಸಣ್ಣಪುಟ್ಟ ತರಲೆ ಹಟಗಳು ಶುರುವಾಗುತ್ತವೆ. ಒಟ್ಟಾರೆ, ಸಾನ್ವಿಯ ಅಮ್ಮನಿಗೆ ಹಾಲು ಕುಡಿಸುವುದು ಒಂದು ಹೊಸ ಸಾಹಸ !

ನಿದ್ದೆ ಈಗ ರಾತ್ರಿಗೆ ಸರಿದಿದೆ. ದಿನದ ಹೊತ್ತಿನಲ್ಲಿ ಮಲಗಿಸುವುದು ಕಷ್ಟ, ಆದರೆ ರಾತ್ರಿಯಲ್ಲಿ ಸಾನ್ವಿಯ ಒಳ್ಳೆ ನಿದ್ದೆಯಾಗುತ್ತಿದೆ.

ಸದ್ದು ಮಾಡುತ್ತಿದ್ದರೆ ನಾವು ಎತ್ತಿಕೊಳ್ಳಬೇಕೆಂಬಂತೆ ನೋಡುವುದು ನಡೆಯುತ್ತದೆ. ಎತ್ತಿಕೊಂಡ ನಂತರ ಅಲ್ಲಾಡದೆ ಒಂದೆಡೆ ನಿಂತಿದ್ದರೆ, ಮತ್ತೆ ಅದಕ್ಕೆ ಗಲಾಟೆ ಶುರುವಾಗುತ್ತದೆ.

ದಿನದ ಉತ್ತಮ ಸಮಯ ಸಾನ್ವಿ ಎದ್ದಾಗ. ಗೋಡೆಯ ಮೇಲಿನ ಪ್ರಾಣಿಗಳು , ಪಕ್ಕದಲ್ಲಿನ ಗೊಂಬೆಗಳೊಡನೆ ಎದ್ದ ಕೂಡಲೇ ಸಾನ್ವಿಯ ಸಂಭಾಷಣೆ ಶುರುವಾಗಿರುತ್ತದೆ.

ಈ ತಿಂಗಳಲ್ಲಿ ಸಾನ್ವಿಯ ಮೊದಲ ಸರಸ್ವತಿ ಪೂಜೆ, ದಸರಾ, ಹ್ಯಾಲೋವಿನ್, ದೀಪಾವಳಿ ಆಚರಣೆಗಳು ನಡೆದವು. ಹಾಗೇ ಸಾನ್ವಿಯ ಸವಾರಿ ದೇವಾಲಯ, ಟಾಯ್ಸ್ ರ್ ಅಸ್ ಮತ್ತು ಟ್ರಿಕ್-ಟ್ರೀಟ್‍ಗೆ ಹೋಗಿತ್ತು.

 ತಿಂಗಳ ವಿಶೇಷ: ಸಾನ್ವಿಯ ಅಮ್ಮ ಹಾಲು ಕುಡಿಸಲು ಹೋದರೆ, ಸಾನ್ವಿ ಹಸಿವು ಆಗೇ ಇಲ್ಲವೇನೋ ಎಂಬಂತೆ ಆಟಗಳನ್ನು ಆಡುವುದು. ಕೆಳಗಿಸಿದ ತಕ್ಷಣವೇ ತುಂಬಾ ಹಸಿವು ಎಂಬಂತೆ ತನ್ನ ಕೈಗಳನ್ನು ಬಾಯಿಯಲ್ಲಿ ಇಟ್ಟುಕೊಳ್ಳುವುದು !

ಒಟ್ಟಾರೆ ಈ ತಿಂಗಳು ಸುಂದರವಾಗಿತ್ತು !!

Wednesday, October 20, 2010

ಮಳೆ, ದೇವಾಲಯ ಮತ್ತು ಪುಸ್ತಕ

ಹೊರಗೆ ಜಿನುಗುತಿತ್ತು ಮಳೆ..

ಸಾನ್ವಿ ಬಂದ ನಂತರದ ಮೊದಲ ಮಳೆ..

ಕಿಟಕಿಯಿಂದ ಹೊರಗೆ ಬೀಳುತ್ತಿದ್ದ ಮಳೆ ಹನಿಗಳನ್ನು ಸಾನ್ವಿಗೆ ತೋರಿಸುತ್ತ ನಿಂತಿದ್ದೆವು.
ಎಷ್ಟು ಗೊತ್ತಾಯಿತೋ ಎನೋ..

ಈ ದಿನಗಳೇ ಹಾಗೇ, ಸಾನ್ವಿಗೆ ಎಲ್ಲದೂ ಹೊಸದು.

ಮೊನ್ನೆ ಮೊದಲ ಬಾರಿ ಸಾನ್ವಿಗೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದೆವು. ದೇವಸ್ಥಾನ ತಲುಪವಷ್ಟರಲ್ಲೇ ಸಾನ್ವಿ ನಿದ್ದೆ ಹೋಗಿದ್ದಳು. ಎಚ್ಚರವಾಗಿದ್ದು ದೇವಾಲಯದಲ್ಲಿ ನಡೆಯುತ್ತಿದ್ದ ಭರತನಾಟ್ಯದ ನಾದಕ್ಕೆ. ದೇವಾಲಯದ ಪ್ರಾಂಗಣದಲ್ಲಿ ನವರಾತ್ರಿ ವಿಶೇಷವಾಗಿ ಜರುಗುತ್ತಿದ್ದ ಭರತನಾಟ್ಯ. ಬಣ್ಣಬಣ್ಣದ ವಸ್ತ್ರಗಳು, ಗೆಜ್ಜೆಗಳು, ಒಡವೆಗಳಿಂದ ಕಂಗೋಳಿಸುತ್ತಿದ್ದ ನೃತ್ಯಗಾರ್ತಿಯರನ್ನು ನಮ್ಮ ಸಾನ್ವಿ ನೋಡುತ್ತಿದ್ದಂತೆ ಅನಿಸಿತು. ಮನೆಯಲ್ಲಿ ಚಿಕ್ಕ ಶಬ್ದಕ್ಕೆ ಎದ್ದೇಳುವ ಸಾನ್ವಿ, ದೇವಸ್ಥಾನದಲ್ಲಿನ ಘಂಟನಾದಕ್ಕಾಗಲಿ ಅಥವಾ ಭರತನಾಟ್ಯದ ತಾಳಕ್ಕಾಗಲಿ ಬೆಚ್ಚದೆ ಕುಳಿತಿದ್ದು ಅಚ್ಚರಿಯಾಗಿತ್ತು.

ಸರಸ್ವತಿ ಪೂಜೆ ದಿವಸ ಸಾನ್ವಿಗೆ ಮೊದಲ ಪುಸ್ತಕ ತಂದಿದ್ದೆವು. ಅದನ್ನು ಸಾನ್ವಿ ಓದುವ ದಿನಗಳಿನ್ನೂ ಬಹಳ ದೂರವಿದ್ದರೂ, ಹಾಗೇ ಸುಮ್ಮನೆ ತಂದು, ಪೂಜೆಗೆ ಇಟ್ಟಿದ್ದೆವು. ಪುಸ್ತಕವನ್ನು ಅದಕ್ಕೆ ಇಟ್ಟ ಹೂವನ್ನು ಸಾನ್ವಿ ಪಿಳಿಪಿಳಿ ನೋಡುತ್ತಿದ್ದಳು.
ನಾವು ಚಿಕ್ಕವರಿದ್ದಾಗ ಬಹಳ ಕಷ್ಟದ ಪಠ್ಯಪುಸ್ತಕವೊಂದನ್ನು ಸರಸ್ವತಿ ಪೂಜೆಗೆ ಇಡುತ್ತಿದ್ದದ್ದು ನೆನಪಾಯಿತು !

ನಂತರದ ಆಯುಧ ಪೂಜೆ ದಿವಸ ನಮ್ಮ ಕಾರ್‌ಗೆ ಮತ್ತು ಸಾನ್ವಿಯ ಸ್ಟ್ರಾಲರ್‌ಗೂ ಪೂಜೆ ನಡೆಯಿತು. ಪೂಜೆ ನಂತರ, ಸಾನ್ವಿ ನಮ್ಮ ಕಾರ್‌ನ ಡ್ರೈವರ್ ಸೀಟ್ ಮೇಲೆ ಅಮ್ಮನ ಜೊತೆ ಕುಳಿತು ಪರಿಶೀಲನೆ ಮಾಡಿದ್ದು ಮಜವಾಗಿತ್ತು.

ಮತ್ತೆ ಬಿಸಿಲು ಮರಳಿ ಬಂದ ಹಾಗಿದೆ..

ಬೆಳಕು ಇಣುಕುವ ಕಿಟಕಿಗಳ ಕಡೆ ಸಾನ್ವಿಯ ಆಸಕ್ತಿ ಸಹ ಹೆಚ್ಚಾದ ಹಾಗಿದೆ..

Wednesday, September 29, 2010

ಬೆಳದಿಂಗಳ ಮರಿ


ಬೆಳದಿಂಗಳ ಮರಿ
ನಕ್ಷತ್ರ ತೊಟ್ಟಿಲಲಿ
ಚಂದ್ರನ ತುಂಡು
ದಿಂಬಾಗಿಸಿ ಮಲಗಿತ್ತೋ

ಜೋಗುಳ ಪದ
ಹಕ್ಕಿಯ ಹಾಡಲ್ಲಿ
ಬೆಳದಿಂಗಳ್ಮರಿ ಕಂಡು
ಪಿಸುಮಾತಲಿ ಹಾಡಿತ್ತೋ

ಮುಂಜಾವು ರವಿ
ಮೂಡಲ ಮನೆಯಲಿ
ಮೋಡದ ಹಿಂದೆ
ಸರಿದು ಕಾದಿತ್ತೋ

ಮೂಡಲ ಮನೆಯಾಚೆ
ಇಣುಕುವುದು ಯಾವಾಗ
ರವಿ ಕೇಳಲು
ಹಕ್ಕಿ ಉಲಿಯಿತು
ಬೆಳದಿಂಗಳ್ಮರಿ ಎದ್ದಾಗ

Tuesday, September 14, 2010

ಮುತ್ತಜ್ಜಿ

ಸಾನ್ವಿಯ ಎಣ್ಣೆ ಮಾಲೀಶ್-ಸ್ನಾನದ ಪ್ರೀತಿ ಬಗ್ಗೆ ಹಿಂದೆ ಹೇಳಿದ್ದೆ. ಸಾನ್ವಿಗೆ ದಿನ ಹೀಗೆ ಎಣ್ಣೆ-ಸ್ನಾನ ಮಾಡಿಸೋರು ಅವರ ಮುತ್ತಜ್ಜಿ !

ಸಾನ್ವಿ ಅಮ್ಮನನ್ನು ಎತ್ತಿ ಬೆಳಿಸಿದ ಕೈಗಳು ಈಗ ಸಾನ್ವಿಯನ್ನು ಎತ್ತಿ ಆಡಿಸುತ್ತಿರುವುದು ಒಂದು ಭಾಗ್ಯವೇ..

ವೀಸಾ, ಮೊದಲ ಬಾರಿ ವಿಮಾನ ಪ್ರಯಾಣ, ಎರ್ ಪೋರ್ಟ್, ತಪಾಸಣೆ ಇತ್ಯಾದಿಗಳನ್ನು ಅರಿಗಿಸಿಕೊಂಡು, ಅವರು ಭಾರತದಿಂದ ಇಲ್ಲಿಗೆ ಪಯಣಿಸಿದ್ದೇ ಒಂದು ಕತೆ.

ನಾಲ್ಕು ವರ್ಷದ ಹಿಂದಿನ ಮಾತು, ಹುಡುಗಿ ನೋಡಲು ಸಾನ್ವಿ ಅಮ್ಮನ ಮನೆಗೆ ಹೋಗಿದ್ದೆ. ಉಭಯ ಕುಶಲೋಪರಿಯ ನಂತರ ಬಂದವರು ಇವರು. ಇವರನ್ನು ನೋಡಿದ ಮೇಲೆ, ಬಹುಷಃ ಇವರು ಹುಡುಗಿಯ ತಾಯಿ ಇಲ್ಲಾ ದೊಡ್ಡಮ್ಮ ಇರಬಹುದು ಎಂದು ನನ್ನ ಊಹೆಯಾಗಿತ್ತು. ಸ್ಪಲ್ಪ ಸಮಯದ ನಂತರ ನನಗೆ ತಿಳಿದದ್ದು ಅವರು ಹುಡುಗಿಯ ಅಜ್ಜಿ ! ನಂತರ ತುಂಬಾ ಸಲ ಸಾನ್ವಿ ಅಮ್ಮನ ಜೊತೆ ಮಾತಾಡುವಾಗ, ಅಜ್ಜಿ ಈ ವಯಸ್ಸಿನಲ್ಲೂ ಹಾಗೇ ಕಾಣುವ ರಹಸ್ಯದ ಬಗ್ಗೆ ಕಾಡಿಸಿದ್ದು ಇದೆ.

ಅಜ್ಜಿ ಯಂಗ್ ಅಷ್ಟೇ ಆಗಿರದೇ, ಮನೆ-ಸಂಸಾರವನ್ನು ಬೆಳಸಿದ ಪರಿ ನೆನಪಿಟ್ಟುಕೊಳ್ಳುವಂತದ್ದು. ಅಜ್ಜನ ಶಿಕ್ಷಕ ವೃತ್ತಿಯಿಂದ ಬರುವ ಆದಾಯದಲ್ಲಿ ಮನೆ ತೂಗಿಸಿಕೊಂಡು, ೫ ಜನ ಮಕ್ಕಳನ್ನು ಓದಿಸಿ, ಎಲ್ಲರೂ ಮಾಸ್ಟರ್ ಡಿಗ್ರಿ ತೆಗೆದುಕೊಂಡು(ಇಬ್ಬರೂ ಪುತ್ರರು ಪಿ.ಹೆಚ್.ಡಿ ಸಹ ಮಾಡಿ) ಜೀವನದಲ್ಲಿ ನೆಲೆ ಕಂಡುಕೊಳ್ಳುವುದು ಸಾಮಾನ್ಯ ಮಾತಲ್ಲ.

ಅಂತಹ ಅಜ್ಜಿ ನಮ್ಮಲ್ಲಿಗೆ ಬಂದಾಗ ನಮಗೆ ಸಂತೋಷವೇ ಆಗಿತ್ತು, ಜೊತೆಗೆ ಅಜ್ಜಿ ಇಲ್ಲಿನ ಜೀವನಕ್ಕೆ ಹೇಗೆ ಹೊಂದಿಕೊಳ್ಳುತ್ತಾರೆಂದು ಸ್ಪಲ್ಪ ಯೋಚನೆಯಿತ್ತು. ಆ ಎಲ್ಲಾ ಯೋಚನೆಗಳನ್ನು ಕೆಲವೇ ದಿನಗಳಲ್ಲಿ ಕೊಡವಿಕೊಳ್ಳುವಂತೆ ಮಾಡಿಬಿಟ್ಟರು ಅಜ್ಜಿ. ಅವರ ವಿಶೇಷ ಇರುವುದೇ ಹೊಂದಿಕೊಳ್ಳುವ ಸ್ವಭಾವದಲ್ಲಿ..

ಸಾನ್ವಿ ಅಮ್ಮನ ಹೂ ಮುಡಿಸುವ ಕಾರ್ಯಕ್ರಮ ನಡೆಸಿದಾಗ, ಒಂದೂ ಬಿಡದೆ ಆಚಾರ-ಪದ್ಧತಿಗಳನ್ನು ಮಾಡಿ, ಬಂದವರಿಗೆ ಹೋಳಿಗೆ ಊಟ ಹಾಕಿ, ಎಲ್ಲಾ ಸುಸಾಂಗತ್ಯವಾಗಿ ನಡೆಸಿಕೊಟ್ಟಿದ್ದರು.

ನಂತರ ಸಾನ್ವಿ ಅಮ್ಮ ಅಸೆ ಪಡುವ ಅಕ್ಕಿ ರೊಟ್ಟಿ, ರಾಗಿ ಕಿಲ್ಸಾ, ರವೆ ಪಾಯಸಗಳು ನಮ್ಮ ಅಡುಗೆ ಮನೆಯಲ್ಲಿ ದಿನವು ಸುವಾಸನೆ ಬೀರತೊಡಗಿದ್ದವು.

ಇಲ್ಲಿಗೆ ಬಂದ ಮೇಲೆ ಅಜ್ಜಿ ಅಕ್ಕಪಕ್ಕದಲ್ಲಿ ಸ್ನೇಹಿತರನ್ನು ಮಾಡಿಕೊಂಡದ್ದು ಇದೆ. ಪಕ್ಕದ ಮನೆಯ ಅಮೇರಿಕನ್ ಸಿಕ್ಕಿದಾಗ ಇವರಿಗೆ ಇಂಗ್ಲೀಷ್‍ನಲ್ಲಿ ಎನೋ ಹೇಳಿದಂತೆ, ಇವರು ಅವನಿಗೆ ’ನಾವು ಕನ್ನಡದವರು’ ಅಂದರಂತೆ. ಅವನಿಗೆ ಅದು ಕೆನಡಾ ಅಂದು ಕೇಳಿಸಿ, ’I have been to Canada’ ಅಂದನಂತೆ. ಅವನ ಕಣ್ಣಿನಲ್ಲಿ ಅಜ್ಜಿ ಕೆನಡಾದಿಂದ ಬಂದಿದೆ !

ಹಾಗೇ ಮೇಲಿನ ಮನೆಯ ಇನ್ನೊಂದು ಭಾರತೀಯ ಕುಟುಂಬವೊಂದು ಅವರ ಮನೆಯಲ್ಲಿ ತುಂಬಾ ಅಳುತ್ತಿದ್ದ ಮಗುವಿಗೆ ಎನು ಮಾಡಬೇಕೆಂದು ಅಜ್ಜಿಗೆ ಕೇಳಿದರು. ಅಜ್ಜಿ ಅವರ ಮನೆಗೆ ಹೋಗಿ ಮಗುವನ್ನು ಸಮಾಧಾನ ಮಾಡಿಕೊಟ್ಟು ಬಂದಿದ್ದಾರೆ.

ಇನ್ನು ನಮ್ಮ ಅಪಾರ್ಟ್‍ಮೆಂಟ್ ರಿಪೇರಿ ಕೆಲಸ ನೋಡಿಕೊಳ್ಳುವ ರಾಬರ್ಟೋ ಎನ್ನುವ ಮೆಕ್ಸಿಕನ್, ನಮ್ಮ ಮನೆಗೆ ಯಾವುದೋ ರಿಪೇರಿಗೆಂದು ಬಂದಿದ್ದ. ಆಗ ಅಜ್ಜಿ ಅವನಿಗೆ ಕಣ್ಣನ್‍ದೇವನ್ ಟೀ ಮಾಡಿಕೊಟ್ಟಿದ್ದರು. ಬಹುಷಃ ಮೊದಲ ಸಲ ಈ ರೀತಿ ಉಪಚಾರ ಕಂಡು ರಾಬರ್ಟೋ ತುಂಬಾ ಖುಶ್. ಅದು ಕೆಟ್ಟಿದೆ-ಇದು ಕೆಲಸ ಮಾಡ್ತಿಲ್ಲ-ಯಾವಾಗ ರಿಪೇರಿ-ಇನ್ನೂ ಎಷ್ಟೊತ್ತು ಅನ್ನುವ ಜನರ ಮಧ್ಯೆ ಅಜ್ಜಿ ಅವನಿಗೆ ವಿಭಿನ್ನವಾಗಿ ಕಂಡಿರಬಹುದು.

ಆಸ್ಪತ್ರೆಯಲ್ಲಿ ಸಾನ್ವಿ ಜನಿಸಿದಾಗ ವೈದ್ಯರು-ನರ್ಸ್‍  ಇವರು ಸಾನ್ವಿಯ ಮುತ್ತಜ್ಜಿ ಎಂದು ತಿಳಿದಿದ್ದೆ ಪರಮಾಶ್ಚರ್ಯಗೊಂಡಿದ್ದರು. ’She looks so young to be great-grand mother' ಎನ್ನುವುದು ಸಾಮಾನ್ಯ ಉದ್ಗಾರವಾಗಿಬಿಟ್ಟಿತ್ತು!

ಸಾನ್ವಿ ಜನಿಸಿದ ಮೇಲೆ ಹೆಚ್ಚಿಗೆ ಆದ ಮುತ್ತಜ್ಜಿಯ ಕೆಲಸ- ದೃಷ್ಟಿ ತೆಗೆಯುವುದು! ದೃಷ್ಟಿ ತೆಗೆಯುವಾಗಲೂ ಇಷ್ಟೊಂದು ರೀತಿಗಳಿವೆ ಎಂಬುದನ್ನು ಇವರು ಮಾಡುವುದನ್ನು ನೋಡಿದ ಮೇಲೆ ಗೊತ್ತಾಗಿದ್ದು.

ಸಾನ್ವಿಯ ಸ್ನಾನ ಮಾಡಿಸುವಾಗ ಅತ್ಯಂತ ಜಾಗರೂಕತೆಯಿಂದ-ಅಷ್ಟೇ ಪ್ರೀತಿಯಿಂದ ನೀರೆರವುದು ನೋಡುವುದು ಸೊಗಸು. ಸಾನ್ವಿ ಪ್ರತಿ ನಡೆಯನ್ನು ಗಮನಿಸುತ್ತಾ ಕೆಲವೊಮ್ಮೆ ಯಾಕೇ ಅಳುತ್ತಿರುವುದೋ- ಎನು ತೊಂದರೆಯೋ ಎನ್ನುವ ಆತಂಕ ಎದುರಾದಾಗ, ತಮ್ಮ ಅನುಭವದ ನುಡಿಗಳನ್ನು ಹೇಳಿದ್ದು ಅಜ್ಜಿ.

ಮೊನ್ನೆ ಗಣೇಶ ಚೌತಿಯಂದು ಅದೆಲ್ಲಿಂದಲೋ ಒಂದು ಗರಿಕೆಯನ್ನು ತೆಗೆದುಕೊಂಡು ಬಂದು ಬೆನಕನನ್ನು ಮಾಡಿದ್ದರು.ಸಾನ್ವಿ ಮತ್ತು ಮುತ್ತಜ್ಜಿ ಕಮಲಮ್ಮ, ಗೌರಿ-ಗಣಪನ ಮುಂದೆ ಹಾಡಿದ ವಿಡಿಯೋ ಇಲ್ಲಿದೆ. ಹಾಡಿನ ಮಧ್ಯದಲ್ಲಿ ಸಾನ್ವಿ ಅಳುವ ರಾಗದ ಆಲಾಪವೂ ಇದೆ !

ಅಜ್ಜ-ಅಜ್ಜಿಯ ಕೈಯಲ್ಲಿ ಆಡುವುದು ಎಷ್ಟು ಚೆನ್ನಾ..ಅದರಲ್ಲೂ ಮುತ್ತಜ್ಜಿ..
ಸಾನ್ವಿಗೆ ಆ ಅವಕಾಶ ಸಿಕ್ಕಿರುವುದು ವಿಶೇಷವೇ !