Showing posts with label Valentine Day. Show all posts
Showing posts with label Valentine Day. Show all posts

Monday, February 14, 2011

ವೀಣೆ, ರಾಗ ಮತ್ತು ಪ್ರೀತಿ

ಒಲವಿನ ವೀಣೆ ಮೀಟಿ                                           
ನಲಿವಿನ ನಾದ ಹೊಮ್ಮಿ           
ಜನಿಸಿದ ಸುಶ್ರಾವ್ಯ ರಾಗ 

ರಾಗ ಹುಟ್ಟಿದ ಸಮಯ
ವೀಣೆ ಪಟ್ಟ ಪರಿಶ್ರಮ
ನೆನಪಿನ ಸಂಗ್ರಹದಿ ಗುನುಗು

ರಾಗಕ್ಕೆ ನಗು ಹಿಮ್ಮೇಳ
ಆಗಾಗ ಕೇಕೆಯ ತಾಳ
ಈಗ ರಾಗವಾಗುತ್ತಿದೆ ಹಾಡು

ಹಾಡಿನ ಪಲ್ಲವಿ ಸುಂದರ
ಬೆಳಯಲಿ ಉಲ್ಲಾಸದ ಸ್ವರ
ಅಗಲಿ ವೀಣೆಗೆ ಸಡಗರ 

******************************************
ನಮ್ಮ ಪ್ರೀತಿಯ ವ್ಯಾಕರಣದಲಿ ಹೊಸ ಭಾಷ್ಯ ನೀಡಿದ ಜೀವನ ರಾಗ ಸಾನ್ವಿಗೆ  ಮತ್ತು ಸಾನ್ವಿ ಅಮ್ಮನಿಗೆ , ವ್ಯಾಲೆಂಟೇನ್ ದಿನದ ನೆಪದಲ್ಲಿ ಈ ಕವನ ಅರ್ಪಣೆ !

ಪ್ರೀತಿ ಎಲ್ಲರ ಮನದಲಿ ನಲಿಯಲಿ !