ಬಣ್ಣದ ಗೊಂಬೆಗಳ ಅಂಗಿವುಟ್ಟು
ಕೂದಲು ಹಣೆ ಮೇಲೆ ಬಿಟ್ಟು
ಬೆಚ್ಚನೆ ಟೋಪಿ ತೊಟ್ಟು
ಹೊರಟಿದೆ ನನ್ನ ಸವಾರಿ
ಕಿಟಕಿ ಹೊರಗಿನ ಬೆಳಕು
ಓಡುವ ವಾಹನದ ಸದ್ದು
ಬಾಯಿಗೆ ಸಿಗುವ ಕೈಬೆರಳು
ಮಜವಾಗಿ ಸಾಗಿದೆ ದಾರಿ
ಯಾವ ಯಾವುದೋ ಅಂಗಡಿ
ಎಷ್ಟೊಂದು ಅಲ್ಲಿ ಜನ
ಎಲ್ಲೆಲ್ಲೂ ಬಣ್ಣ ಬೆರಗು
ಇನ್ನೂ ಎಷ್ಟೊಂದಿದೆ ನೋಡೋದು
ಆದರೆ ನೋಡಿದ್ದು ಸಾಕಾಯ್ತು
ಹೊಟ್ಟೆಯು ಹಸಿವಾಯ್ತು
ಮನೆಗೆ ಹೋಗೋಣವೆನಿಸ್ತು
ಇನ್ನೂ ಎಷ್ಟೊತ್ತು ಇಲ್ಲಿರೋದು
ಮನೆಗೆ ಬಂದಾಯ್ತು
ಹಾಲು ಕುಡಿದಾಯ್ತು
ಟೆಡ್ಡಿ ಹೊದಿಕೆ ಅಮ್ಮ ಹೊದಿಸಿಯಾಯ್ತು
ಈಗ ಸಮಯ ಮಲಗೋದು
ಮುದ್ದು ಸಾನ್ವಿ ಮನೆಯಿಂದ ಹೊರಗೆ ಸವಾರಿ ಹೋಗಿ ,ಹೊರಗಿನ ಪ್ರಪಂಚ ನೋಡಿ ಬೆರಗಾಗಿ,ಧಣಿದು ಮನೆಗೆಬಂದು ಹೊಟ್ಟೆ ತುಂಬಿಸಿಕೊಂಡು ನಿದ್ದೆಗೆ ಜಾರಿದ ಪರಿ ಕವಿತೆಯಾಗಿ ಬಂದಿದೆ,ಮುದ್ದು ಮಕ್ಕಳೇ ಹಾಗೆ ,ಹೀಗೆ ಬೆಳೆಯುವಾಗ ತಂದೆ ತಾಯಿಗಳಿಗೆ ವಿಸ್ಮಯ ತೋರಿಸುತ್ತಾ ಮುದ ನೀಡುತ್ತವೆ.ಮುದ್ದು ಸಾಂವಿಗೆ ಹಾಗು ನಿಮಗೆ ಶುಭಾಶಯಗಳು.
ReplyDelete--
ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]
makkala kavana chennaagide..
ReplyDeleteadarallu saanvi daniyalli haaDikonDare innu muddaagide..
take care saanvi...
ಮುದ್ದು ಸಾನ್ವಿಯ ಸವಾರಿ ಸೊಗಸಾಗಿತ್ತು.ಕವಿತೆ ತುಂಬಾ ಚೆನ್ನಾಗಿದೆ.ನಿಮಗೂ ,ಸಾನ್ವಿ ಪುಟ್ಟಿಗೂ ಶುಭಾಶಯಗಳು.
ReplyDeleteಸೊಗಸಾಗಿದೆ ಸಾನ್ವಿಯ ಸವಾರಿ ಕವನ:)
ReplyDeleteha.ha.. very nice..!
ReplyDeletemaguvina dinachariyanna tumba chennaagi kavanadalli serehidididdira.nimagu nimma parivaarakku sankrantiya shubhaashayagalu.
ReplyDeletenice one sir....
ReplyDeleteಬಾಲು ಅವರೇ,
ReplyDeleteನಿಮ್ಮ ಮಾತುಗಳಿಗೆ ಸಹಮತವಿದೆ.
ಧನ್ಯವಾದಗಳು.
ದಿನಕರ್,
ReplyDeleteಸಾನ್ವಿ ಧ್ವನಿಯಲ್ಲಿ ನೀವು ಹಾಡಿಕೊಂಡಿದ್ದು ಮಜವಾಗಿತ್ತು :)
ಕೃಷ್ಣಮೂರ್ತಿ ಸರ್,
ReplyDeleteನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ರೂಪ,
ReplyDeleteವಂದನೆಗಳು :)
ಮನಮುಕ್ತಾ,
ReplyDeleteನಿಮಗೆ ಖುಷಿಯಾಯ್ತು ಅನಿಸುತ್ತೆ :)
ಕಲಾವತಿಯವರೇ,
ReplyDeleteನಿಮ್ಮ ಸದಾಭಿಪ್ರಾಯಕ್ಕೆ ಧನ್ಯವಾದಗಳು.
ತರುಣ್,
ReplyDeleteಧನ್ಯವಾದಗಳು !
ಸಾನ್ವಿಯ ಸವಾರಿ ತುಂಬಾ ಮಜವಾಗಿತ್ತು :)-
ReplyDeleteಮಹಾಂತೇಶ್,
ReplyDeleteಧನ್ಯವಾದಗಳು ಸವಾರಿಗೆ ಬಂದಿದ್ದಕ್ಕೆ :)