Sunday, January 16, 2011

ಸವಾರಿ















ಬಣ್ಣದ ಗೊಂಬೆಗಳ ಅಂಗಿವುಟ್ಟು
ಕೂದಲು ಹಣೆ ಮೇಲೆ ಬಿಟ್ಟು
ಬೆಚ್ಚನೆ ಟೋಪಿ ತೊಟ್ಟು
ಹೊರಟಿದೆ ನನ್ನ ಸವಾರಿ

ಕಿಟಕಿ ಹೊರಗಿನ ಬೆಳಕು
ಓಡುವ ವಾಹನದ ಸದ್ದು
ಬಾಯಿಗೆ ಸಿಗುವ ಕೈಬೆರಳು
ಮಜವಾಗಿ ಸಾಗಿದೆ ದಾರಿ

ಯಾವ ಯಾವುದೋ ಅಂಗಡಿ
ಎಷ್ಟೊಂದು ಅಲ್ಲಿ ಜನ
ಎಲ್ಲೆಲ್ಲೂ ಬಣ್ಣ ಬೆರಗು
ಇನ್ನೂ ಎಷ್ಟೊಂದಿದೆ ನೋಡೋದು

ಆದರೆ ನೋಡಿದ್ದು ಸಾಕಾಯ್ತು
ಹೊಟ್ಟೆಯು ಹಸಿವಾಯ್ತು
ಮನೆಗೆ ಹೋಗೋಣವೆನಿಸ್ತು
ಇನ್ನೂ ಎಷ್ಟೊತ್ತು ಇಲ್ಲಿರೋದು

ಮನೆಗೆ ಬಂದಾಯ್ತು
ಹಾಲು ಕುಡಿದಾಯ್ತು
ಟೆಡ್ಡಿ ಹೊದಿಕೆ ಅಮ್ಮ ಹೊದಿಸಿಯಾಯ್ತು
ಈಗ ಸಮಯ ಮಲಗೋದು

16 comments:

  1. ಮುದ್ದು ಸಾನ್ವಿ ಮನೆಯಿಂದ ಹೊರಗೆ ಸವಾರಿ ಹೋಗಿ ,ಹೊರಗಿನ ಪ್ರಪಂಚ ನೋಡಿ ಬೆರಗಾಗಿ,ಧಣಿದು ಮನೆಗೆಬಂದು ಹೊಟ್ಟೆ ತುಂಬಿಸಿಕೊಂಡು ನಿದ್ದೆಗೆ ಜಾರಿದ ಪರಿ ಕವಿತೆಯಾಗಿ ಬಂದಿದೆ,ಮುದ್ದು ಮಕ್ಕಳೇ ಹಾಗೆ ,ಹೀಗೆ ಬೆಳೆಯುವಾಗ ತಂದೆ ತಾಯಿಗಳಿಗೆ ವಿಸ್ಮಯ ತೋರಿಸುತ್ತಾ ಮುದ ನೀಡುತ್ತವೆ.ಮುದ್ದು ಸಾಂವಿಗೆ ಹಾಗು ನಿಮಗೆ ಶುಭಾಶಯಗಳು.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  2. makkala kavana chennaagide..
    adarallu saanvi daniyalli haaDikonDare innu muddaagide..

    take care saanvi...

    ReplyDelete
  3. ಮುದ್ದು ಸಾನ್ವಿಯ ಸವಾರಿ ಸೊಗಸಾಗಿತ್ತು.ಕವಿತೆ ತುಂಬಾ ಚೆನ್ನಾಗಿದೆ.ನಿಮಗೂ ,ಸಾನ್ವಿ ಪುಟ್ಟಿಗೂ ಶುಭಾಶಯಗಳು.

    ReplyDelete
  4. ಸೊಗಸಾಗಿದೆ ಸಾನ್ವಿಯ ಸವಾರಿ ಕವನ:)

    ReplyDelete
  5. maguvina dinachariyanna tumba chennaagi kavanadalli serehidididdira.nimagu nimma parivaarakku sankrantiya shubhaashayagalu.

    ReplyDelete
  6. ಬಾಲು ಅವರೇ,
    ನಿಮ್ಮ ಮಾತುಗಳಿಗೆ ಸಹಮತವಿದೆ.
    ಧನ್ಯವಾದಗಳು.

    ReplyDelete
  7. ದಿನಕರ್,
    ಸಾನ್ವಿ ಧ್ವನಿಯಲ್ಲಿ ನೀವು ಹಾಡಿಕೊಂಡಿದ್ದು ಮಜವಾಗಿತ್ತು :)

    ReplyDelete
  8. ಕೃಷ್ಣಮೂರ್ತಿ ಸರ್,
    ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

    ReplyDelete
  9. ಮನಮುಕ್ತಾ,
    ನಿಮಗೆ ಖುಷಿಯಾಯ್ತು ಅನಿಸುತ್ತೆ :)

    ReplyDelete
  10. ಕಲಾವತಿಯವರೇ,
    ನಿಮ್ಮ ಸದಾಭಿಪ್ರಾಯಕ್ಕೆ ಧನ್ಯವಾದಗಳು.

    ReplyDelete
  11. ಸಾನ್ವಿಯ ಸವಾರಿ ತುಂಬಾ ಮಜವಾಗಿತ್ತು :)-

    ReplyDelete
  12. ಮಹಾಂತೇಶ್,
    ಧನ್ಯವಾದಗಳು ಸವಾರಿಗೆ ಬಂದಿದ್ದಕ್ಕೆ :)

    ReplyDelete