Tuesday, December 14, 2010

ಅನ್ನಪೂರ್ಣೇ ಸದಾಪೂರ್ಣೇ..

ಈ ಸಲ ಚುಚ್ಚುಮದ್ದುಗಳ ನಂತರ ಸಾನ್ವಿ ಅಷ್ಟೇನೂ ಅಳಲಿಲ್ಲ.

ನಾಲ್ಕನೇಯ ತಿಂಗಳ ಚುಚ್ಚುಮದ್ದುಗಳನ್ನು ಸಾನ್ವಿಗೆ ನೀಡಿದ ನಂತರ ವೈದ್ಯರು, ಸಾನ್ವಿಗೆ ನಿಧಾನವಾಗಿ ಘನ ಆಹಾರವನ್ನು ಕೊಡಬಹುದೆಂದು ಸೂಚಿಸಿದ್ದರು.

ವೈದ್ಯರ ಸಲಹೆ ಮೇರೆಗೆ ಸಾನ್ವಿಗೆ ಅಕ್ಕಿ ಸಿರಿಯಲ್‍ನಿಂದ ಘನ ಆಹಾರ ಕೊಡಲು ಶುರುಮಾಡಲು ಸನ್ನದ್ಧರಾದೆವು. ಹುಟ್ಟಿದ ಗಳಿಗೆಯಿಂದ ಕೇವಲ ಎದೆಹಾಲು ಕುಡಿಯುತ್ತಿದ್ದ ಸಾನ್ವಿಗೆ ಬೇರೆ ಆಹಾರ ಕೊಡಬಹುದೆನ್ನುವ ವಿಷಯ ನಮಗೆ ವಿಶೇಷವೆನಿಸಿತ್ತು.

ಇಂತಹ ಸುಸಂದರ್ಭವನ್ನು ವಿಶೇಷವಾದ ಜಾಗವೊಂದರಲ್ಲಿ ಶುರುಮಾಡಬೇಕೆಂಬುದು ಸಾನ್ವಿ ಅಮ್ಮನ ಅಭಿಪ್ರಾಯ. ಪರಮಶಕ್ತಿಯಾದ ಭಗವಂತನ ಆಲಯಕ್ಕಿಂತ ವಿಶೇಷ ಜಾಗ ಬೇರೇನೂ ತೊರಲಿಲ್ಲ.

ಲಿವರ್‌ಮೋರ್‌ನ ಶಿವವಿಷ್ಣು ದೇವಾಲಯದಲ್ಲಿ, ಸಾನ್ವಿಯ ಅಮ್ಮ ಪುಟಾಣಿ ಚಮಚದಿಂದ ಸಿರಿಯಲ್‍ನ್ನು ದಿವ್ಯಸಾನ್ಯಿಧ್ಯದಲ್ಲಿ, ಸಾನ್ವಿಗೆ ತಿನಿಸಿದಳು. ಮೊದಲ ಸಲ ಹಾಲಿಗಿಂತ ಭಿನ್ನವಾದ ರುಚಿಯ ಸಿರಿಯಲ್ ತಿಂದ ಸಾನ್ವಿ ಅದೇನೆಂದು ತಿಳಿಯದೇ ಮುಖ ನೋಡುತ್ತಿದ್ದಳು. ನಂತರ ಚಮಚೆಯಲ್ಲಿ ನೀರಿನ ಸ್ವಾದನೆ ನಡೆಯಿತು.

ಸಧ್ಯಕ್ಕೆ ದಿನಕ್ಕೆ ಒಂದು ಸಲ ಸಿರಿಯಲ್ ಅಸ್ವಾದನೆ ನಡೆಯುತ್ತಿದೆ. ಸಿರಿಯಲ್‍ನ್ನು ಹಾಲಿನಲ್ಲಿ ತೆಳುವಾಗಿ ಕಲೆಸಿ, ಸಾನ್ವಿ ಬಾಯಿಯಲ್ಲಿ ಚಮಚದಲ್ಲಿ ಇಡುತ್ತಿದಂತೆ ಸಾನ್ವಿ ಬಾಯಿ ತೆರೆಯುವುದು ನೋಡುವುದು ಚೆಂದ. ಮೈಮೇಲೆ ಬೀಳಬಾರದಂತೆ ಸಾನ್ವಿಯ ಕುತ್ತಿಗೆಯ ಸುತ್ತ ವಸ್ತ್ರ ಕಟ್ಟಿದ್ದರೂ, ಆ ವಸ್ತ್ರವನ್ನೇ ತನ್ನ ಬಾಯಿಗೆ ಹಾಕಿಕೊಳ್ಳವ ಸನ್ನಹ ಸಾನ್ವಿಯದು. ಕೊನೆಗೆ ಬಾಯಿ ಸುತ್ತಲೂ ಬಿಳಿಯ ಪದರ. ಅದನ್ನು ಒರೆಸಿ, ನೀರು ಕುಡಿಸಿದರೆ ಸಾನ್ವಿಯ ಸಿರಿಲ್ ಕೊನೆಗೊಳ್ಳುತ್ತದೆ.

ಸಾನ್ವಿಗೆ ಅನ್ನಪ್ರಾಶನ ಮಾಡಿಸುವಾಗ ಅದಿ ಶಂಕರಾಚಾರ್ಯರು ರಚಿಸಿದ ಅನ್ನಪೂರ್ಣ ಸ್ತೋತ್ರದ ಕೆಲವು ಸಾಲುಗಳು ನೆನಪಾದವು

ಅನ್ನಪೂರ್ಣೇ ಸದಾಪೂರ್ಣೇ
ಶಂಕರಪ್ರಾಣವಲ್ಲಭೆ |
ಜ್ಞಾನವೈರಾಗ್ಯಾಸಿದ್ಯಾರ್ಥಂ
ಭಿಕ್ಷಾಂ ದೇಹಿ ಚ ಪಾರ್ವತಿ||

ಅದರ ಅನುವಾದ - ಓ ಅನ್ನಪೂರ್ಣೇ, ಯಾವಾಗಲೂ ತುಂಬಿರುವವಳೇ, ಶಿವನ ಸತಿಯೇ, ಜ್ಞಾನ ಮತ್ತು ವೈರಾಗ್ಯ ಪಡೆಯುವಂತೆ ಭಿಕ್ಷೆಯನ್ನು ನೀಡು ಪಾರ್ವತಿಯೇ.

ಸಾನ್ವಿಗೆ ಅನ್ನ ಉಣಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮ ವಿನಮ್ರ ಪ್ರಾರ್ಥನೆ - ಪ್ರಪಂಚದಲ್ಲಿ ಹಸಿದವರು ಎಲ್ಲೇ ಇರಲಿ , ಯಾರೇ ಇರಲಿ, ಅವರಿಗೆಲ್ಲಾ ಅನ್ನವನ್ನು ನೀಡು.

ಹೊಟ್ಟೆಯ ಹಸಿವಿನ ಜೊತೆ ನಮೆಲ್ಲರ ಜ್ಞಾನದ ಹಸಿವು ನೀಗಲಿ.

22 comments:

  1. ಸುಂದರ ಲೇಖನ.ಸಾನ್ವಿಯ ಬಟ್ಟಲು ಕಂಗಳ ಮುದ್ದು ಫೋಟೋ ತುಂಬಾ ಇಷ್ಟವಾಯಿತು.ನನ್ನ ಬ್ಲಾಗಿಗೆ ಬನ್ನಿ.ನಮಸ್ಕಾರ.

    ReplyDelete
  2. ಸಾನ್ವಿ...
    ನಿನ್ನ ನೋಡಿ ಸಕತ್ ಖುಷಿಯಾಯ್ತು ಕೂಸೆ.. ಅಮ್ಮ ಕೊಡ್ತಾಯಿರೋ ಹೊಸ ಊಟ ಇಷ್ಟ ಆಯ್ತಾ? ಜಾಣೆ ತರಹ ಎಲ್ಲಾ ತಿನ್ನು, ಭೇಷ್ ಅನಿಸಿಕೋ :)

    ReplyDelete
  3. kaNNalle sundara kanassannu tumbiruvaakeya jnaada hasivu, hoTTaya hasivu nigali....

    god bless her...

    ReplyDelete
  4. ತುಂಬಾ ದಿನಗಳ ನಂತರ ಬ್ಲಾಗ್ ಮನೆಯಂಗಳಕ್ಕೆ ಬಂದು ನಿಮ್ಮ ಲೇಖನಗಳನ್ನು ಓದುತ್ತಿದ್ದೇನೆ.
    ಮಗುವಿನ ಹಂತ ಹಂತದ ಬೆಳವಣಿಗೆಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದೀರಾ.
    ಸಾನ್ವಿಯ ಮುದ್ದು ಮೊಗ ಎಲ್ಲಾ ನೋವುಗಳನ್ನು ಮರೆಸುತ್ತದೆ.

    ಧನ್ಯವಾದಗಳು....

    ReplyDelete
  5. ಕೃಷ್ಣಮೂರ್ತಿ ಸರ್,

    ಸದಾ ಪ್ರೋತ್ಸಾಹದ ಮಾತುಗಳಿಂದ ಉತ್ಸಾಹ ತುಂಬುವ ನಿಮಗೆ ವಂದನೆಗಳು.

    ReplyDelete
  6. ರೂಪ ಅವರೇ,
    ಸಾನ್ವಿ ಒಳ್ಳೆ ಹುಡುಗಿ ತರ ಹೊಸ ಊಟ ನುಂಗ್ತಾ ಇದಾಳೆ :)

    ReplyDelete
  7. ದಿನಕರ್,
    ನಿಮ್ಮ ಪ್ರೀತಿಯ ಹಾರೈಕೆ ಸದಾ ಇರಲಿ

    ReplyDelete
  8. ಪ್ರವೀಣ್,
    ಬಹಳ ದಿನದ ನಂತರ ಬಂದಿದೀರಿ..ಎಲ್ಲಾ ಕ್ಷೇಮ ತಾನೇ?
    ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  9. ಸುಂದರ ಲೇಖನ. ಮಗಳ ಜೊತೆಗಿನ ಅನುಭವಗಳನ್ನು ಹಂಚಿಗೊಂಡಿದ್ದು ಚೆನ್ನಾಗಿದೆ :-)

    ReplyDelete
  10. ಹೋ ಹೋ ಮುದ್ದು ಕಂದ ಸಾನ್ವಿ ಗೆ ಅಣ್ಣ ಪ್ರಾಶಾನ ಆಯ್ತು.ಮುದ್ದಾದ ಕಂದನ ಫೋಟೋ .ಮಗುವಿನ ಬೆಳವಣಿಗೆಯ ಪ್ರತಿ ಹಂತವನ್ನು ಪರಿಚಯಿಸುತ್ತಿದ್ದೀರ ತುಂಬಾ ಖುಷಿಯಾದ ವಿಚಾರ. ಮಗುವಿನ ಜೊತೆ ನಾವು ಬೆಳೆಯುತ್ತಿರುವಂತೆ ಭಾಸವಾಗುತ್ತಿದೆ.ಮುದ್ದು ಕಂದನಿಗೆ ಶುಭಾಶಯಗಳು,

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  11. lekana sunadravide..

    saanviya vicharavannu namondi hanchikondu avala jote navu bereyuvante madiddakke danyavada.

    nammellara muddu saanvige shubhavagali...

    ReplyDelete
  12. ಚೆನ್ನ,
    ಧನ್ಯವಾದಗಳು !
    ಸಾನ್ವಿ ಬ್ಲಾಗಿಗೆ ಭೇಟಿ ನೀಡಿ ಮೆಚ್ಚಿಕೊಂಡಿದ್ದಕ್ಕೆ.

    ReplyDelete
  13. ಬಾಲು ಅವರೇ,
    ನಿಮ್ಮ ಚೆಂದದ ಪ್ರತಿಕ್ರಿಯೆಗೆ ವಂದನೆಗಳು.

    ReplyDelete
  14. ತರುಣ್,

    ಪ್ರೀತಿಯ ನುಡಿಗಳಿಗೆ ನಮ್ಮ ಧನ್ಯವಾದಗಳು.

    ReplyDelete
  15. ಸಾನ್ವಿಯ ಬೆಳವಣಿಗೆಯ ಪ್ರತಿ ಹ೦ತಗಳ ದಾಖಲೆ ಬಹಳ ಸ್ವಾರಸ್ಯಕರವಾಗಿದೆ. ಅಣ್ಣ ಪ್ರಾಶನದ ಸ೦ದರ್ಭದಲ್ಲಿ ನಿಮ್ಮ ಕೋರಿಕೆ ಅರ್ಥಪೂರ್ಣವಾಗಿದೆ.

    ReplyDelete
  16. ಸಾನ್ವಿಯ ಬಾಲ್ಯ ನೋಡಿ ನನ್ನ ಮಗಳ ಬಾಲ್ವ್ಯ ನೆನಪಾಯ್ತು...ಮೊದಲ ಒಂದೆರಡು ತಿಂಗಳು...ನಾನು ನನ್ನವಳು ಸರದಿಯ ಮೇಲೆ ರಾತ್ರಿ ಜಾಗರಣೆ ..ಅವಳು ಮಲಗುತ್ತಿದ್ದುದು ಹಗಲಲ್ಲಿ...ಹಹಹಹ್ ಸಾನ್ವಿಗೆ ಸಕಲ ಸುಖಾರೋಗ್ಯ ಸಂತೋಷ ಕೋರುತ್ತೇವೆ..

    ReplyDelete
  17. ಪ್ರಭಾ ಅವರೇ,
    ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ.

    ReplyDelete
  18. ಅಜಾದ್,
    ಜಾಗರಣೆ ....ಹಿಹೀ..:)
    ವಂದನೆಗಳು!

    ReplyDelete
  19. ಕನ್ನಡ ಬ್ಲಾಗ್ ಲಿಸ್ಟ್,
    ಬ್ಲಾಗಿಗೆ ಭೇಟಿ ನೀಡಿ ಪ್ರತಿಕ್ರಿಯಿಸಿದ್ದಕ್ಕೆ ವಂದನೆ.
    ನಿಮ್ಮ ಪಟ್ಟಿಯಲ್ಲಿ ನಮ್ಮನ್ನು ಸೇರಿಸಿಕೊಂಡಿದ್ದಕ್ಕೆ ಧನ್ಯವಾದಗಳು.

    ReplyDelete
  20. ತುಂಬಾ ಇಷ್ಟವಾಯ್ತು ಬ್ಲಾಗ್.... ಅಷ್ಟೂ ಬರಹಗಳನ್ನು ಒಂದೇ ಸಿಟ್ಟಿಂಗ್ ನಲ್ಲಿ ಓದಿ ಮುಗಿಸಿದೆ....

    ನನ್ನ ಡೈರಿಯಲ್ಲಿನ ಒಂದಷ್ಟನ್ನು ನಾನೂ ಹಾಕಬಹುದೇನೋ ಎಂಬ ಸ್ಫೂರ್ತಿ ನೀಡಿದಿರಿ ನೀವು...

    ಮುದ್ದು ಸಾನ್ವಿಗೆ ಸಾವಿರ ಮುತ್ತು...

    ReplyDelete
  21. ಮಿಂಚುಳ್ಳಿ,
    ನಿಮ್ಮ ಬ್ಲಾಗಿನಲ್ಲಿ 'ಮಗು ಹುಟ್ಟುವ ಮೊದಲು ಅಮ್ಮ ಹುಟ್ಟುತ್ತಾಳೆ' ಓದಿದೆ.
    ನೀವು ಇನ್ನು ಹೆಚ್ಚು ಬರೆಯಬೇಕು.

    ReplyDelete