Sunday, May 13, 2012

ಪ್ರಜಾವಾಣಿಯಲ್ಲಿ ನಮ್ಮ ಸಾನ್ವಿ !

ದಿನದಿನವೂ ಹೊಸ ಆಟ-ಮಾತುಗಳಿಂದ ಮನ-ಮನೆ ಬೆಳಗುತ್ತಿದ್ದಾಳೆ ಸಾನ್ವಿ...

ಅಪ್ಪ-ಅಮ್ಮನ ಹೆಸರುಗಳನ್ನು  ಮುದ್ದಾಗಿ ಹೇಳುವದರಿಂದ ಹಿಡಿದು ಅವಳ ಅಮ್ಮನ ಅನುಕರಣೆ ಮಾಡುವವರೆಗೆ ಅನೇಕ ಲೀಲೆಗಳಿಂದ ನಮ್ಮನ್ನು ಆವರಿಸಿಕೊಂಡು ಬಿಟ್ಟಿರುತ್ತಾಳೆ.ಸಾನ್ವಿಯ ಆಟ-ಪಾಟಗಳಲ್ಲಿ ಸಮಯ ಹೋದದ್ದೇ ತಿಳಿಯುವುದಿಲ್ಲ.

ಮೊನ್ನೆ ಹೀಗೇ ಆಯಿತು..

ಪ್ರಜಾವಾಣಿ ಪತ್ರಿಕೆಯ ಶುಕ್ರವಾರದ ಸಾಪ್ತಾಹಿಕದಲ್ಲಿ ನಮ್ಮ ಸಾನ್ವಿ ಬ್ಲಾಗ್ ಕುರಿತು ಲೇಖನವೊಂದು ಪ್ರಕಟವಾಗಿದೆ. ನಿಜ ಹೇಳಬೇಕೆಂದರೆ, ಅದು ಎಪ್ರಿಲ್ ೨೭ ರಂದು ಪ್ರಕಟವಾದ ವಿಷಯವೇ ತಿಳಿದಿರಲಿಲ್ಲ...ನಮ್ಮ ಅಕ್ಕ ಪೋನ್ ಮಾಡಿ ಹೇಳುವ ತನಕ.
'ಬ್ಲಾಗಿಲನು ತೆರೆದು' ಎನ್ನುವ ವಿಶಿಷ್ಟ ಹೆಸರಿನ ಅಂಕಣದಲ್ಲಿ ಸಾನ್ವಿ ಬ್ಲಾಗ್ ಬಗ್ಗೆ ಸುಂದರವಾಗಿ ಬರೆದಿದ್ದಾರೆ.  

ನಮ್ಮ ಈ ಬ್ಲಾಗ್ ಬಗ್ಗೆ ಪ್ರೀತಿಯಿಂದ ಬರೆದಿದ್ದಕ್ಕೆ 'ಸಾಕ್ಷಿ' ಯವರಿಗೆ ಧನ್ಯವಾದಗಳು. ಹಾಗೆ ಪ್ರಜಾವಾಣಿಗೂ ವಂದನೆಗಳು.

ಪ್ರಜಾವಾಣಿಯ ಬರಹ ಇಲ್ಲಿದೆ ...



ಪೋನ್ ಮಾಡಿ ಇದರ ಬಗ್ಗೆ ತಿಳಿಸಿದ ಸವಿತ ಮಲ್ಲಿಕಾರ್ಜುನ್ ಅವರಿಗೆ ಥ್ಯಾಂಕ್ಸ್ !!



Wednesday, April 4, 2012

ಪಾತರಗಿತ್ತಿ ಪಾರ್ಕಿನಲ್ಲಿ


ಹೊರಗೆ ತಿರುಗಾಡುವುದು ಸಾನ್ವಿಗೆ ಬಲು ಇಷ್ಟವಾಗ್ತಿದೆ. ಕಾರಿನಲ್ಲಿ ತಿರುಗೋಕೆ ಯಾವಾಗಲೂ ಸಿದ್ಧ..

ಇತ್ತೀಚಿಗೆ ಬನ್ನೇರುಘಟ್ಟದಲ್ಲಿರುವ ಚಿಟ್ಟೆ ಪಾರ್ಕಿಗೆ ಹೋಗಿದ್ದಿವಿ.

ರಾಷ್ಟ್ರೀಯ ಉದ್ಯಾನವನದ ಪಕ್ಕದಲ್ಲೇ ಇರುವ ಇದರಲ್ಲಿ ಸುಮಾರು ೨೦ ಪ್ರಬೇಧದ ಚಿಟ್ಟೆಗಳು ಇವೆಯಂತೆ. ನಾವು ಹೋದಾಗ ೪-೫ ತರವಷ್ಟೇ ಕಣ್ಣಿಗೆ ಬಿದ್ದವು.

ಸಾನ್ವಿಗೆ ಅಲ್ಲಿ ಹಾರಾಡುತ್ತಿದ್ದ ಬಣ್ಣದ ಚಿಟ್ಟೆ ತೋರಿಸಿದಾಗ , ಕಣ್ಣರಳಿಸಿ ನೋಡಿದಳು. ನಂತರ ಅವುಗಳನ್ನು ಹಿಡಿಯುವ ಪ್ರಯತ್ನವು ಸ್ವಲ್ಪ ಹೊತ್ತು ನಡೆಯಿತು !ಕೊನೆ ಪ್ರಯತ್ನವಾಗಿ ಅವುಗಳನ್ನು ಕೈಮೇಲೆ ಬಂದು ಕುಳಿತುಕೊಳ್ಳುವಂತೆ ಬಾ ಬಾ ಎಂದು ಕರೆದಳು !

ಅಷ್ಟರಲ್ಲಿ ಅಲ್ಲೇ ಹರಿಯುತ್ತಿದ್ದ ತೊರೆಯೊಂದರಲ್ಲಿರುವ ಮೀನುಗಳು ಕಂಡವು. ಚಿಟ್ಟೆ ಹಿಂದಿನ ಓಟ ಬಿಟ್ಟು, ಮೀನುಗಳ ಕಡೆ ಚಿತ್ತ ಹರಿಯಿತು. ಅವುಗಳನ್ನು ಸಾಕಷ್ಟು ಹೊತ್ತು ನೋಡಿ ಹೊರಬಂದಾಗ ಎದುರಿಗೆ ಜಾರಬಂಡಿ-ಜೋಕಾಲಿ. ಅವುಗಳ ಜೊತೆಯೂ ಆಟದ ನಂತರ ಸಾನ್ವಿ ಫುಲ್ ಖುಷ್ !

ಮನೆಗೆ ಮರಳುವಾಗ ಸಾನ್ವಿಗೆ ಇವತ್ತು ಏನು ನೋಡಿದೆ ಇಂದು ಕೇಳಿದಾಗ, ಹೇಳಿದ್ದು ಎರಡೇ..ಒಂದು ಪಿಶ್ ಮತ್ತು ಇನ್ನೊಂದು ಮಂಕಿ !

ಚಿಟ್ಟೆ ಪಾರ್ಕಿನ ಹೊರಗೆ ಮಂಗಗಳ ಚಿಕ್ಕ ಗುಂಪಿದೆ.  ಸಾನ್ವಿಯ ಅಮ್ಮನ ಕೈಯಲ್ಲಿ ಹಣ್ಣಿನ ಡಬ್ಬವೊಂದಿತ್ತು. ಒಂದು ಮಂಗ ಹತ್ತಿರ ಬಂದೊಡನೆ , ಕೈಯಲ್ಲಿದ್ದ ಡಬ್ಬವನ್ನು ಗಾಭರಿಯಿಂದ ಎಸೆದಿದ್ದಳು. ಮಂಗಗಳು ಡಬ್ಬದ ಹಣ್ಣುಗಳನ್ನು ಆರಿಸಿ ತಿಂದವು.

ಇದನ್ನು ನೋಡಿದ ಸಾನ್ವಿ....ಅಮ್ಮ ಹೇಗೆ ಡಬ್ಬ ದಪ್ ಅಂತ ಎಸೆದಳು, ಮಂಕಿ ಹೇಗೆ ಅಪ್ ಎಂದು ಜಂಪ್ ಮಾಡಿ ಡಬ್ಬ ಹಿಡಿಯಿತು, ನಂತರ ಮಂಕಿ ಹೇಗೆ ದ್ರಾಕ್ಷಿ ತಿಂದಿತು ಎಂಬ ಕತೆಯನ್ನು ಮನೆ ಮುಟ್ಟುವರೆಗೆ ಅಭಿನಯದೊಂದಿಗೆ
ಹೇಳುತ್ತಿದ್ದಳು !

Thursday, November 3, 2011

ಮೊದಲ ರಂಗ ಪ್ರಯೋಗ !


ಮೊನ್ನೆ ನವೆಂಬರ್ ೧ನೇ ತಾರೀಖು ಬಿಗ್ ಬಜಾರಿಗೆ ಖರೀದಿಗೆ ಹೋಗಿದ್ದೆವು.ಅವತ್ತು ಅಲ್ಲಿ ರಾಜ್ಯೋತ್ಸವದ ವಿಶೇಷವಾಗಿ ವೇದಿಕೆ ನಿರ್ಮಿಸಿದ್ದರು. ಅಲ್ಲಿ ಹಾಡು-ನೃತ್ಯ ನಡೆದಿದ್ದವು.

ಕೈಯಲ್ಲಿದ್ದ ಸಾನ್ವಿ ನಮ್ಮನ್ನು ವೇದಿಕೆಯೆಡೆಗೆ ಎಳೆಯಲು ಆರಂಭಿಸಿದಳು.  

ಕಡೆಗೆ ವೇದಿಕೆಯ ಮೇಲೆ ಹತ್ತಿಸಿದೆವು. ಅಲ್ಲಿದ್ದ ಮಕ್ಕಳ ಜೊತೆ ನಮ್ಮ ಸಾನ್ವಿ ಹೆಜ್ಜೆ ಹಾಕಿದಳು !ಹಾಡಿನ ಜೊತೆ ಸಾನ್ವಿ ವೇದಿಕೆಯಿಂದ ಕೈ ಬೀಸುವುದು ಮತ್ತು ನಮಸ್ಕಾರ ಮಾಡುವುದು ಸುಂದರವಾಗಿತ್ತು.

ಸಾನ್ವಿಯ ಮೊದಲ ರಂಗ ಪ್ರಯೋಗದ ವಿಡಿಯೋ ಇಲ್ಲಿದೆ..


Sunday, September 4, 2011

Month Twelve


Saanvi is on her feet !

She gets up on her own and starts walking around. She simply loves walking and its becoming hard for her mom to catch up with her !

She has seen somebody touching her photo on the computer screen and giving a kiss. Now she does the same, every time she sees one of her photo. She does it for other baby and children photos as well.

One day, she was standing on top of a book and her mom told that book should not be stamped by leg. She told it should be respected by touching it by hand and doing namaste. Now she started doing it for everything she hits by leg that includes table, bed, modem, TV remote, computer.

She can now eat on her own and especially enjoys eating crispy things.

She can Imitate animals and does a cute imitation of Lion, Dog & Cow.

Also learnt some dance moves and starts dancing around !

Finally, Saanvi's birthday was celebrated for 3 days. First day, Saanvi had cake cutting party and next two days, she spent wit h family by visiting the temple towns - Sringeri, Horanadu, Dharmstala & Kukke

Overall, an exciting and memorable year that went by !!



ಸಾನ್ವಿ ತನ್ನ ಕಾಲ ಮೇಲೆ ನಿಂತುಕೊಳ್ಳುತ್ತಾಳೆ !

ಯಾವ ನೆರವಿಲ್ಲದೆ, ತಾನೇ ಎದ್ದು ನಿಂತು ನಡೆದಾಡಲು ಕಲಿತಿದ್ದಾಳೆ. ನಡೆದಾಡುವುದು ಸಾನ್ವಿಗೆ ತುಂಬಾ ಅಚ್ಚುಮೆಚ್ಚು. ಆದರೆ ಸಾನ್ವಿಯ ಹಿಂದೆ ಓಡಿ ಅವಳನ್ನು ಹಿಡಿಯುವುದು ಅಮ್ಮನಿಗೆ ಕಷ್ಟ !

ಗಣಕಯಂತ್ರದ ಪರದೆಯ ಮೇಲೆ ಅವಳ ಪೋಟೋವನ್ನು ಮುಟ್ಟಿ ಮನೆಯವರೆಲ್ಲಾ ಮುತ್ತಿಡುವುದನ್ನು ನೋಡಿದ ಸಾನ್ವಿ, ಈಗ ತನ್ನ ಪೋಟೋ ನೋಡಿದ ತಕ್ಷಣ ಅದನ್ನು ಕೈಯಿಂದ ಮುಟ್ಟಿ ಮುತ್ತಿಡುತ್ತಾಳೆ. ಯಾವುದೇ ಮಕ್ಕಳ ಪೋಟೋ ನೋಡಿದರೂ ಅದಕ್ಕೆ ಮುತ್ತು ಸಿಗುತ್ತದೆ.

ಅದು ಯಾವಾಗಲೋ ಪುಸ್ತಕದ ಮೇಲೆ ಹತ್ತಿ ನಿಂತಾಗ, ಸಾನ್ವಿಯ ಅಮ್ಮ ಪುಸ್ತಕವನ್ನು ಹಾಗೆ ತುಳಿಯಬಾರದೆಂದು ಹೇಳಿದ್ದಳು. ಪುಸ್ತಕವನ್ನು ಮುತ್ತಿ ನಮಸ್ಕರಿಸಿದ್ದಳು. ಈಗ ಕಾಲಿಂದ ಮುಟ್ಟಿದ ಎಲ್ಲದನ್ನು ಮುಟ್ಟಿ ನಮಸ್ಕಾರ ಮಾಡಲು ಶುರು ಮಾಡಿಕೊಂಡಿದ್ದಾಳೆ. ಮೇಜು, ಹಾಸಿಗೆ, ಗಣಕ ಯಂತ್ರ, ಮೋಡೆಮ್, ಟಿವಿ ರಿಮೋಟ್ ಎಲ್ಲದಕ್ಕೂ ನಮಸ್ಕರಿಸಿದ್ದಾಳೆ !

ಆಹಾರವನ್ನು ತಟ್ಟೆಯಿಂದ ಬಾಯಿಗೆ ಹಾಕಿಕೊಳ್ಳುವದನ್ನು ಕಲಿತಿದ್ದಾಳೆ. ಗರಿಗರಿಯಾದ ಆಹಾರವನ್ನು ತಿನ್ನುವುದು ಇಷ್ಟ.

ಪ್ರಾಣಿಗಳನ್ನು ಅನುಕರಣೆ ಮಾಡುವುದು ಕಲಿತಿದ್ದಾಳೆ. ಸಿಂಹ, ನಾಯಿ ಮತ್ತು ಹಸುವಿನ ಅನುಕರಣೆ ಮುದ್ದಾಗಿ ಮಾಡುತ್ತಾಳೆ.
ಕುಣಿಯುವಕ್ಕೆ ಹೆಜ್ಜೆ ಹಾಕುವುದನ್ನು ಕಲಿತಿದ್ದಾಳೆ.

ಸಾನ್ವಿಯ ಮೊದಲ ಜನ್ಮದಿನವನ್ನು ೩ ದಿವಸ ಆಚರಿಸಲಾಯಿತು. ಮೊದಲ ದಿನ , ಸಾನ್ವಿ ಕೇಕ್ ಕತ್ತರಿಸಿದಳು. ಮುಂದಿನ ಎರಡು ದಿವಸ, ಕುಟುಂಬದವರೊಂದಿಗೆ ಶೃಂಗೇರಿ, ಹೊರನಾಡು, ಧರ್ಮಸ್ಥಳ ಮತ್ತು ಕುಕ್ಕೆ ಕ್ಷೇತ್ರಗಳಲ್ಲಿ ಕಳೆದಳು.

ಒಟ್ಟಾರೆ, ಒಂದು ಅವಿಸ್ಮರಣೀಯ ಮತ್ತು ಉತ್ಸಾಹ-ಉಲ್ಲಾಸದ ಸಾನ್ವಿಯ ಮೊದಲ ವರ್ಷ ಕಳೆಯಿತು.



Wednesday, August 17, 2011

ಪ್ರೇಮ ಪಾರಿಜಾತಕ್ಕೆ ಒಂದು ವರ್ಷ !

ಪಾರಿಜಾತ ಪುಷ್ಪವೊಂದು 
ಗಾಳಿಯಲಿ ತೇಲಿ ಬಂದು
ಅದರ ಸೊಬಗಿನಿಂದ ಮೋಹಗೊಂಡು
ಬೊಗಸೆಯೊಡ್ಡಿ ನಾವು ನಿಂತೆವಂದು

ಪರಾಗ ರೇಣು ಮಡಿಲಲಿ
ಪುಟ್ಟ ಪಾರಿಜಾತ ಮೊಳೆಯಿತಲ್ಲಿ
ಪಾರಿಜಾತ ಹೊತ್ತ ಸಂತಸದಲಿ
ಕಂಗೊಳಿಸಿದಳು ಅವಳು ಅಂದದಲಿ 

ನವಮಾಸ ಒಡಲ ಬೆಳಗಿ
ಇಳಿಯಿತು ಪಾರಿಜಾತ ಇಳೆಗೆ 
ಎನಿತು ಸೊಬಗು ಎಂತ ಸೃಷ್ಟಿ
ದೇವಲೋಕದ ಪುಷ್ಪವೇ ಸೈ

ಪಾರಿಜಾತ ನಲಿದು ನಲಿಸಿ
ಕಮ್ಮನೆ ಪ್ರೀತಿ ಸೂಸಿ
ಬೆಳೆಯುವುದ ಕಂಡು ಹರ್ಷಿಸಿ 
ನೋಡುತ್ತಲೇ ವರ್ಷವೊಂದ ಗಳಿಸಿ

ಪ್ರೇಮ ಪಾರಿಜಾತಕ್ಕೀಗ ಒಂದು ವರ್ಷ !

ಬೆಳಯಲಿ ಪಾರಿಜಾತ ಅಂದವಾಗಿ
ಹರಡಲಿ ಕಂಪು ಕೀರ್ತಿಯಾಗಿ
ಮಾಡಲಿ ಹೆಸರು ಸಾಧನೆಗಾಗಿ 
ಇದುವೇ ಆಶಯ ಪಾರಿಜಾತಕ್ಕಾಗಿ 

Thursday, July 14, 2011

Months Nine to Eleven

Month 9

ಸಾನ್ವಿಯ ಸಾಗರೋಲ್ಲಂಘನ !

ಭರತಖಂಡದಲ್ಲಿ ಈಗ ಸಾನ್ವಿಯ ಆಗಮನ..

ಮೊದಲ ವಿಮಾನಯಾನದಲ್ಲಿ ಏನೂ ಗಲಾಟೆ ಮಾಡದೇ, ಆರಾಮವಾಗಿ ಆಟವಾಡಿಕೊಂಡಿದ್ದಳು. ವಿಮಾನದಲ್ಲಿದ್ದವರಿಗೆ ಮುಗುಳ್ನಗೆ ಬೀರುತ್ತಾ, ಬಹಳಷ್ಟು ಜನ ನಮ್ಮ ಆಸನದ ಹತ್ತಿರ ನಿಂತು ಹೋಗುವಂತೆ ಮಾಡಿದಳು.

ಭಾರತದಲ್ಲಿ ಇಳಿದಾಗ ವಿಮಾನ ನಿಲ್ದಾಣದಲ್ಲಿ ಸಾನ್ವಿ ಬರಮಾಡಿಕೊಳ್ಳಲು ೨ ಡಜನ್ ಜನ ಬಂದಿದ್ದರು. ಅವರೆಲ್ಲರು ಸಾನ್ವಿಯನ್ನು ಇದೇ ಮೊದಲ ಸಲ ನೋಡುತ್ತಿದ್ದರು. ಮೊದಲ ಸಲ ಅವರೆಲ್ಲರನ್ನು ನೋಡುತ್ತಿದ್ದ ಸಾನ್ವಿ ಸ್ಪಲ್ಪ ಗಾಭರಿಗೊಂಡಿದ್ದಳು, ನಂತರ ಸ್ಪಲ್ಪ ಸಮಯದಲ್ಲಿ ಎಲ್ಲರ ಜೊತೆ ಆಟವಾಡತೊಡಗಿದಳು.

ಮೊದಲ ಬಾರಿಗೆ ಆಟೋರಿಕ್ಷಾದಲ್ಲಿ ಹೋಗುವಾಗ, ಸಾನ್ವಿಗೆ ಎನೋ ಖುಷಿ. ಥೀಮ್ ಪಾರ್ಕ್ ರೈಡ್‍ನಲ್ಲಿ ಕೂಗುವಂತೆ, ಸಾನ್ವಿ ಆಟೋದಲ್ಲಿ ಕೇಕೆ ಹಾಕುತ್ತಿದ್ದಳು ! ಪಕ್ಕದಲ್ಲಿ ಹಾರ್ನ್ ಮಾಡುತ್ತಾ ಓಡುವ ಆಸಂಖ್ಯಾತ ವಾಹನಗಳನ್ನು ಕುತೂಹಲದಿಂದ ನೋಡುತ್ತಿದ್ದಳು.

ಪ್ರತಿದಿನವೂ ಸಾನ್ವಿ ನೋಡಲು ನೆಂಟರು-ಗೆಳೆಯರು ಬರುತ್ತಿರುತ್ತಾರೆ.

ಹೊಸ ವಾತಾವರಣ, ಹೊಸ ಮುಖಗಳ ನಡುವೆ ಹೊಂದಿಕೊಳ್ಳುವ ಯತ್ನದಲ್ಲಿ ಇದ್ದಾಳೆ.

Saanvi  crossed the oceans and she is in India !

She was pretty relaxed in her first flight and was in playful mood. She was smiling at co-passengers on the flight and made many of them to stand at our seats.

Atleast 2 dozen people had come to airport to receive her. All of them were seeing Saanvi for the first time. Saanvi was initially terrified but soon started playing with everybody.

After some days, her first ride in Autorickshaw was fun. She was shouting with joy as if she is in a theme park ride during the auto ride ! She was curiously watching all the hundreds of vehicles around that were honking and running.

There are friends and family that come almost everyday to visit Saanvi.

Saanvi is trying to adopt to the new faces and new conditions.

*******************************************

Month 10

ನಮಸ್ಕಾರ ಎಂದೊಡನೆ ಎರಡು ಕೈಮುಗಿದು ನಮಸ್ಕರಿಸುತ್ತಾಳೆ.
ದೇವರ ಕೋಣೆ ನೋಡಿದಾಗ ನಮಸ್ಕಾರ ನಡೆಯುತ್ತೆ.

ಕುಕ್ಕರ್ ವಿಷಲ್ ಮಾಡುವುದನ್ನು ನೋಡಿ, ಆ ವಿಷಲ್ ಧ್ವನಿ ಅನುಕರಣೆ ಮಾಡಿ ಬಾಯಿಯಿಂದ ಗಾಳಿಯೂದುತ್ತಾಳೆ.
ಚಪ್ಪಾಳೆ ಎಂದೊಡನೆ ಎರಡು ಕೈ ತಟ್ಟಿ ಚಪ್ಪಾಳೆ ಬಾರಿಸುತ್ತಾಳೆ.ಗುಡ್ ಜಾಬ್ ಅಂದಾಗ ಚಪ್ಪಾಳೆ ಹೊಡೆಯುತ್ತಾಳೆ.

ಬಾಗಿಲಿನಿಂದ ಹೊರಗೆ ಹೋಗುವವರಿಗೆಲ್ಲಾ ಕೈ ಬೀಸಿ ಟಾ ಟಾ ಮಾಡುತ್ತಾಳೆ.
ಬೈಕಿನಲ್ಲಿ ಕುಳಿತು ತಿರುಗಾಡುವುದು ಸಿಕ್ಕಾಪಟ್ಟೆ ಇಷ್ಟದ ಕೆಲಸ. 

ಮಕ್ಕಳೆಂದರೆ ವಿಪರೀತ ಖುಷಿ. ನೋಡಿದ ಮಕ್ಕಳಿಗೆಲ್ಲಾ ಬಾ ಬಾ ಎಂದು ಕರೆಯುತ್ತಾಳೆ.

Saanvi has learnt to do 'Namaskara' by folding both hands. When she sees the worship room, she automatically does Namasakara.

Initially she was terrified of cooker whistle sound. Now she got used to it and even learnt to imitate it. She blows air when we ask how cooker blows whistle !

She probably understands what clapping is. When we ask to clap, she will start clapping. Curious thing was she starts to clap hands when we say 'good job' !

She waves hands at everybody going out of door.

Loves roaming around on the bike.

Likes the kids a lot and calls every kid she sees.

**************************************
Month 11

ಆಮ್ಮ, ಪಾ, ಬಾ, ಭಾ ಎಂದು ಕರೆಯುವುದಕ್ಕೆ ಶುರುಮಾಡಿದ್ದಾಳೆ.

ಅಂಗಾತ ಮಲಗಿದಾಗಿನಿಂದ ಕೈಯೂರಿ ಎದ್ದು ಒಬ್ಬಳೇ ಕುಳಿತುಕೊಳ್ಳುತ್ತಾಳೆ.

ಮೂಗು ಯಾವುದು ಎಂದು ಕೇಳಿದರೆ ತೋರಿಸುತ್ತಾಳೆ, ಹಾಗೆಯೇ ಗೋಡೆಯ ಮೇಲಿನ ಮಂಗನ ಚಿತ್ರ ಕೇಳಿದಾಗಲೂ ತೋರಿಸುತ್ತಾಳೆ.

ಯಾರಾದರೂ ಥ್ಯಾಂಕ್ಸ್ ಕೊಡುವುದಕ್ಕೆ ಕೈ ಚಾಚಿದರೆ, ತನ್ನ ಕೈ ಚಾಚಿ ಥ್ಯಾಂಕ್ಸ್ ನೀಡುತ್ತಾಳೆ.

ಹೊರಗೆ ಓಡಾಡುವ ನಾಯಿಗಳನ್ನು ಆಸಕ್ತಿಯಿಂದ ನೋಡಿ, ಅವುಗಳನ್ನು ಬಾ ಬಾ ಎಂದು ಕರೆಯುವುದನ್ನು ಕಲಿತಿದ್ದಾಳೆ.

ಹ್ಯಾಂಡ್ಸ್ ಅಪ್-ಡೌನ್ ಮಾಡುವುದು ಇನ್ನೊಂದು ಹೊಸ ಕಲಿಕೆ.

Saanvi has started to say 'amma',pa,ba,bha !

She pulls her up from sleeping position and sits.

Shows the nose when asked. Also recognizes the picture of monkey on the wall.

She extends her hands for thanks giiving.

She watches the dogs with curiosity and often waves at them to call.

Doing hands up-down is another new trick she has learnt.

Saturday, April 23, 2011

Month Eight

There is a constant demand from Saanvi to make her walk. With somebody holding her shoulders, she is loving to walk. Instead of small steps, she is covering the ground with big steps !

Along with the walks, kicking the ball is another favorite activity these days.

She gets excited seeing other kids around. Often she extends her hand as if to call them and sometimes makes noises when she see other kids.

She is liking the boiled vegetables, rice & pulses. Saanvi can hold pieces of the vegetables in her fingers and stuffs into her mouth. Same with the Chapati pieces.

There are two new teeth now on upper jaw. All together 4 tooth !

















ಸಾನ್ವಿಗೆ ನಡೆದಾಡುವ ಹುಮ್ಮಸ್ಸು. ನಾವು ಯಾರಾದರೂ ಹಿಡಿದುಕೊಂಡು ಓಡಾಡಿಸಿದರೆ ಮನೆ ತುಂಬಾ ಹೆಜ್ಜೆ ಇಡುವ ಆಟ. ಪುಟ್ಟ ಹೆಜ್ಜೆಗಳ ಬದಲು ದಾಪುಗಾಲು ಇಡುತ್ತಿರುವುದು ವಿಶೇಷ !

ಇದರ ಜೊತೆಗೆ ಕಾಲಿನಿಂದ ಚೆಂಡನ್ನು ತಳ್ಳುವುದು ಇನ್ನೊಂದು ನೆಚ್ಚಿನ ಆಟ.

ಚಿಕ್ಕ ಮಕ್ಕಳನ್ನು ನೋಡಿದರೆ ಸಾನ್ವಿಗೆ ತುಂಬಾ ಖುಷಿ. ಚಿಕ್ಕ ಮಕ್ಕಳೆಗೆ ಕೈ ಚಾಚುವುದು ಮತ್ತು ಧ್ವನಿ ಮಾಡುತ್ತಿರುತ್ತಾಳೆ.

ಬೇಯಿಸಿದ ತರಕಾರಿ, ಅನ್ನ ಮತ್ತು ಬೇಳೆ ಇಷ್ಟವಾಗುತ್ತಿವೆ. ತರಕಾರಿ ತುಂಡುಗಳನ್ನು ಬೆರಳಿನಲ್ಲಿ ಹಿಡಿದುಕೊಂಡು ಬಾಯಿಗೆ ಹಾಕಿಕೊಳ್ಳುತ್ತಿರುತ್ತಾಳೆ. ಹಾಗೆಯೇ ತನ್ನ ನೆಚ್ಚಿನ ಚಪಾತಿ ತುಂಡುಗಳನ್ನೂ ಸಹ.

ಹೊಸದಾಗಿ ಎರಡು ಹಲ್ಲುಗಳು ಮೇಲ್ದವಡೆಯಲ್ಲಿ ಬಂದಿವೆ. ಈಗ ಒಟ್ಟು ನಾಲ್ಕು ಹಲ್ಲುಗಳು !