Showing posts with label Halloween. Show all posts

Sunday, October 25, 2015
Tuesday, November 2, 2010
ಸಾನ್ವಿಯ ಹ್ಯಾಲೋವಿನ್
ಕುಂಬಳಕಾಯಿಯ ಹಿಡಿಕೆಯ ಸುತ್ತ ವರ್ತುಲಾಕಾರದಲ್ಲಿ ಕೊಯ್ದು ಎಳೆದಾಗ, ಅದು ಚಿಕ್ಕ ಮುಚ್ಚಳಿಕೆಯ ತರ ಹೊರಗೆ ಬಂತು. ಅದಕ್ಕೆ ತಿರುಳಿನಿಂದ ಅಂಟಿಕೊಂಡಿದ್ದ ಬೀಜದ ಸರಮಾಲೆಗಳು. ಕುಂಬಳಕಾಯಿಯೊಳಗೆ ಸೌಟಿನಿಂದ ಎರೆದು ತಿರುಳು-ಬೀಜಗಳನ್ನು ತೆಗೆದದ್ದಾಯಿತು.
ಕುಂಬಳಕಾಯಿ ಹೊರಮೈಯ ಮೇಲೆ ಎರಡು ತ್ರಿಕೋನಕಾರದಲ್ಲಿ ಕಣ್ಣುಗಳಂತೆ ಕೊರೆದು, ನಡುವೆ ಇನ್ನೊಂದು ತ್ರಿಕೋನದಂತ ಮೂಗನು ಕೊರೆದದ್ದಾಯಿತು. ಮೂಗಿನ ಕೆಳಗೆ ಬಾಯಿ ಆಕಾರದಲ್ಲಿ ಕೊರೆದಾಗ, ಅಲ್ಲೊಂದು ಮುಖ ಕುಂಬಳಕಾಯಿಯ ಮೇಲೆ ಮೂಡಿತ್ತು.
ಸಾನ್ವಿ ತನ್ನ ಬೌನ್ಸರ್‍ನಲ್ಲಿ ಕುಳಿತು, ತನ್ನ ಮುಂದೆ ನಡೆಯುತಿದ್ದ ಕುಂಬಳಕಾಯಿ ಕೆತ್ತನೆ ಕಡೆ ನೋಡುತ್ತಿದ್ದಳು..
ಹ್ಯಾಲೋವಿನ್ ಎಂಬ ವಿಶಿಷ್ಟ ಆಚರಣೆಗೆ ಸಿದ್ಧತೆ ನಡೆದಿತ್ತು..
ಕಣ್ಣು-ಮೂಗು-ಬಾಯಿಗಳನ್ನು ಇನ್ನೊಮ್ಮೆ ತೀಡಿ, ಅದರೊಳಗೆ ಮೇಣದ ಬತ್ತಿ ಇಟ್ಟಾಗ, ಕುಂಬಳಕಾಯಿಗೆ ಜೀವ ಬಂದಂತಿತ್ತು.
ಅದರ ತಲೆಯ ಮೇಲೆ ಮುಚ್ಚಳದಂತ ಚಿಪ್ಪನ್ನು ಇಟ್ಟಾಗ, ಜಾಕ್-ಓ-ಲ್ಯಾಂಟ್ರನ್(Jack O' Lantern) ಸಿದ್ಧವಾಗಿತ್ತು.
ಹ್ಯಾಲೋವಿನ್ ಆಚರಣೆಯಲ್ಲಿ ಜಾಕ್-ಓ-ಲ್ಯಾಂಟ್ರನ್ ಒಂದು ಪ್ರಮುಖ ಭಾಗ. ಕುಂಬಳಕಾಯಿಯಲ್ಲಿ ಮುಖವನ್ನು(ಬಹುತೇಕ ಕಡೆಗಳಲ್ಲಿ ಭಯಾನಕ ಮುಖ) ಕೊರೆದು ಅದರಲ್ಲಿ ದೀಪ ಹಚ್ಚಿ ಮನೆಯೊರಗೆ ಇಟ್ಟರೆ, ಅದು ದುಷ್ಟ ಶಕ್ತಿಗಳನ್ನು ಮನೆಯಿಂದ ದೂರವಿಡುತ್ತೆಂಬ ಪ್ರತೀತಿ.
ಜಾಕ್-ಓ-ಲ್ಯಾಂಟ್ರನ್ ಮನೆಯ ಬಾಗಿಲಲ್ಲಿ ಸ್ಥಾಪಿಸಿ ಬಂದಾಗ, ಸಾನ್ವಿಯನ್ನು ಅವರ ಅಮ್ಮ ಹ್ಯಾಲೋವಿನ್ ಡ್ರೆಸ್‍ನಲ್ಲಿ ಅಲಂಕರಿಸುತ್ತಿದ್ದಳು.
ಹ್ಯಾಲೋವಿನ್ ದಿನದಂದು ವಿವಿಧ ತರದ ಫ್ಯಾನ್ಸಿ ಡ್ರೆಸ್‍ಗಳನ್ನು ತೊಡುವುದು ಒಂದು ಸಂಪ್ರದಾಯವಾಗಿ ಬಿಟ್ಟಿದೆ. ಮಕ್ಕಳಿಗೆ ಶಾಲೆಗಳಲ್ಲಿ ಹ್ಯಾಲೋವಿನ್ ಡ್ರೆಸ್ ಡೇ ಸಹ ಇರುತ್ತೆ. ಬಾಲಕರಲ್ಲಿ ಸುಪರ್ ಮ್ಯಾನ್, ಸ್ಪೈಡರ್ ಮ್ಯಾನ್, ಐರನ್ ಮ್ಯಾನ್, ಪೋಲಿಸ್, ಸ್ಟಾರ್ ವಾರ್ಸ್ ಡ್ರೆಸ್‍ಗಳು ತುಂಬಾ ಪ್ರಸಿದ್ಧಿ. ಬಾಲಕಿಯರಲ್ಲಿ ಯುವರಾಣಿ, ಕಿನ್ನರಿ, ಸುಪರ್ ಗರ್ಲ್ ಬೇಡಿಕೆಯವು.
ದೊಡ್ಡವರದು ಬೇರೆಯದೇ ಒಂದು ವಿಚಿತ್ರ ಡ್ರೆಸ್ ಲೋಕ.
ನಮ್ಮ ಸಾನ್ವಿಗೆ ಹ್ಯಾಲೋವಿನ್‍ಗೆ ’ಹಸಿರು ಬಟಾಣಿ ಕಾಯಿ’ (Pea in the Pod) ಡ್ರೆಸ್ ಹಾಕಿದ್ದೆವು.
ಬಿಡಿಸಿದ ಬಟಾಣಿಕಾಯಿ ನಡುವೆ ಹಸಿರು ಬಟಾಣಿ ಕಾಳುಗಳ ವಸ್ತ್ರ. ತಲೆಗೆ ಬಟಾಣಿಕಾಯಿ ತೊಟ್ಟಿನಂತ ಹಸಿರು ಟೋಪಿ. ಟೋಪಿಗೊಂದು ಚಿಕ್ಕ ಹಸಿರು ಎಲೆ.
ಸಾನ್ವಿ ಥೇಟ್ ಹಸಿರು ಬಟಾಣಿ ಕಾಯಿ ತರನೇ ಮುದ್ದಾಗಿ ಕಾಣುತ್ತಿದ್ದಳು.
ಬಟಾಣಿ ಪುಟಾಣಿ ಸಾನ್ವಿ ’ಟ್ರಿಕ್ ಆರ್ ಟ್ರೀಟ್’ (Trick or Treat) ಹೊರಟಿತ್ತು.
ಹ್ಯಾಲೋವಿನ್ ಡ್ರೆಸ್ ಧರಿಸಿದ ಮಕ್ಕಳು ಅಕ್ಕಪಕ್ಕದ ಮನೆಗಳಿಗೆ ಹೋಗಿ, ಬಾಗಿಲು ಬಡಿದು ’ಟ್ರಿಕ್ ಆರ್ ಟ್ರೀಟ್’ ಎಂದು ಕೇಳುತ್ತಾರೆ. ಮನೆಯವರು ಟ್ರೀಟ್ ಎಂದು ಉತ್ತರಿಸಿ ಚಾಕೋಲೇಟ್-ಕ್ಯಾಂಡಿಗಳನ್ನು ಮಕ್ಕಳಿಗೆ ಕೊಡುತ್ತಾರೆ. ಬಹುಷಃ ಯಾರೂ ಟ್ರಿಕ್ ಎನ್ನುವುದಿಲ್ಲ. ಟ್ರೀಟ್ ಕೊಡದಿದ್ದರೆ ಮಕ್ಕಳು ಮಾಡುವ ತರಲೆಗಳಿಗೆ ಟ್ರಿಕ್ ಎನ್ನುತ್ತಾರೆ.
ಸಾನ್ವಿ ಬಟಾಣಿ ಡ್ರೆಸ್‍ನಲ್ಲಿ ’ಟ್ರಿಕ್ ಆರ್ ಟ್ರೀಟ್’ ಹೊರಟಾಗ, ಅಪ್ಪ-ಅಮ್ಮ ಚಾಕೋಲೇಟ್ ಬಕೆಟ್ ಹಿಡಿದು ಹಿಂಬಾಲಿಸಿದೆವು.
ಅಪ್ಪ-ಅಮ್ಮನ ಸ್ನೇಹಿತರಾದ ದೀಪ್ತಿ ಮನೆಗೆ ಹೋಗಿ ಕೇಳಿದಾಗ, ಸಾನ್ವಿಗೆ ಟ್ರೀಟ್ ಸಿಕ್ಕಿತು. ಸಾಕಷ್ಟು ಚಾಕೋಲೇಟ್‍ಗಳು ಬಕೆಟ್ ತುಂಬಿದವು.
ಸಾನ್ವಿ ಖುಷ್ ! ಕತೆ ಹೇಳೋ ತರ ಸ್ವರ ಹೊರಡಿಸಿ, ನಗುತ್ತಾ ಇದ್ದಳು ಸಾನ್ವಿ. ಬಹಳಷ್ಟು ಚಾಕೋಲೇಟ್‍ಗಳು ಸಿಕ್ಕಿವೆ ಎಂದು ಗೊತ್ತಾಯಿತೋ ಏನೋ..
ಸಂಚಾರ ಮುಗಿಸಿ ಮನೆಗ ಮರಳಿದಾಗ, ಜಾಕ್-ಓ-ಲ್ಯಾಂಟ್ರನ್ ನಗುತ್ತಾ ಸಾನ್ವಿಗೆ ಸ್ವಾಗತ ಬಯಸಿತ್ತು.
ಹೀಗೆ ನಡೆದಿತ್ತು ಸಾನ್ವಿಯ ಹ್ಯಾಲೋವಿನ್ !

Subscribe to:
Posts (Atom)