Wednesday, August 11, 2010

ಪುಟ್ಟ ಪುಟ್ಟ ಹೆಜ್ಜೆ


ಚಂದ್ರ-ತಾರೆಗಳು ನಲಿಯುವ ಆಕಾಶದಂಗಳದಿಂದ ನಮ್ಮ ಮನೆಗೆ ಮುದ್ದು ತಾರೆಯೊಂದರ ಆಗಮನವಾಗಿದೆ.


ನೋಡಲಿಕ್ಕೆ ಹೊಳೆಯುವ ಪುಟ್ಟ ತಾರೆಯಂತಿರುವ ಈ ನಮ್ಮ ಮಗುವಿನ ಆಗಮನದಿಂದ ನಮ್ಮ ಮನಗಳಲ್ಲಿ ಹೂಮಳೆ ನಡದೇ ಇದೆ.

ನಮ್ಮ ಮುದ್ದು ಮಗುವಿಗೆ ನಾವಿಟ್ಟ ಹೆಸರು - ಸಾನ್ವಿ.

ಸಾನ್ವಿಯ ಪುಟ್ಟ ಪುಟ್ಟ ಹೆಜ್ಜೆಗಳ ಗುರುತುಗಳನ್ನು ಹೆಕ್ಕಿ ಜೋಪಾನ ಮಾಡುವ ಚಿಕ್ಕ ಪ್ರಯತ್ನವೇ ಈ ಬ್ಲಾಗ್.

ಸಾನ್ವಿ ಜೊತೆಯಲಿ ಸಾಗುತ್ತ ಮುದ್ದು ಮಗಳ ಈ ಸುಂದರ ಪಯಣದಲ್ಲಿ ನಾವು ಹೆಜ್ಜೆ ಹಾಕುತ್ತಿರುತ್ತೇವೆ.

ಅಂದಾಗೆ ಮೇಲೆ ಹಾಕಿದ ಹೆಜ್ಜೆ ಗುರುತುಗಳು ಸಾನ್ವಿ ಜನಿಸಿದ ಮೊದಲ ದಿನ ಆಸ್ಪತ್ರೆಯಲ್ಲಿ ತೆಗೆದದ್ದು. ಮಗುವಿನ ಅಪ್ಪ-ಅಮ್ಮನಿಗೆ ಅದರ ಪಾದಗಳ ಅಚ್ಚಿರುವ ಒಂದು ನೆನಪಿನ ಕಾಣಿಕೆ ಕೊಡುವ ಸುಂದರ ಪರಿಪಾಟ ಆಸ್ಪತ್ರೆಯಲ್ಲಿದೆ. ಈ ಪಾದಗಳು ಆ ನೆನಪಿನ ಕಾಣಿಕೆಯಿಂದ !


- ಅಪ್ಪ ಅಮ್ಮ

4 comments:

  1. ಮತ್ತೊಮ್ಮೆ ಅಭಿನಂದೆನಗಳು!!!!!!!!!!!!!!!!!!!!!!

    ಅಮ್ಮ ಮತ್ತು ಸಾನ್ವಿ ಮನೆಗೆ ಬಂದಿದರಾ? ಇಲ್ಲಾ ಇನ್ನೂ ಆಸ್ಪತ್ರೆಯಲ್ಲಿ ಇದಿರಾ ?

    ಸಾನ್ವಿಯ ಜೊತೆ ನಿಮ್ಮ ಜೀವನ ಸದಾ ಸುಖಮಯವಾಗಿರಲಿ ಎಂದು ಹಾರೈಸುತ್ತ ,

    ಪುಟ್ಟ ಪುಟ್ಟ ಹೆಜ್ಜೆ ಇಟ್ಟು, ನಗುತ ಬಂದ ಸಾನ್ವಿ ಪುಟ್ಟಿ
    ಅಪ್ಪ- ಅಮ್ಮನ ಮೊಗವ ಮಾಡಿತು ಹೂವಿನ ಬುಟ್ಟಿ!!

    -Mahantesh

    ReplyDelete
  2. ಈ ಜಗತ್ತಿನಲ್ಲಿ ಬೆಳಕು ತುಂಬುತ್ತ ಬರುತ್ತಿರುವ ಸಾನ್ವಿಗೆ ಸುಸ್ವಾಗತ.

    ReplyDelete
  3. ಮಹಾಂತೇಶ್,
    ನಿಮ್ಮ ಪ್ರೀತಿಗೆ ಶರಣು !
    ನಿಮ್ಮ ಕಂದ ಪದ್ಯ ಸೊಗಸಾಗಿದೆ !!

    ಈಗ ಅಮ್ಮ ಮತ್ತು ಸಾನ್ವಿ ಮನೆಗೆ ಬಂದಿದ್ದಾರೆ.

    ಪ್ರೀತಿಯಿಂದ

    ReplyDelete
  4. ಸುನಾಥ್ ಕಾಕಾ,

    ನಿಮ್ಮ ಆಶೀರ್ವಾದ ಹೀಗೆ ಇರಲಿ.

    ಧನ್ಯವಾದಗಳು

    ReplyDelete